ETV Bharat / state

ತುಂಬೆ ಡ್ಯಾಂನಲ್ಲಿ‌ 90 ದಿನಕ್ಕಾಗುವಷ್ಟು ನೀರು, ಮಿತ ಬಳಕೆಗೆ ಕರೆ - water storage at Thumpa Dam is come for 90 days Use it properly

ಮಂಗಳೂರು ಮಹಾನಗರ ಮೇಯರ್​​ ಪ್ರೇಮಾನಂದ ಶೆಟ್ಟಿ ಅವರು ನೇತ್ರಾವತಿ ನದಿಗೆ ಗಂಗಾ ಪೂಜೆ ಹಾಗೂ ಬಾಗಿನ ಅರ್ಪಿಸಿದರು. ಬಳಿಕ ಮಾತನಾಡಿದ ಅವರು, ಮೇಲ್ದರ್ಜೆಯಲ್ಲಿನ ಹೇಮರ್ ಡ್ಯಾಂನಲ್ಲಿ‌ ನೀರಿನ ಶೇಖರಣೆ ಸಾಕಷ್ಟಿದ್ದು, ಮಿತವಾಗಿ ಬಳಕೆ ಮಾಡಿದ್ದಲ್ಲಿ ಈ ಹಿಂದಿನಂತೆ ಪಾಲಿಕೆಯಲ್ಲಿ ದಿನವೂ ನೀರು ಪೂರೈಕೆ ಸಾಧ್ಯ ಎಂದು ಹೇಳಿದರು.

ಮಂಗಳೂರು ಮಹಾನಗರ ಪಾಲಿಕೆ ಮೇಯರ್​​ ಪ್ರೇಮಾನಂದ ಶೆಟ್ಟಿ

author img

By

Published : Mar 10, 2021, 3:33 PM IST

Updated : Mar 10, 2021, 3:57 PM IST

ಮಂಗಳೂರು: ತುಂಬೆ ಡ್ಯಾಂನಲ್ಲಿ‌ ಮುಂದಿನ 90 ದಿನಕ್ಕಾಗುವಷ್ಟು ನೀರು ಶೇಖರಣೆಯಾಗಿದ್ದರೂ, ನಾಗರಿಕರು ಮಿತವಾಗಿ ನೀರನ್ನು ಬಳಸುವ ಮುಖೇನ ದಿನವೂ ನೀರು ಪೂರೈಕೆ ಮಾಡಲು ಮಂಗಳೂರು ಮಹಾನಗರ ಪಾಲಿಕೆಯೊಂದಿಗೆ ಸಹಕರಿಸಬೇಕು ಎಂದು ಮೇಯರ್ ಪ್ರೇಮಾನಂದ ಶೆಟ್ಟಿ ಹೇಳಿದರು.

ಮಂಗಳೂರು ಮಹಾನಗರ ಮೇಯರ್​​ ಪ್ರೇಮಾನಂದ ಶೆಟ್ಟಿ

ನಗರದ ತುಂಬೆಯಲ್ಲಿರುವ ಕಿಂಡಿ ಅಣೆಕಟ್ಟಿನ ಬಳಿ ನೇತ್ರಾವತಿ ನದಿಗೆ ಗಂಗಾ ಪೂಜೆ ಹಾಗೂ ಬಾಗಿನ ಅರ್ಪಿಸಿ ಮಾತನಾಡಿದ ಅವರು, ಮೇಲ್ದರ್ಜೆಯಲ್ಲಿನ ಹೇಮರ್ ಡ್ಯಾಂನಲ್ಲಿ‌ ನೀರಿನ ಶೇಖರಣೆ ಸಾಕಷ್ಟಿದ್ದು, ಮಿತವಾಗಿ ಬಳಕೆ ಮಾಡಿದ್ದಲ್ಲಿ ಈ ಹಿಂದಿನಂತೆ ಪಾಲಿಕೆಯಿಂದ ದಿನವೂ ನೀರು ಪೂರೈಕೆ ಸಾಧ್ಯ ಎಂದು ಹೇಳಿದರು.

ಅಮೃತ್ ಯೋಜನೆಯಡಿಯಲ್ಲಿ ತುಂಬೆ ಡ್ಯಾಂಗೆ ಸಂಬಂಧಿಸಿದಂತೆ ಸಾಕಷ್ಟು ಕಾಮಗಾರಿಗಳು ನಡೆಯುತ್ತಿದ್ದು, ಈ ಮೂಲಕ ಮುಂದಿನ ಬೇಸಿಗೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕುಡಿಯುವ ನೀರು ದೊರಕಲು ಸಾಧ್ಯ. 35 ಕೋಟಿ ರೂ. ಪ್ಯಾಕೇಜ್ ಈಗಾಗಲೇ ಟೆಂಡರ್ ಆಗಿದ್ದು, ಕಾಮಗಾರಿ ಪ್ರಗತಿಯಲ್ಲಿದೆ. 20 ಎಂಎಲ್​ಡಿ ಸಾಮರ್ಥ್ಯದ ಡಬ್ಲ್ಯುಟಿಪಿ ಕಾರ್ಯ ಪ್ರಗತಿಯಲ್ಲಿದೆ.

ಓದಿ:ಐಷಾರಾಮಿ ಕಾರು ಮಾರಾಟ ಪ್ರಕರಣ: ತನಿಖೆ ಸಿಐಡಿ ಎಸ್ಪಿ ಹಂತಕ್ಕೆ

ಅಲ್ಲದೆ ಇನ್ನಿತರ ಕಾಮಗಾರಿಗಳಾದ 18.7 ಎಂಎಲ್​ಡಿ ಹಾಗೂ 80 ಎಂಎಲ್​ಡಿ ಎರಡಕ್ಕೆ ಸಂಬಂಧಿಸಿದ ಜಾಕ್​ವೆಲ್​ಗಳು ಹಾಗೂ ಅದಕ್ಕೆ ಸಂಬಂಧಿಸಿದ ಮೂರು ಪಂಪ್​ಗಳ ಕಾರ್ಯ ಈಗಾಗಲೇ ಆರಂಭವಾಗಿದೆ. ಉಳಿದಂತೆ 10 ಎಂಎಲ್​ಡಿ ಜಾಕ್​ವೆಲ್​ಗಳನ್ನು 20 ಎಂಎಲ್​ಡಿಗೆ ಮೇಲ್ದರ್ಜೆಗೇರಿಸಲಾಗುತ್ತದೆ‌. ಒಟ್ಟು ಇಲ್ಲಿನ ಸಾಮರ್ಥ್ಯವನ್ನು ಹೆಚ್ಚಿಸುವ ಮೂಲಕ ಹೆಚ್ಚುವರಿ ನೀರನ್ನು ಪಂಪ್ ಮಾಡಿ ಸರಬರಾಜು ಮಾಡಲಾಗುತ್ತದೆ ಎಂದು ಪ್ರೇಮಾನಂದ ಶೆಟ್ಟಿ ಹೇಳಿದರು.

ತುಂಬೆ ಡ್ಯಾಂ ಆರು ಮೀ.ನಷ್ಟು ಕುಡಿಯುವ ನೀರು ಶೇಖರಣೆ ಮಾಡಿ ಬೇಸಿಗೆ ಪೂರ್ತಿ ನೀರು ಪೂರೈಕೆ ಮಾಡುವ ಬಗ್ಗೆ ಚಿಂತನೆ ನಡೆಸಿದ್ದೇವೆ. ನೀರಿನ ಒಳ ಹರಿವೂ ಸಾಕಷ್ಟು ಇದ್ದು, ಇನ್ನೂ ಸುಮಾರು ಹತ್ತು ದಿನಗಳ ಕಾಲ ಒಳ ಹರಿವಿಗೆ ತೊಂದರೆ ಆಗುವುದಿಲ್ಲ ಎಂದರು.

Last Updated : Mar 10, 2021, 3:57 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.