ETV Bharat / state

ನಾಪತ್ತೆಯಾದ ಯುವತಿ ಕಾಡಿನಲ್ಲಿ ಶವವಾಗಿ ಪತ್ತೆ - ಯುವತಿಯ ಶವ ಕಾಡಿನಲ್ಲಿ ಪತ್ತೆ

ಕೆಲ ದಿನಗಳ ಹಿಂದೆ ನಾಪತ್ತೆಯಾಗಿದ್ದ ಯುವತಿಯ ಮೃತದೇಹವು ಕೊಲೋಡಿ ಸಮೀಪದ ಕಾಡಿನಲ್ಲಿ ಸ್ಥಳೀಯರು ಕಾಡಿಗೆ ಹೋದ ಸಂದರ್ಭದಲ್ಲಿ ದೊರೆತಿದೆ.

missing girl body found in fores
ಯುವತಿಯ ಶವ ಕಾಡಿನಲ್ಲಿ ಪತ್ತೆ
author img

By

Published : Mar 3, 2021, 7:50 PM IST

ದಕ್ಷಿಣ ಕನ್ನಡ: ಕಳೆದ ಕೆಲವು ದಿನಗಳ ಹಿಂದೆ ನಾಪತ್ತೆಯಾಗಿದ್ದ ಯುವತಿಯ ಶವ ಕೊಲೋಡಿ ಸಮೀಪದ ಕಾಡಿನಲ್ಲಿ ಪತ್ತೆಯಾಗಿದೆ.

ಕೊಲೋಡಿ ನಿವಾಸಿ ತೇಜಸ್ವಿನಿ (23) ಎಂಬ ಯುವತಿಯು ಕಳೆದ ಕೆಲವು ದಿನಗಳ ಹಿಂದೆ ಕಾಣೆಯಾಗಿದ್ದಳು. ಈ ಬಗ್ಗೆ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಮೃತದೇಹವು ಕೊಲೋಡಿ ಸಮೀಪದ ಕಾಡಿನಲ್ಲಿ ಸ್ಥಳೀಯರು ಕಾಡಿಗೆ ಹೋದ ಸಂದರ್ಭದಲ್ಲಿ ಪತ್ತೆಯಾಗಿದೆ.

ನೆರಿಯ ಗ್ರಾಮದ ನಿವಾಸಿ ಮಂಜುನಾಥ ಮತ್ತು ಸುಶೀಲಾ.ಕೆ ದಂಪತಿ ಪುತ್ರಿಯಾಗಿರುವ ತೇಜಸ್ವಿನಿ ನಾಲ್ಕು ವರ್ಷಗಳಿಂದ ಉಜಿರೆಯ ಮನೆಯೊಂದರಲ್ಲಿ ಮನೆಕೆಲಸ ಮಾಡಿಕೊಂಡು, ಕಂಪ್ಯೂಟರ್ ಶಿಕ್ಷಣ ಕಲಿಯುತಿದ್ದಳು. ಫೆ.22ರಂದು ಕಂಪ್ಯೂಟರ್ ಕ್ಲಾಸ್ ಮುಗಿಸಿ ನೆರಿಯದಲ್ಲಿರುವ ತನ್ನ ತಾಯಿ ಮನೆಗೆ ಹೋಗಿ ಬರುವುದಾಗಿ ಹೇಳಿ ಹೋದವಳು ಮರಳಿ ಬಾರದೆ, ನಾಪತ್ತೆಯಾಗಿದ್ದಳು.

ತೇಜಸ್ವಿನಿ ಫೆ.22ರಂದು ಕಂಪ್ಯೂಟರ್ ಕ್ಲಾಸ್ ಮುಗಿಸಿ ಮನೆಗೆ ಹೊರಟವಳು ಸಂಜೆ 4 ಗಂಟೆ ಸುಮಾರಿಗೆ ನೆರಿಯ ಗ್ರಾಮದ ಅಣಿಯೂರು ಎಂಬಲ್ಲಿ ಕೋಲೋಡಿ ಕಡೆಗೆ ನಡೆದುಕೊಂಡು ಹೋಗುತ್ತಿದ್ದರಂತೆ. ಈ ವೇಳೆ ತನ್ನ ಅಕ್ಕ ಸುಮಂಗಳರವರಿಗೆ ಸಿಕ್ಕಿದ್ದು, ಆಕೆ ತಮ್ಮೊಟ್ಟಿಗೆ ಜೀಪಿನಲ್ಲಿ ತಂಗಿ ತೇಜಸ್ವಿನಿಯನ್ನು ಕರೆದುಕೊಂಡು ಹೋಗಿ ಮನೆಯ ಹತ್ತಿರ ಇಳಿಸಿ ಬಳಿಕ ಪತಿಯೊಂದಿಗೆ ತಮ್ಮ ಮನೆಗೆ ಹಿಂದಿರುಗಿದ್ದರು.

ಆದರೆ ರಾತ್ರಿ 7 ಗಂಟೆಯವರೆಗೂ ತೇಜಸ್ವಿನಿ ಉಜಿರೆಯ ಮನೆಗೆ ಮರಳಿ ಬಾರದೆ ಇರುವ ಬಗ್ಗೆ ಮನೆಯೊಡತಿ ಯುವತಿಯ ಮನೆಯವರಿಗೆ ಫೋನ್ ಕರೆ ಮೂಲಕ ತಿಳಿಸಿದ್ದರು. ಯುವತಿಯ ಮೊಬೈಲ್ ಕೂಡ ಸ್ವಿಚ್ ಆಫ್ ಆಗಿದ್ದು, ಅತ್ತ ತಾಯಿ ಮನೆಗೂ ಹೋಗದೆ ಇತ್ತ, ಕೆಲಸದ ಮನೆಗೂ ಬಾರದೇ ನಾಪತ್ತೆಯಾಗಿದ್ದರು. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಗೆ ಯುವತಿಯ ಪೋಷಕರು ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.