ETV Bharat / state

ಇಂದು ಆಗದ ಚಂದ್ರ ದರ್ಶನ: ಕರಾವಳಿಯಲ್ಲಿ ಮಂಗಳವಾರ ಈದುಲ್​​ ಫಿತರ್​

ಇಂದು ಚಂದ್ರ ದರ್ಶನವಾಗದ ಕಾರಣ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಮಂಗಳವಾರ ಈದ್​ ಉಲ್ ಫಿತರ್ ಆಚರಣೆ ಮಾಡಲಾಗುತ್ತಿದೆ.

moon-not-sighted-eid-to-be-celebrated-on-may-3
ಕರಾವಳಿಯಲ್ಲಿ ಮಂಗಳವಾರ ಈದ್​​ ಉಲ್ ಫಿತರ್​
author img

By

Published : May 1, 2022, 9:37 PM IST

ಮಂಗಳೂರು: ಇಂದು ಚಂದ್ರ ದರ್ಶನವಾಗದ ಕಾರಣ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಮಂಗಳವಾರ ಈದ್​ ಉಲ್ ಫಿತರ್ ಆಚರಿಸಲು ನಿರ್ಧರಿಸಲಾಗಿದೆ. ಮಂಗಳವಾರ ರಾತ್ರಿ ಪ್ರಥಮ ಚಂದ್ರದರ್ಶನ ಆಗಲಿರುವುದರಿಂದ ದ.ಕ. ಮತ್ತು ಉಡುಪಿ ಜಿಲ್ಲೆಗಳಲ್ಲಿ ಮೇ 3 ರಂದು ಈದ್ ಉಲ್ ಫಿತರ್ ಆಚರಿಸಲಾಗುತ್ತದೆ.

ಇಂದು ರಾತ್ರಿ ಶವ್ವಾಲ್‌ನ ಪ್ರಥಮ ಚಂದ್ರ ದರ್ಶನವಾಗದ ಕಾರಣ ಸೋಮವಾರ 30ನೇ ರಂಜಾನ್ ಉಪವಾಸ ಪೂರ್ತಿಗೊಳಿಸಲು ಮತ್ತು ಮಂಗಳವಾರದಂದು ಈದುಲ್ ಫಿತ್ರ್ ಆಚರಿಸಲು ದ.ಕ.ಖಾಝಿ ಅಲ್‌ಹಾಜ್ ತ್ವಾಕ ಅಹ್ಮದ್ ಮುಸ್ಲಿಯಾರ್ ಮತ್ತು ಉಡುಪಿ ಸಂಯುಕ್ತ ಖಾಝಿ ಝೈನುಲ್ ಉಲಮಾ ಅಲ್‌ಹಾಜ್ ಅಬ್ದುಲ್ ಹಮೀದ್ ಮುಸ್ಲಿಯಾರ್ (ಮಾಣಿ ಉಸ್ತಾದ್) ಕರೆ ನೀಡಿದ್ದಾರೆ.

ಅಲ್ಲದೆ, ದೆಹಲಿ, ಯುಪಿ, ಬಿಹಾರ, ತೆಲಂಗಾಣ, ಆಂಧ್ರಪ್ರದೇಶ ರಾಜ್ಯಗಳ ಹಿಲಾಲ್ ಸಮಿತಿಗಳು ಈದ್-ಉಲ್-ಫಿತರ್ ಅನ್ನು ಮೇ 3ರಂದು ಆಚರಿಸಲಾಗುವುದು ಎಂದು ದೃಢಪಡಿಸಿವೆ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿಯೂ ಚಂದ್ರನ ದರ್ಶನವಾಗಿಲ್ಲ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಈದ್-ಅಲ್-ಫಿತರ್ 2022: ಕಾಣದ ಚಂದ್ರ, ಮೇ 3 ರಂದು ರಂಜಾನ್​ ಆಚರಣೆಗೆ ನಿರ್ಧಾರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.