ETV Bharat / state

ನಾಡ ಕಾಡುವ ಹುಲಿ ಕಾಡಿಗಟ್ಟದೇ ಬಿಡೆವು: ಮಾಜಿ ಸಿಎಂಗೆ ಸಚಿವ ಕೋಟ ತಿರುಗೇಟು

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್​ ಕಟೀಲ್​ ವಿರುದ್ಧ ಸರಣಿ ಟ್ವೀಟ್​​ಗಳ ಮೂಲಕ ಟೀಕಾಸ್ತ್ರ ಪ್ರಯೋಗಿಸಿದ್ದ ಸಿದ್ದರಾಮಯ್ಯ ವಿರುದ್ಧ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿರುಗೇಟು ನೀಡಿದ್ದಾರೆ.

Minister Kota Srinivas Poojary Has Reacted About Siddaramaiah Tweet
ಸಚಿವ ಕೋಟ ಶ್ರೀನಿವಾಸ ಪೂಜಾರಿ
author img

By

Published : Oct 23, 2020, 9:27 PM IST

ಮಂಗಳೂರು: ನಾಡು ಕಾಡುವ ಹುಲಿಯನ್ನು ಕಾಡಿಗೆ ಅಟ್ಟದೇ ಬಿಡೆವು ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದ್ದಾರೆ.

ಮಾಜಿ ಸಿಎಂ ಸಿದ್ದರಾಮಯ್ಯ ಅವರು ಆತನೊಬ್ಬ ಕಾಡು ಮನುಷ್ಯ, ಮಂಗಳೂರಿನಲ್ಲಿ ಬೀದಿ ಬೀದಿ ಅಲೆಯುತ್ತಿದ್ದವನನ್ನು ಬಿಜೆಪಿ ರಾಜ್ಯಾಧ್ಯಕ್ಷನನ್ನಾಗಿ ಮಾಡಿದೆ ಎಂದು ನಳಿನ್ ಕುಮಾರ್ ಕಟೀಲ್ ಬಗ್ಗೆ ಟ್ವೀಟ್​ ಮಾಡಿದ್ದರು. ಈ ಟೀಕೆಯ ಟ್ವೀಟ್​ಗೆ ರೀ-ಟ್ವೀಟ್ ಮಾಡಿರುವ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸಿದ್ದರಾಮಯ್ಯಗೆ ತಿರುಗೇಟು ನೀಡಿದ್ದಾರೆ.

Minister Kota Srinivas Poojary Has Reacted About Siddaramaiah Tweet
ಸಚಿವ ಕೋಟ ಶ್ರೀನಿವಾಸ ಪೂಜಾರಿ ಟ್ವೀಟ್

ನಳಿನ್ ಕುಮಾರ್ ಕಟೀಲ್ ಅವರು ಕಾರ್ಯಕರ್ತರ ಸಂತೋಷಕ್ಕೆ ರಾಜ್ಯಾಧ್ಯಕ್ಷರಾಗಿದ್ದಾರೆ. ಬಂಡೆ ಒಡೆಯುವುದು, ಟಗರಿಗೆ ಡಿಕ್ಕಿ ಹೊಡೆಯುವುದು ಸಾಂದರ್ಭಿಕ ಮಾತು. ನೆನಪಿರಲಿ, ಕಳೆದ ಉಪಚುನಾವಣೆಯಲ್ಲಿ 15 ರಲ್ಲಿ 12 ಕ್ಷೇತ್ರ ಗೆದ್ದಿದ್ದು, ಮುಂದೆ ಶಿರಾ ಹಾಗೂ ಆರ್ ಆರ್ ನಗರ ಗೆಲ್ಲುವುದು ಅವರ ನೇತೃತ್ವದಲ್ಲಿಯೇ. ನಾಡಕಾಡುವ ಹುಲಿಯನ್ನು ಕಾಡಿಗಟ್ಟದೇ ಬಿಡೆವು ಎಂದು ಟ್ವೀಟ್ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.