ETV Bharat / state

ಮಂಗಳೂರು: ಭೂಗತ ಪಾತಕಿಗಳೊಂದಿಗೆ ನಂಟು ಹೊಂದಿದ್ದ ಮೋಸ್ಟ್ ವಾಂಟೆಡ್ ಆರೋಪಿ ಅರೆಸ್ಟ್​ - ಭೂಗತ ಪಾತಕಿಗಳ ನಂಟು ಹೊಂದಿದ್ದ ಆರೋಪಿ ಬಂಧನ

ಆರೋಪಿ ಪ್ರವೀಣ್ ಕುಮಾರ್ ಭೂಗತ ಪಾತಕಿಗಳೊಂದಿಗೆ ನಂಟು ಹೊಂದಿದ್ದು, ಮುಂಬೈ ಪೊಲೀಸರ ವಾಂಟೆಡ್ ಲಿಸ್ಟ್​​ನಲ್ಲಿದ್ದ. ಅಲ್ಲದೆ ಈತನ ಮೇಲೆ ಹಫ್ತಾ ವಸೂಲಿ ಪ್ರಕರಣ ಕೂಡ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಪ್ರವೀಣ ಕುಮಾರ್​ನನ್ನು ಬಂಧಿಸಿದ್ದಾರೆ.

most-wanted-accused-praveen-kumar-arrested
ಭೂಗತ ಪಾತಕಿಗಳ ನಂಟು, ಮೂಡುಬಿದಿರೆಯಲ್ಲಿ ವಾಂಟೆಡ್ ಲಿಸ್ಟ್​ನಲ್ಲಿದ್ದ ಆರೋಪಿ ಬಂಧನ
author img

By

Published : Nov 1, 2021, 7:51 AM IST

ಮಂಗಳೂರು: ಭೂಗತ ಪಾತಕಿಗಳ ಸಂಪರ್ಕದಲ್ಲಿದ್ದು, ಆ ಬಳಿಕ ತಲೆಮರೆಸಿಕೊಂಡಿದ್ದ ಮೂಡುಬಿದಿರೆ ಪೊಲೀಸ್ ಠಾಣಾ ವ್ಯಾಪ್ತಿಯ ಕೊಟೆಬಾಗಿಲು ನಿವಾಸಿಯನ್ನು ಪೊಲೀಸರು ಭಾನುವಾರ ರಾತ್ರಿ ಬಂಧಿಸಿದ್ದಾರೆ. ಕೊಟೆಬಾಗಿಲು ನಿವಾಸಿ ಪ್ರವೀಣ್ ಕುಮಾರ್ (46) ಬಂಧಿತ ಆರೋಪಿ.

ಪ್ರವೀಣ್ ಕುಮಾರ್​​ಗೆ ಭೂಗತ ಪಾತಕಿಗಳೊಂದಿಗೆ ನಂಟು ಇದ್ದು, ಈತ ತನ್ನೊಂದಿಗೆ ಮಾರಕಾಸ್ತ್ರಗಳನ್ನು ಇಟ್ಟುಕೊಂಡಿರುವ ಸಾಧ್ಯತೆಗಳಿವೆ ಎಂಬ ಮಾಹಿತಿಯಿತ್ತು. ಈ ಹಿನ್ನೆಲೆಯಲ್ಲಿ ಭಾನುವಾರ ಆರೋಪಿ ಮನೆಗೆ ಬಂದಿರುವ ಮಾಹಿತಿ ಲಭ್ಯವಾಗಿದೆ. ಈ ಹಿನ್ನೆಲೆಯಲ್ಲಿ ಆತನನ್ನು ವಿಚಾರಣೆಗಾಗಿ ಠಾಣೆಗೆ ಕರೆತರುವ ಸಲುವಾಗಿ ಇಬ್ಬರು ಪೊಲೀಸ್ ಸಿಬ್ಬಂದಿಯನ್ನು ಕಳುಹಿಸಲಾಗಿತ್ತು.

ಆದರೆ ಮನೆಯಯ ಬಳಿ ಬಂದ ಸಮವಸ್ತ್ರ ಧರಿಸಿರುವ ಪೊಲೀಸ್ ಸಿಬ್ಬಂದಿಯನ್ನು ನೋಡಿ ಆರೋಪಿ ಓಡಿಹೋಗಲು ಪ್ರಯತ್ನಿಸಿದ್ದಾನೆ. ಆಗ ಆತನನ್ನು ಹಿಡಿಯಲು ಹೋದಾಗ ಆರೋಪಿಯು ಸಿಬ್ಬಂದಿಯ ಕರ್ತವ್ಯಕ್ಕೆ ಅಡ್ಡಿಪಡಿಸಿ ತಪ್ಪಿಸಿಕೊಳ್ಳುವ ಉದ್ದೇಶದಿಂದ‌ ಅವರನ್ನು ತಳ್ಳಿ ನೆಲಕ್ಕೆ ಬೀಳಿಸಿದ್ದ. ಶತಪ್ರಯತ್ನದ ಬಳಿಕ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

Most wanted accused praveen kumar arrested
ಆರೋಪಿ ಪ್ರವೀಣ್ ಕುಮಾರ್

ಆರೋಪಿ ಪ್ರವೀಣ್ ಕುಮಾರ್ ಭೂಗತ ಪಾತಕಿಗಳೊಂದಿಗೆ ನಂಟು ಹೊಂದಿದ್ದು, ಮುಂಬೈ ಪೊಲೀಸರ ವಾಂಟೆಡ್ ಲಿಸ್ಟ್​​ನಲ್ಲಿದ್ದ. ಅಲ್ಲದೆ ಈತನ ಮೇಲೆ ಹಫ್ತಾ ವಸೂಲಿ ಪ್ರಕರಣ ಕೂಡ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಪ್ರವೀಣ್​ ಕುಮಾರ್​ನನ್ನು ಬಂಧಿಸಿದ್ದಾರೆ. ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.

ಇದನ್ನೂ ಓದಿ: ಅಪ್ರಾಪ್ತ ಬಾಲಕನಿಗೆ ಕಿರುಕುಳ ನೀಡಿದ ಆರೋಪ : ವಿಶೇಷ ನ್ಯಾಯಾಧೀಶರು, ಇಬ್ಬರು ಸಹಚರರ ವಿರುದ್ಧ ದೂರು ದಾಖಲು

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.