ETV Bharat / state

ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದ ನಳೀನ್​​ ಕುಮಾರ್​ ಕಟೀಲ್​ - ನಳೀನ್​​ ಕುಮಾರ್​ ಕಟೀಲ್

ಸರತಿ ಸಾಲಿನಲ್ಲಿ ನಿಂತು ಬಿಜೆಪಿ ರಾಜ್ಯಾಧ್ಷಕ್ಷ ನಳೀನ್​​ ಕುಮಾರ್​ ಕಟೀಲ್​ ಮತದಾನ ಮಾಡಿದರು.

ರಾಜಕೀಯ ನಾಯಕರ ಮತದಾನ
ರಾಜಕೀಯ ನಾಯಕರ ಮತದಾನ
author img

By

Published : May 10, 2023, 10:35 AM IST

ಮಂಗಳೂರು: ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಗೆ ಇಂದು ಮತದಾನ ನಡೆಯುತ್ತಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್​​ ಕುಮಾರ್​ ಕಟೀಲ್ ತಮ್ಮ ಮತ ಚಲಾಯಿಸಿದರು. ನಗರದ ಲೇಡಿಹಿಲ್​ನ ಅಲೋಶಿಯಸ್ ಶಾಲೆಯಲ್ಲಿ ಸರತಿ ಸಾಲಿನಲ್ಲಿ ನಿಂತು 9.00 ಗಂಟೆಗೆ ಮತ ಚಲಾವಣೆ ಮಾಡಿದರು. ಮತ ಚಲಾಯಿಸಿದ ಬಳಿಕ ಮಾತನಾಡಿದ ಅವರು ಇದು ಪ್ರಜಾಪ್ರಭುತ್ವದ ಹಕ್ಕು. ಪ್ರತಿಯೊಬ್ಬ ನಾಗರಿಕನು ಮತದಾನ ಮಾಡುವುದು ಜವಾಬ್ದಾರಿ ಮತ್ತು ಹಕ್ಕು. ಭಾರತದಲ್ಲಿ ಇದು ಯುದ್ದವಲ್ಲ, ಉತ್ಸವ. ಈ ಉತ್ಸವದಲ್ಲಿ ನಾನು ಭಾಗಿಯಾಗಿದ್ದೇನೆ. ರಾಜ್ಯದಲ್ಲಿ ಅಪೂರ್ವ ಬದಲಾವಣೆ ಕಾಣುತ್ತಿದ್ದೇವೆ. ಜನ ಸಂತೋಷ ಪೂರ್ವಕವಾಗಿ ಮತದಾನವನ್ನು ಮಾಡುತ್ತಿದ್ದಾರೆ ಎಂದರು.

ಬಿ.ಜನಾರ್ದನ ಪೂಜಾರಿ ಮತಚಲಾವಣೆ, ಬಂಟ್ವಾಳ: ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಂಟ್ವಾಳ ಕ್ಷೇತ್ರದಲ್ಲಿ ಮತದಾನ ಬಿರುಸಿನಿಂದ ಸಾಗುತ್ತಿದ್ದು, ಕೇಂದ್ರ ಮಾಜಿ ಸಚಿವ 86ರ ಹರೆಯದ ಬಿ.ಜನಾರ್ದನ ಪೂಜಾರಿ ತಮ್ಮ ಕುಟುಂಬದೊಂದಿಗೆ ಬಂಟ್ವಾಳ ಎಸ್.ವಿ.ಎಸ್. ಶಾಲೆಯಲ್ಲಿರುವ ಮತಗಟ್ಟೆಗೆ ಆಗಮಿಸಿ ತಮ್ಮ ಹಕ್ಕು ಚಲಾಯಿಸಿದರು.

ಕಾಂಗ್ರೆಸ್ ಅಭ್ಯರ್ಥಿ ಜೆ ಆರ್ ಲೋಬೊ ಮತದಾನ: ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್​ ಅಭ್ಯರ್ಥಿ ಜೆ. ಆರ್​ ಲೋಬೊ ಇಂದು ಮುಂಜಾನೆ ಮತ ಚಲಾವಣೆ ಮಾಡಿದರು. ನಗರದ ಬೆಂದೂರಿನ ಸೈಂಟ್ ಸೆಬಾಸ್ಟಿಯನ್ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅವರು ಮತ ಚಲಾಯಿಸಿದರು. ಮುಂಜಾನೆ ಏಳು ಗಂಟೆಗೆ ಅವರ ಪತ್ನಿ ಮತ್ತು ಪುತ್ರನ ಜೊತೆ ಆಗಮಿಸಿ ಮತ ಚಲಾಯಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಮಂಗಳೂರಿನಲ್ಲಿ ಚುನಾವಣೆ ಪ್ರಕ್ರಿಯೆ ಸುಸೂತ್ರವಾಗಿ ನಡೆದಿದೆ. ಅಧಿಕಾರಿಗಳು ಉತ್ತಮ ರೀತಿಯ ವ್ಯವಸ್ಥೆ ಮಾಡಿದ್ದಾರೆ. ಎಲ್ಲರೂ ಉತ್ಸಾಹದಿಂದ ಮತ ಚಲಾವಣೆ ಮಾಡಬೇಕು ಎಂದು ವಿನಂತಿಸಿದರು.

ಇದನ್ನೂ ಓದಿ: ಮದುವೆಗೂ ಮುನ್ನ ಮತ: ಚಿಕ್ಕಮಗಳೂರಿನಲ್ಲಿ ಕರ್ತವ್ಯ ಪ್ರಜ್ಞೆ ಮೆರೆದ ವಧು!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.