ETV Bharat / state

ತೊಕ್ಕೊಟ್ಟುವಿನಲ್ಲಿ ಮಾದರಿ ರಸ್ತೆ ನಿರ್ಮಾಣಕ್ಕೆ ಶಾಸಕ ಯು ಟಿ ಖಾದರ್ ಶಿಲಾನ್ಯಾಸ..

ಈ ಪ್ರದೇಶವನ್ನು ವ್ಯಾಪಾರ ಕೇಂದ್ರವಾಗಿ ಪರಿವರ್ತಿಸುವ ಉದ್ದೇಶದಿಂದ ರಸ್ತೆ ನಿರ್ಮಿಸಲಾಗುತ್ತಿದೆ. ಸ್ಥಳದಲ್ಲಿ ಅಂಗಡಿಗಳ ವ್ಯವಸ್ಥೆಯನ್ನು ಕಲ್ಪಿಸಿ, ಜನಸಾಮಾನ್ಯರಿಗೆ ಅನುಕೂಲವಾಗಲು ಸಹಕಾರ ಮಾಡಲಾಗುವುದು ಎಂದರು.

ಶಾಸಕ ಯು.ಟಿ.ಖಾದರ್ ಶಿಲಾನ್ಯಾಸ
ಶಾಸಕ ಯು.ಟಿ.ಖಾದರ್ ಶಿಲಾನ್ಯಾಸ
author img

By

Published : Jun 9, 2020, 5:56 PM IST

ದಕ್ಷಿಣಕನ್ನಡ : ಮಂಗಳೂರು ನಂತರ ಅತ್ಯಂತ ದೊಡ್ಡ ಅಭಿವೃದ್ಧಿಯ ಪ್ರದೇಶ ತೊಕ್ಕೊಟ್ಟು. ಇಲ್ಲಿ ಖಾಸಗಿಯವರ ಸಹಕಾರ ಪಡೆದು ಮಾದರಿ ರಸ್ತೆ ರೂಪಿಸಲು ಮುಂದಾಗಿದ್ದೇವೆ. ಇದಕ್ಕಾಗಿ ಸ್ಥಳೀಯರ ಸಹಕಾರ ಅಗತ್ಯ ಎಂದು ಶಾಸಕ ಯು ಟಿ ಖಾದರ್ ಹೇಳಿದರು.

ತೊಕ್ಕೊಟ್ಟು ಜಂಕ್ಷನ್ ಬಳಿ ₹36 ಲಕ್ಷ ಅನುದಾನದಲ್ಲಿ ನಿರ್ಮಾಣವಾಗಲಿರುವ ಮಾದರಿ ರಸ್ತೆಗೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಅವರು, ಕಾಂಕ್ರೀಟ್‌ ರಸ್ತೆಯು ಒಳಚರಂಡಿ, ಕಾಂಪೌಂಡ್ ವಾಲ್, ದಾರಿದೀಪ ಹೊಂದಲಿದೆ. ಈ ಪ್ರದೇಶವನ್ನು ವ್ಯಾಪಾರ ಕೇಂದ್ರವಾಗಿ ಪರಿವರ್ತಿಸುವ ಉದ್ದೇಶದಿಂದ ರಸ್ತೆ ನಿರ್ಮಿಸಲಾಗುತ್ತಿದೆ. ಸ್ಥಳದಲ್ಲಿ ಅಂಗಡಿಗಳ ವ್ಯವಸ್ಥೆಯನ್ನು ಕಲ್ಪಿಸಿ, ಜನಸಾಮಾನ್ಯರಿಗೆ ಅನುಕೂಲವಾಗಲು ಸಹಕಾರ ಮಾಡಲಾಗುವುದು ಎಂದರು.

ರಸ್ತೆ ಕಾಮಗಾರಿಗೆ ಶಾಸಕ ಯು ಟಿ ಖಾದರ್ ಶಿಲಾನ್ಯಾಸ..

ಮತ್ತೊಮ್ಮೆ ಲಾಕ್‍ಡೌನ್​ ಸಂಭವ : ಜಿಲ್ಲೆಯಲ್ಲಿ ರೋಗ ಜಾಸ್ತಿಯಾಗುತ್ತಿದೆ. ಜನಜಾಗೃತಿ ಕಡಿಮೆಯಾಗಿದೆ. ಮತ್ತೊಮ್ಮೆ ಲಾಕ್​ಡೌನ್ ಬರುವ ಪರಿಸ್ಥಿತಿ ಎದುರಾಗಬಹುದು. ಹೊರರಾಜ್ಯದಿಂದ ಬಂದವರು ನೇರ ಮನೆಗೆ ಹೋಗುವಂತೆ ಮಾಡಿದ್ದರಿಂದ ಕಷ್ಟವಾಗಿದೆ. ಗ್ರಾಮಕ್ಕೆ ಬರುವವರಿದ್ದರೆ ಅವರ ಹೆಸರು ಪಡೆದುಕೊಂಡು ಬೆಳ್ಮ ಗ್ರಾಪಂ ತೆರಳಿ ಸ್ಥಳ ನಿಗದಿ ಮಾಡಿಸಿ. ನಂತರದ 7 ದಿನಗಳನ್ನು ಮನೆಯಲ್ಲಿ ಕಳೆಯಿರಿ. ಮೊದಲ 7 ದಿನಗಳವರೆಗೂ ವೈರಸ್ ಭಾರಿ ಅಪಾಯಕಾರಿ, ಮನೆಯಲ್ಲಿದ್ದುಕೊಂಡೇ ಜಾಗೃತೆವಹಿಸಿ ಎಂದರು.

ಗಡಿನಾಡು ಸಂಘಟನೆಗಳಿಗೆ ಧ್ವನಿಯೇ ಇಲ್ಲವಾಗಿದೆ: ದ.ಕ ಜಿಲ್ಲಾಧಿಕಾರಿ, ಉಸ್ತುವಾರಿ ಸಚಿವರು ಹಾಗೂ ಸಂಸದರ ಜತೆಗೆ ಮಾತನಾಡಿದ್ದೇನೆ. ಕಾಸರಗೋಡು-ಮಂಗಳೂರು ಭಾವನಾತ್ಮಕ ಸಂಬಂಧ ಇರಿಸಿಕೊಂಡಿರುವ ಪ್ರದೇಶ. ದೇಶದುದ್ದಕ್ಕೂ ಗಡಿಭಾಗದಲ್ಲಿ ನಿಕಟ ಸಂಪರ್ಕ ಇರುವ ಪ್ರದೇಶಗಳಿವೆ. ಗಡಿನಾಡ ಕನ್ನಡಿಗರು ಕಷ್ಟದಲ್ಲಿರುವ ಸಂದರ್ಭದಲ್ಲಿ ಗಡಿನಾಡು ಹೆಸರಿನಲ್ಲಿರುವ ಸಂಘಟನೆಗಳಿಗೆ ಧ್ವನಿಯೇ ಇಲ್ಲದಂತಾಗಿದೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.