ETV Bharat / state

ಸಂಕಟದಲ್ಲಿ ಸಂಜೀವಿನಿಯಾದ ಸೋಶಿಯಲ್​ ಮೀಡಿಯಾ​: ಶಿಶುವಿಗೆ ಎದೆಹಾಲು ಕೊರತೆ ನೀಗಿಸಿದ ಅಮ್ಮಂದಿರು!

author img

By

Published : May 19, 2022, 1:09 PM IST

Updated : May 19, 2022, 2:47 PM IST

ಮಂಗಳೂರಿನಲ್ಲಿ ಎದೆಹಾಲಿನ ಕೊರತೆಯಿಂದ ಪೋಷಕರು ತೀವ್ರ ಆತಂಕಕ್ಕೀಡಾಗಿದ್ದರು. ಲೇಡಿಗೋಷನ್ ಆಸ್ಪತ್ರೆಯ ಮಿಲ್ಕ್ ಬ್ಯಾಂಕ್ ಸಂಪರ್ಕಿಸಿದರೂ ಪ್ರಯೋಜನವಾಗಿರಲಿಲ್ಲ. ಕೊನೆಗೆ ಸಾಮಾಜಿಕ ಜಾಲತಾಣದ ಮೂಲಕ ವಿನಂತಿ ಮಾಡಿದ್ದು ಫಲ ನೀಡಿತು.

moms rushed to help with-breast-milk for newborn baby
ನವಜಾತ ಶಿಶುವಿಗೆ ಎದೆಹಾಲಿನ ಕೊರತೆ ನೀಗಿಸಿದ ಅಮ್ಮಂದಿರು

ಮಂಗಳೂರು: ಅವಧಿಪೂರ್ವ ಜನಿಸಿದ ಮಗುವಿಗೆ ಎದೆಹಾಲಿನ ಕೊರತೆಯಿಂದ ಪೋಷಕರು ಸಾಮಾಜಿಕ ಜಾಲತಾಣದಲ್ಲಿ ಹಾಕಿದ ಮನವಿಗೆ ಸ್ಪಂದಿಸಿದ ಅಮ್ಮಂದಿರು ಮಗುವಿನ ಎದೆಹಾಲಿನ ಕೊರತೆಯನ್ನು ನೀಗಿಸಿದರು. 24 ಗಂಟೆಗಳಲ್ಲಿ 25 ಕರೆಗಳು ಬಂದು ಎದೆಹಾಲು ಹಂಚಿಕೊಳ್ಳುವ ಭರವಸೆ ನೀಡಿದ್ಧಾರೆ.

ಮಂಗಳೂರಿನ ಕಾರ್ ಸ್ಟ್ರೀಟ್​​ನ ಗರ್ಭಿಣಿಯೊಬ್ಬರು ಎರಡು ತಿಂಗಳ ಹಿಂದೆ ಮಗುವಿಗೆ ಜನ್ಮ ನೀಡಿದ್ದರು. ಇವರು ಗರ್ಭಿಣಿಯಾಗಿದ್ದಾಗ ಪ್ರಿಕ್ಲಾಂಪ್ಸಿಯ ಎಂಬ ಆರೋಗ್ಯ ಸಮಸ್ಯೆ ಉಂಟಾಗಿತ್ತು. ಇದರಿಂದಾಗಿ ತಾಯಿ ಜೊತೆಗೆ ಮಗುವಿಗೂ ಪ್ರಾಣಾಪಾಯ ಇತ್ತು. ಆದ ಕಾರಣ ಏಳು ತಿಂಗಳ ಗರ್ಭಿಣಿಗೆ ಶಸ್ತ್ರಚಿಕಿತ್ಸೆ ನಡೆಸಿ ಮಗುವನ್ನು ಹೊರತೆಗೆಯಲಾಗಿತ್ತು.

ಮಗು ಜನಿಸಿದ ಸಂದರ್ಭದಲ್ಲಿ 900 ಗ್ರಾಂ ತೂಗುತ್ತಿತ್ತು. ಎರಡು ದಿನಗಳ ಹಿಂದೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದಾಗ ಮಗುವಿನ ತೂಕ 1.4 ಕೆಜಿ ಆಗಿದೆ. ಅವಧಿಪೂರ್ವ ಹೆರಿಗೆಯಿಂದ ತಾಯಿಗೆ ಎದೆಹಾಲಿನ ಕೊರತೆ ಕಾಣಿಸಿಕೊಂಡಿದ್ದರೆ, ಹಸುಗೂಸಿಗೆ ಎದೆಹಾಲು ಅವಶ್ಯಕವಾಗಿತ್ತು. ಮಗುವಿಗೆ ಪ್ರತಿ ಎರಡು ಗಂಟೆಗೊಮ್ಮೆ 30 ಮಿಲಿ ಲೀಟರ್ ಹಾಲು ಕುಡಿಸಬೇಕಿತ್ತು.

ನೆರವಿಗೆ ಬಂದ ಸಾಮಾಜಿಕ ಜಾಲತಾಣ: ಮಗು ಆರೋಗ್ಯವಾಗಿರಲು ಎದೆಹಾಲು ಅವಶ್ಯಕವಾಗಿದ್ದು, ಪೋಷಕರು ಆತಂಕಕ್ಕೀಡಾಗಿದ್ದರು. ಲೇಡಿಗೋಷನ್ ಆಸ್ಪತ್ರೆಯ ಮಿಲ್ಕ್ ಬ್ಯಾಂಕ್ ಸಂಪರ್ಕಿಸಿದರೂ ಪ್ರಯೋಜನವಾಗಿರಲಿಲ್ಲ. ಕೊನೆಗೆ ಸಾಮಾಜಿಕ ಜಾಲತಾಣದ ಮೂಲಕ ವಿನಂತಿ ಮಾಡಿದ್ದಾರೆ. ಇದನ್ನು ಮಂಗಳೂರು ಮೇರಿ ಜಾನ್ ಫೇಸ್‌ ಬುಕ್‌ ಪೇಜ್ ಹಂಚಿಕೊಂಡಿತ್ತು.

ಈ ಮನವಿ ಗಮನಿಸಿದ ಅಮ್ಮಂದಿರು ತಕ್ಷಣ ಸ್ಪಂದಿಸಿದ್ದಾರೆ. ಪೋಸ್ಟ್ ಮಾಡಿದ 24 ಗಂಟೆಗಳಲ್ಲಿ 25 ಕರೆಗಳು ಬಂದಿದ್ದು ಎದೆಹಾಲು ಹಂಚಿಕೊಳ್ಳುವ ಭರವಸೆ ನೀಡಿದ್ದರು. ಆರಂಭದಲ್ಲಿ ಎದೆಹಾಲನ್ನು ಪುತ್ತೂರು, ಕಾರ್ಕಳದ ಅಮ್ಮಂದಿರಿಂದ ಪಡೆದುಕೊಂಡರೆ, ಇದೀಗ ಮಂಗಳೂರಿನ ಐವರು ಅಮ್ಮಂದಿರೇ ಎದೆಹಾಲು ಸಂಗ್ರಹಿಸಿ ನೀಡುತ್ತಿದ್ದಾರೆ. ಹೀಗೆ, ಸಾಮಾಜಿಕ ಜಾಲತಾಣದಲ್ಲಿ ಹಾಕಿದ ಕೋರಿಕೆಯಿಂದ ಎದೆಹಾಲಿನ ಕೊರತೆ ಎದುರಿಸುತ್ತಿದ್ದ ಮಗುವಿಗೆ ಸ್ತನ್ಯಪಾನ ಸಿಕ್ಕಿದಂತಾಗಿದೆ.

ಇದನ್ನೂ ಓದಿ: ನಟಿ ಚೇತನಾ ರಾಜ್ ಸಾವು: ಡಾ.ಶೆಟ್ಟಿ ಕಾಸ್ಮೆಟಿಕ್ ಸೆಂಟರ್​ಗೆ ಆರೋಗ್ಯ ಇಲಾಖೆ ನೋಟಿಸ್‌

Last Updated : May 19, 2022, 2:47 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.