ETV Bharat / state

ಬಂಟ್ವಾಳದಲ್ಲಿ ಮೊಬೈಲ್ ಫೀವರ್ ಕ್ಲಿನಿಕ್​​​ಗೆ ಚಾಲನೆ - ಬಂಟ್ವಾಳದಲ್ಲಿ ಮೊಬೈಲ್ ಫೀವರ್ ಕ್ಲಿನಿಕ್​​​ಗೆ ಚಾಲನೆ

ದಕ್ಷಿಣ ಕನ್ನಡದ ಬಂಟ್ವಾಳದಲ್ಲಿ ಇಂದು ಮೊಬೈಲ್ ಫೀವರ್ ಕ್ಲಿನಿಕ್ ಆರಂಭವಾಗಿದೆ. ಸಾರ್ವಜನಿಕರು ಈ ಮೊಬೈಲ್ ಕ್ಲಿನಿಕ್​​​​​​​​​ನ ಸದುಪಯೋಗಪಡೆದುಕೊಳ್ಳಬೇಕು ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಾ ಪ್ರಭು ಮನವಿ ಮಾಡಿದ್ದಾರೆ.

mobile fever clinic
ಮೊಬೈಲ್ ಫೀವರ್ ಕ್ಲಿನಿಕ್​​​
author img

By

Published : May 7, 2020, 5:11 PM IST

ಬಂಟ್ವಾಳ (ದಕ್ಷಿಣ ಕನ್ನಡ): ಜಿಲ್ಲಾಡಳಿತ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಸಹಯೋಗದೊಂದಿಗೆ ಕೋವಿಡ್ 19 ಆರೋಗ್ಯ ತಪಾಸಣೆಗಾಗಿ ತಾಲೂಕಿನ ಸಿದ್ಧಕಟ್ಟೆ ಎಂಬಲ್ಲಿ ಮಂಗಳವಾರ ಮೊಬೈಲ್ ಫೀವರ್ ಕ್ಲಿನಿಕ್​​​​​​​​ಗೆ ಚಾಲನೆ ನೀಡಲಾಯಿತು.

ಬಂಟ್ವಾಳ ತಾಲೂಕಿನಲ್ಲಿ ಹೆಚ್ಚು ಜನಸಂದಣಿ ಇರುವ ಪ್ರದೇಶಗಳಲ್ಲಿ ಸರ್ಕಾರಿ ವೈದ್ಯರು ಲಭ್ಯವಿರದ ಕಾರಣ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಸಂಚರಿಸಿ ಮೊಬೈಲ್ ಫೀವರ್ ಕ್ಲಿನಿಕ್​​​​​​​​​ ಆರೋಗ್ಯ ಸೇವೆಯನ್ನು ನೀಡಲಿದೆ. ಈ ಸಂದರ್ಭ ಡಾ. ಹೇಮಪ್ರಭಾ, ಡಾ. ಇರ್ಫಾನಾ, ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ಹಾಗೂ ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು. ಮೊದಲ ದಿನವೇ ಸುಮಾರು 20 ಮಂದಿ ಇದರ ಪ್ರಯೋಜನ ಪಡೆದರು. ಪ್ರತಿ ಮಂಗಳವಾರ ಬೆಳಗ್ಗೆ 10 ರಿಂದ 12 ವರೆಗೆ ಸಿದ್ಧಕಟ್ಟೆ ಬಸ್ ನಿಲ್ದಾಣದ ಮುಂಭಾಗ, ಮಧ್ಯಾಹ್ನ 2 ರಿಂದ 4 ವರೆಗೆ ಉಳಿ ಗ್ರಾಮ ಪಂಚಾಯ್ತಿ ಮುಂಭಾಗ ಮೊಬೈಲ್ ಫೀವರ್ ಕ್ಲಿನಿಕ್ ಕಾರ್ಯ ನಿರ್ವಹಿಸಲಿದೆ. ಸಾರ್ವಜನಿಕರು ಈ ಮೊಬೈಲ್ ಫೀವರ್ ಕ್ಲಿನಿಕ್​​ನ ಸದುಪಯೋಗಪಡೆದುಕೊಳ್ಳಬೇಕು ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಾ ಪ್ರಭು ವಿನಂತಿಸಿಕೊಂಡಿದ್ದಾರೆ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.