ETV Bharat / state

ಕಟೀಲ್​​ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ: ಹರೀಶ್ ಕುಮಾರ್ ತಿರುಗೇಟು - mangalore Harish Kumar news

ನಳಿನ್ ಕುಮಾರ್ ಕಟೀಲ್​​ ಕಾಂಗ್ರೆಸ್ ತಿಥಿ ಪಾರ್ಟಿ ಎಂದಿರುವುದಕ್ಕೆ ಇಂದು ಕಾಂಗ್ರೆಸ್​​ನ ದ.ಕ. ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ತಿರುಗೇಟು ನೀಡಿದ್ದು, ಅವರು ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ ಎಂದಿದ್ದಾರೆ.

Harish Kumar
ಹರೀಶ್ ಕುಮಾರ್ ತಿರುಗೇಟು
author img

By

Published : Jan 18, 2021, 7:01 PM IST

ಮಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್​​ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದು, ಅವರು ತಮ್ಮ ಮಾತು ಹಾಗೂ ನಾಲಿಗೆಯನ್ನು ಹಿಡಿತದಲ್ಲಿಡಲಿ ಎಂದು ಕಾಂಗ್ರೆಸ್​​ನ ದ.ಕ. ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಹೇಳಿದ್ದಾರೆ.

ಕಾಂಗ್ರೆಸ್​​ನ ದ.ಕ. ಜಿಲ್ಲಾಧ್ಯಕ್ಷ ಹರೀಶ್ ಕುಮಾರ್

ನಳಿನ್ ಕುಮಾರ್ ಕಟೀಲ್​​ ಅವರು ಕಾಂಗ್ರೆಸ್ ತಿಥಿ ಪಾರ್ಟಿ ಎಂದಿರುವುದಕ್ಕೆ ಪ್ರತಿಕ್ರಿಯೆ ನೀಡಿದ ಹರೀಶ್ ಕುಮಾರ್, ನಾಲಿಗೆಯನ್ನು ಹಿಡಿತದಲ್ಲಿಟ್ಟುಕೊಳ್ಳದಿದ್ದಕ್ಕೆ ಅವರನ್ನು ಹಾಸ್ಯಗಾರ ಎನ್ನುತ್ತಾರೆ. ಆದ್ದರಿಂದ ಅವರು ತಮ್ಮ ಘನತೆ, ಗೌರವವನ್ನು ಕಾಯ್ದುಕೊಂಡು ಅಧಿಕಾರಕ್ಕೆ ತಕ್ಕಂತೆ ಮಾತನಾಡಲಿ ಎಂದರು.

ನಳಿನ್ ಕುಮಾರ್ ಕಟೀಲ್​​ ಅವರು ಮೂರು ಬಾರಿ ಸಂಸದರಾಗಿ ಈಗ ಬಿಜೆಪಿ ರಾಜ್ಯಾಧ್ಯಕ್ಷರಾಗಿರುವವರು. ಅವರು ಎಷ್ಟು ಎತ್ತರಕ್ಕೆ ಏರಿದ್ದಾರೋ ಮನಸ್ಥಿತಿ ಮಾತ್ರ ಅಷ್ಟೇ ಕೆಳಗಿದೆ. ಅಧಿಕಾರದ ಮದ, ದರ್ಪ, ದುರಂಹಂಕಾರ ನೆತ್ತಿಗೇರಿದೆಯೋ ತಿಳಿದು ಬರುತ್ತಿಲ್ಲ ಎಂದು ಹರೀಶ್ ಕುಮಾರ್ ಹೇಳಿದರು.

ಓದಿ:ಪರವಾನಗಿ ಇಲ್ಲದೆ ಡ್ರೋನ್​ ಬಳಸಿದರೆ ಕ್ರಮ: ಪೊಲೀಸ್ ಇಲಾಖೆ ಎಚ್ಚರಿಕೆ

ದೇಶದ ಅಭಿವೃದ್ಧಿಗೆ ತಮ್ಮದೇ ಕೊಡುಗೆ ನೀಡಿರುವ ಜವಾಹರಲಾಲ್ ನೆಹರು, ಇಂದಿರಾಗಾಂಧಿಯವರ ಜನ್ಮದಿನ, ಪುಣ್ಯತಿಥಿಯನ್ನು ಆಚರಿಸುವುದು ನಮ್ಮ ಕರ್ತವ್ಯ. ಅದನ್ನು ಯಾರೂ ಪ್ರಶ್ನಿಸುವಂತಿಲ್ಲ. ನಳಿನ್ ಕುಮಾರ್ ಕಟೀಲ್​​ ಅವರು ವಾಜಪೇಯಿ ಅವರ ಪುಣ್ಯತಿಥಿ ಆಚರಿಸುತ್ತಾರೋ‌ ತಿಳಿದಿಲ್ಲ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.