ದಕ್ಷಿಣ ಕನ್ನಡ: ಊರಿಗೆ ಹೋಗಲು ಅರ್ಜಿ ಸಲ್ಲಿಸಲು ಹೋದರೆ ಆನ್ಲೈನ್ನಲ್ಲಿ ನೋಂದಣಿ ಆಗುತ್ತಿಲ್ಲ. ನಮ್ಮನ್ನು ಊರಿಗೆ ಕಳುಹಿಸಿಕೊಡಿ ಎಂದು ಜೋಕಟ್ಟೆಯಲ್ಲಿ ಅಂತರ್ ರಾಜ್ಯ ಕಾರ್ಮಿಕರು ಪ್ರತಿಭಟನೆ ನಡೆಸಿದ್ದಾರೆ.
ಜೋಕಟ್ಟೆಯಲ್ಲಿ ಬಿಹಾರ, ಜಾರ್ಖಂಡ್, ಉತ್ತರ ಪ್ರದೇಶದಿಂದ ಆಗಮಿಸಿ ಕೆಲಸ ಮಾಡುತ್ತಿದ್ದ ಸುಮಾರು 500ಕ್ಕೂ ಅಧಿಕ ಕಾರ್ಮಿಕರು, ನಾವು ಊರಿಗೆ ಹೋಗಲು ಅರ್ಜಿ ಸಲ್ಲಿಸಲು ಸೇವಾ ಸಿಂಧು ಹಿಂತೆಗೆದುಕೊಳ್ಳಲಾಗಿದೆ. ಅದರಲ್ಲಿ ನೋಂದಣಿ ಆಗುತ್ತಿಲ್ಲ. ನಮ್ಮನ್ನು ಊರಿಗೆ ಕಳಿಸಿಕೊಡಿ ಎಂದು ಪ್ರತಿಭಟನೆ ನಡೆಸಿದ್ದಾರೆ.
ಪ್ರತಿಭಟನಾ ಸ್ಥಳಕ್ಕೆ ಶಾಸಕ ಐವನ್ ಡಿಸೋಜ ಬಂದು ಕಾರ್ಮಿಕರೊಂದಿಗೆ ಮಾತನಾಡಿ ಎರಡು ದಿವಸದ ಬಳಿಕ ನೋಂದಣಿ ಕಾರ್ಯ ಕೈಗೊಂಡು ನಂತರ ಅವರನ್ನು ವಿಶೇಷ ರೈಲಿನ ಮೂಲಕ ಊರುಗಳಿಗೆ ಕಳುಹಿಸಿಕೊಡಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ ನಂತರ ಪ್ರತಿಭಟನೆ ಕೈಬಿಟ್ಟಿದ್ದಾರೆ.