ETV Bharat / state

ಮಳೆ ನಡುವೆ ಜನರ ಸಮಸ್ಯೆ ಆಲಿಸಲು ಕಡಬಕ್ಕೆ ಜಿಲ್ಲಾಧಿಕಾರಿ ಭೇಟಿ - dc visit to kadaba

ಮಂಗಳೂರು ಜಿಲ್ಲಾಧಿಕಾರಿಗಳು ಮಳೆಯ ನಡುವೆಯೇ ಜನರ ಸಮಸ್ಯೆ ಆಲಿಸಲು ಕಡಬ ತಾಲೂಕು ಕಚೇರಿಗೆ ಭೇಟಿ ನೀಡಿದರು.

dc visits kadab
ಮಳೆ ನಡುವೆಯೂ ಜನರ ಸಮಸ್ಯೆ ಆಲಿಸಲು ಕಡಬಕ್ಕೆ ಜಿಲ್ಲಾಧಿಕಾರಿ ಭೇಟಿ
author img

By

Published : Jul 6, 2022, 2:05 PM IST

ಕಡಬ: ಕರಾವಳಿಯಲ್ಲಿ ಜೋರು ಮಳೆ ಸುರಿಯುತ್ತಿದೆ. ಈ ನಡುವೆ ಜನರ ಸಮಸ್ಯೆ ಆಲಿಸಲು ಜಿಲ್ಲಾಧಿಕಾರಿಗಳು ಕಡಬಕ್ಕೆ ತಹಸೀಲ್ದಾರ್​ ಕಚೇರಿಗೆ ಭೇಟಿ ಆಗಮಿಸಿದರು. ಕುಳಿತುಕೊಳ್ಳಲು ಸ್ಥಳವಿಲ್ಲದೆ ಸಮಸ್ಯೆಗಳ ಕುರಿತು ಜಿಲ್ಲಾಧಿಕಾರಿಗಳಿಗೆ ತಿಳಿಸಲು ಕಚೇರಿ ಮುಂದೆಯೇ ಜನರು ಕಾಯುವಂತಾಯಿತು.

ಈ ಕುರಿತು ಮಾತನಾಡಿದ ರೈತ ಮುಖಂಡರೊಬ್ಬರು, "ಜಿಲ್ಲಾಧಿಕಾರಿ ಡಾ.ರಾಜೇಂದ್ರ ಅವರು ಕಡಬ ತಹಸೀಲ್ದಾರ್ ಕಚೇರಿಯ ಒಳಗಡೆ ಜನರ ಸಮಸ್ಯೆ ಆಲಿಸಿ ಪರಿಹಾರ ನೀಡುತ್ತಿದ್ದಾರೆ. ಇದೊಂದು ಉತ್ತಮ ಕಾರ್ಯಕ್ರಮ ಆದರೂ ಸ್ಥಳೀಯಾಡಳಿತ ಈ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಿಲ್ಲ. ಅಲ್ಲದೇ ಈ ಕಾರ್ಯಕ್ರಮದ ಮಾಹಿತಿ ತಿಳಿದು ಬಂದಿರುವ ಜನರಿಗೆ ಒಂದು ಸಭಾ ಭವನ ಅಥವಾ ವಿಶಾಲ ಕೊಠಡಿಯಲ್ಲಿ ಅಹವಾಲು ಸ್ವೀಕಾರಕ್ಕೆ ವ್ಯವಸ್ಥೆ ಮಾಡಿದ್ದರೆ ಸಾರ್ವಜನಿಕರಿಗೆ ಅನುಕೂಲವಾಗುತ್ತಿತ್ತು. ಇನ್ನಾದರೂ ತಾಲೂಕು ಆಡಳಿತ ಎಚ್ಚೆತ್ತುಕೊಳ್ಳಲಿ" ಎಂದರು.

ಇದನ್ನೂ ಓದಿ: ಅಮೃತ್ ನಗರೋತ್ಥಾನ ಯೋಜನೆಯಡಿ ಪೂರ್ವ ವಲಯಕ್ಕೆ 450 ಕೋಟಿ ರೂ. ಬಿಡುಗಡೆ: ಸಚಿವ ಅಶ್ವತ್ಥನಾರಾಯಣ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.