ಮಂಗಳೂರು: ಕೊರೊನಾ ಲಾಕ್ಡೌನ್ ವೇಳೆ ದೇವಾಲಯಗಳನ್ನು ಮುಚ್ಚಲಾಗಿದೆ. ಆದರೆ, ಸಚಿವ ಅರವಿಂದ ಲಿಂಬಾವಳಿ ಧರ್ಮಸ್ಥಳಕ್ಕೆ ಭೇಟಿ ನೀಡಿ ಮಂಜುನಾಥನ ದರ್ಶನ ಪಡೆದಿದ್ದಾರೆ.
ಕೋವಿಡ್ ನಿಯಾಮವಳಿಯ ಪ್ರಕಾರ ದೇವಳದ ಹೊರಗಿನಿಂದಲೇ ಮಂಜುನಾಥ ದೇವರ ದರ್ಶನವನ್ನು ಸಚಿವರು ಪಡೆದಿದ್ದಾರೆ ಎಂದು ಶಾಸಕ ಹರೀಶ್ ಪೂಂಜಾ ತಿಳಿಸಿದ್ದಾರೆ.
ದೇವರ ದರ್ಶನ ಪಡೆದ ಬಳಿಕ ಲಿಂಬಾವಳಿ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು.