ETV Bharat / state

ಕದ್ದ ಬೈಕ್​ಗಳನ್ನು ಗುಜರಿಗೆ ಕೊಂಡೊಯ್ಯುತ್ತಿದ್ದ ಖದೀಮರು ಪೊಲೀಸರ ವಶಕ್ಕೆ - ಮಂಗಳೂರು ಲೇಟೆಸ್ಟ್​ ನ್ಯೂಸ್

ತಕ್ಷಣ ಪೊಲೀಸರು ಇಬ್ಬರನ್ನೂ ವಶಕ್ಕೆ ಪಡೆದು ವಿಚಾರಿಸಿದಾಗ ಕಳ್ಳತನ ಮಾಡಿರುವ ಬೈಕ್​ ಅನ್ನು ಗುಜರಿಗೆ ಹಾಕಲು ತೆಗೆದುಕೊಂಡು ಹೋಗುತ್ತಿರುವುದಾಗಿ ಒಪ್ಪಿಕೊಂಡಿದ್ದಾರೆ. ಈ ಬಗ್ಗೆ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..

Moodubidir police station
ಮೂಡಬಿದಿರೆ ಪೊಲೀಸ್​ ಠಾಣೆ
author img

By

Published : Sep 10, 2021, 10:48 PM IST

ಮಂಗಳೂರು : ಹ್ಯಾಂಡ್ ಲಾಕ್ ಮಾಡದೆ ನಿಲ್ಲಿಸಲಾಗಿದ್ದ ಬೈಕ್​ಗಳನ್ನು ಕದ್ದು ಗುಜರಿಗೆ ಮಾರಾಟ ಮಾಡಲು ಕೊಂಡೊಯ್ಯುತ್ತಿದ್ದ ವೇಳೆ ಖದೀಮರಿಬ್ಬರು ಪೊಲೀಸರ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಘಟನೆ ಮೂಡಬಿದಿರೆಯಲ್ಲಿ ನಡೆದಿದೆ‌.

ಶಿಯಾಬುದ್ದಿನ್ ಯಾನೆ ಶಿಯಾಬ್ ಹಾಗೂ ನಿಸಾರ್ ಬಂಧಿತ ಆರೋಪಿಗಳು. ಮೂಡುಬಿದಿರೆ ಪೊಲೀಸ್ ಠಾಣೆಯ ಹೆಡ್​​ಕಾನ್​​​ಸ್ಟೇಬಲ್ ಕರ್ತವ್ಯದಲ್ಲಿದ್ದರು.

ಈ ವೇಳೆ ಮೂಡುಬಿದಿರೆ ಬಳ್ಳಾಲ್ ಹೋಟೆಲ್ ಬಳಿ ಖದೀಮರು ದ್ವಿಚಕ್ರ ವಾಹನವೊಂದನ್ನು ತಳ್ಳಿಕೊಂಡು ವಿದ್ಯಾಗಿರಿ ಕಡೆಗೆ ಹೋಗುತ್ತಿದ್ದರು. ಅನುಮಾನಗೊಂಡು ಪೊಲೀಸರು ತಡೆಯಲು ಮುಂದಾಗಿದ್ದರು. ಈ ವೇಳೆ ಆರೋಪಿಗಳು ಬೈಕ್ ಬಿಟ್ಟು ಓಡಲು ಯತ್ನಿಸಿದ್ದರು.

ತಕ್ಷಣ ಪೊಲೀಸರು ಇಬ್ಬರನ್ನೂ ವಶಕ್ಕೆ ಪಡೆದು ವಿಚಾರಿಸಿದಾಗ ಕಳ್ಳತನ ಮಾಡಿರುವ ಬೈಕ್​ ಅನ್ನು ಗುಜರಿಗೆ ಹಾಕಲು ತೆಗೆದುಕೊಂಡು ಹೋಗುತ್ತಿರುವುದಾಗಿ ಒಪ್ಪಿಕೊಂಡಿದ್ದಾರೆ. ಈ ಬಗ್ಗೆ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಓದಿ: ನನ್ನ ಜತೆ ಖರ್ಗೆ, ಹೆಚ್ ಡಿಕೆಯೊಂದಿಗೆ ಸಿಎಂ ಬೊಮ್ಮಾಯಿ ಮಾತಾಡಿದಾರೆ.. ಅಡ್ಡಗೋಡೆ ಮೇಲೆ ಹೆಚ್​ಡಿಡಿ ದೀಪ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.