ಸುಳ್ಯ(ದಕ್ಷಿಣ ಕನ್ನಡ): ಇಲ್ಲಿನ ಅಜ್ಜಾವರ ಗ್ರಾಮದ ಕಾಂತಮಂಗಲದಲ್ಲಿರುವ ರಬ್ಬರ್ ಒಣಗಿಸುವ ಸ್ಮೋಕ್ ಹೌಸ್ಗೆ ಬೆಂಕಿ ತಗುಲಿದ್ದರಿಂದ ಅಪಾರ ಪ್ರಮಾಣದ ಹಾನಿ ಉಂಟಾಗಿದೆ.
ನಿನ್ನೆ ರಾತ್ರಿ ಆಕಸ್ಮಿಕವಾಗಿ ಪ್ಯಾಕ್ಟರಿಗೆ ಬೆಂಕಿ ತಗುಲಿದೆ. ಅಂದಾಜು 3 ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತು ಬೆಂಕಿಗಾಹುತಿಯಾಗಿವೆ. ರಬ್ಬರ್ ಒಣಗಿಸುವ ಸ್ಮೋಕ್ ಹೌಸ್ ಸೇರಿದಂತೆ ದಾಸ್ತಾನು ಮಾಡಲಾಗಿದ್ದ ರಬ್ಬರ್ ಶೀಟ್ ಕೂಡ ಸುಟ್ಟು ಕರಕಲಾಗಿವೆ.
ತಕ್ಷಣವೇ ಸುಳ್ಯ ಅಗ್ನಿಶಾಮಕ ಠಾಣೆಗೆ ಸ್ಥಳೀಯರು ಮಾಹಿತಿ ನೀಡಿದ್ದು, ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು.