ETV Bharat / state

ಹೆಚ್ಚುವರಿ ವಿದ್ಯುತ್ ಬಿಲ್ ಆರೋಪ; ಸಮಾನ ಮನಸ್ಕ ವೇದಿಕೆಯಿಂದ ಮನವಿ - Dakshina kananda news

ಈಗಾಗಲೇ ಲಾಕ್​ಡೌನ್​ನಿಂದ ಜನರು ಸಂಕಷ್ಟ ಎದುರಿಸುತ್ತಿದ್ದು ಇದರ ಬೆನ್ನಲ್ಲೇ ಹಲವು ಮನೆಗಳಿಗೆ ದುಪ್ಪಟ್ಟು ಬಿಲ್ ಬರಲಾರಂಭಿಸಿದೆ ಎನ್ನಲಾಗಿದೆ.

MESCOM
ವಿದ್ಯುತ್ ಬಿಲ್
author img

By

Published : May 10, 2020, 7:46 PM IST

ನೆಲ್ಯಾಡಿ: ಜಿಲ್ಲೆಯ ಹಲವೆಡೆ ಹೆಚ್ಚುವರಿ ಕರೆಂಟ್ ಬಿಲ್ ಬರುತ್ತಿದೆ ಎಂಬ ಆರೋಪವು ವ್ಯಕ್ತವಾಗಿದ್ದು, ಈ ಬಗ್ಗೆ ಮೆಸ್ಕಾಂ ಅಧಿಕಾರಿಗಳು ಕೂಡಲೇ ಗಮನ ಹರಿಸುವಂತೆ ಸಮಾನ ಮನಸ್ಕ ವೇದಿಕೆ ನೆಲ್ಯಾಡಿ ಆಗ್ರಹಿಸಿದೆ.

ಸಮಾನ ಮನಸ್ಕ ವೇದಿಕೆಯಿಂದ ಮನವಿ

ಈಗಾಗಲೇ ಲಾಕ್​ಡೌನ್​ನಿಂದ ಜನರು ಸಂಕಷ್ಟ ಎದುರಿಸುತ್ತಿದ್ದು ಇದರ ಬೆನ್ನಲ್ಲೇ ಹಲವು ಮನೆಗಳಿಗೆ ದುಪ್ಪಟ್ಟು ಬಿಲ್ ಬರಲಾರಂಭಿಸಿದೆ ಎನ್ನಲಾಗಿದೆ. ಹಲವು ಬಿಲ್​ಗಳಲ್ಲಿ ಇತರೇ ಎಂಬ ರೀತಿಯಲ್ಲಿ ದರ ನಮೂದಿಸಲಾಗಿದ್ದು, ಇದು ಯಾವುದು ಎಂಬುದು ತಿಳಿಯದೇ ಗ್ರಾಹಕರು ಕಂಗಾಲಾಗಿದ್ದಾರೆ.

ದ.ಕ ಜಿಲ್ಲೆಯ ಕಡಬ, ಸುಳ್ಯ, ಪುತ್ತೂರು ತಾಲೂಕಿನ ಹಲವು ಗ್ರಾಮದ ಹಲವು ಮನೆಗಳಿಗೆ ದುಪ್ಪಟ್ಟು ವಿದ್ಯುತ್ ಬಿಲ್ ಬರಲಾರಂಭಿಸಿದೆ. ಈ ಬಗ್ಗೆ ಮಾಹಿತಿ ಪಡೆಯಲಾಗುತ್ತಿದ್ದು ನೆಲ್ಯಾಡಿ ಸಂತ ಆಲ್ಫೋನ್ಸ್ ಚರ್ಚ್ ಮತ್ತು ಸಮಾನ ಮನಸ್ಕ ವೇದಿಕೆಯಿಂದ ಬಿಲ್​ಗಳ ಸಂಗ್ರಹ ಮಾಡಲಾಗುತ್ತಿದೆ.

ನೆಲ್ಯಾಡಿ ಸುತ್ತಮುತ್ತಲಿನ ಜನರಿಗೆ ದುಪ್ಪಟ್ಟು ಬಿಲ್​ಗಳನ್ನು ತಂದುಕೊಡಲು ಸಮಾನ ಮನಸ್ಕ ವೇದಿಕೆಯಿಂದ ಮನವಿ ಮಾಡಲಾಗಿದೆ. ಈಗಾಗಲೇ ಸಮಾನ ಮನಸ್ಕರ ವೇದಿಕೆಗೆ ಬಂದಿರುವ ಹಲವು ದುಪ್ಪಟ್ಟು ಬಿಲ್​ಗಳು ದುಪ್ಪಟ್ಟು ದರ ಹೊಂದಿದ್ದು, ಯಾವುದೇ ಕಾರಣಕ್ಕೂ ಟ್ಯಾಲಿ ಆಗುತ್ತಿಲ್ಲ ಎನ್ನಲಾಗಿದೆ. ಈಗಾಗಲೇ ನೆಲ್ಯಾಡಿ ಭಾಗದ 10ಕ್ಕೂ ಅಧಿಕ ಮನೆಗಳ ಬಿಲ್​ಗಳ ಸಂಗ್ರಹ ಮಾಡಲಾಗಿದ್ದು ಎಲ್ಲಾ ಬಿಲ್​ಗಳೂ ಸರಿಯಾಗಿಲ್ಲ ಎಂಬ ಮಾಹಿತಿ ಲಭಿಸಿದೆ‌. ಈ ತಿಂಗಳ ಬಿಲ್ ನಲ್ಲಿ ಬರೋಬ್ಬರಿ 500, 1000 ರೂ. ಹೆಚ್ಚಳ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಮೆಸ್ಕಾಂ ಅಧಿಕಾರಿಗಳು ತಕ್ಷಣ ಈ ಬಗ್ಗೆ ಗಮನಹರಿಸಲು ಸಮಾನ ಮನಸ್ಕ ವೇದಿಕೆ ನೆಲ್ಯಾಡಿ ಮನವಿ ಮಾಡಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.