ETV Bharat / state

ಮಂಗಳೂರು ಗೋಡೆ ಬರಹ ಪ್ರಕರಣ: ಓರ್ವ ಆರೋಪಿ ವಶಕ್ಕೆ? - ಮಂಗಳೂರು ಗೋಡೆ ಬರಹ ಪ್ರಕರಣ

ಮಂಗಳೂರು ಗೋಡೆ ಬರಹ ಪ್ರಕರಣ
Mangalore wall writing case
author img

By

Published : Dec 3, 2020, 12:43 PM IST

Updated : Dec 3, 2020, 2:24 PM IST

12:30 December 03

ಮಂಗಳೂರಲ್ಲಿ ನಗರದಲ್ಲಿ ಕಂಡು ಬಂದ ಗೋಡೆ ಬರಹ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಓರ್ವ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾಗ್ತಿದೆ.

ಮಂಗಳೂರು: ನಗರದಲ್ಲಿ ಕಾಣಿಸಿಕೊಂಡ ಉಗ್ರ ಗೋಡೆ ಬರಹ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವನನ್ನು ಮಂಗಳೂರು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ಹೇಳಲಾಗ್ತಿದೆ. 

ಕದ್ರಿಯ ಅಪಾರ್ಟ್​ಮೆಂಟ್​ ಗೋಡೆ ಮತ್ತು ನ್ಯಾಯಾಲಯದ ಬಳಿಯಿರುವ ಹಳೆಯ ಪೊಲೀಸ್ ಔಟ್ ಪೋಸ್ಟ್ ಬಳಿ ಕೆಲವು ಕಿಡಿಗೇಡಿಗಳು ಆಕ್ಷೇಪಾರ್ಹ ಬರಹಗಳನ್ನು ಬರೆದಿದ್ದರು. ಕದ್ರಿಯಲ್ಲಿ ಲಷ್ಕರ್ ಎ ತೊಯಿಬಾ ಜಿಂದಾಬಾದ್ ಮತ್ತು ನ್ಯಾಯಾಲಯದ ಆವರಣದಲ್ಲಿ ಉರ್ದು ಭಾಷೆಯಲ್ಲಿ ಬರಹವನ್ನು ಬರೆಯಲಾಗಿತ್ತು. ‌ಅಷ್ಟೇ ಅಲ್ಲದೆ, ಆ ಪ್ರದೇಶದಲ್ಲಿ ಸಿಸಿಟಿವಿ ಕಾರ್ಯ ನಿರ್ವಹಿಸದ ಹಿನ್ನೆಲೆಯಲ್ಲಿ ತನಿಖೆಗೆ ತೊಡಕಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಯೊಬ್ಬನನ್ನು ವಶಕ್ಕೆ ಪಡೆದು ವಿಚಾರ ನಡೆಸುತ್ತಿದ್ದಾರೆ ಎಂದು ಪೊಲೀಸ್​ ಉನ್ನತ ಮೂಲಗಳು ತಿಳಿಸಿವೆ.  

Last Updated : Dec 3, 2020, 2:24 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.