ETV Bharat / state

ಸೊಂಟದ ಕೆಳಗೆ ಸ್ವಾಧೀನವಿಲ್ಲ, ಆದ್ರೂ ರಿಕ್ಷಾ ಚಾಲನೆ: ಬಡ ಚಾಲಕನಿಗೆ ಬೇಕಿದೆ ದಾನಿಗಳ ನೆರವು - mangalore rickshaw driver struggle to lead life

ರಸ್ತೆ ಅಪಘಾತದಲ್ಲಿ ಸೊಂಟದ ಕೆಳಭಾಗದ ಸ್ವಾಧೀನ ಕಳೆದುಕೊಂಡಿದ್ದರೂ ಛಲ ಬಿಡದೆ ಮಂಗಳೂರು ನಗರದಲ್ಲಿ ವ್ಯಕ್ತಿಯೊಬ್ಬರು ರಿಕ್ಷಾ ಓಡಿಸುವ ಮೂಲಕ ಬದುಕು ಸಾಗಿಸುತ್ತಿದ್ದಾರೆ.

rickshaw driver
ರಿಕ್ಷಾ ಚಾಲಕ
author img

By

Published : Jan 18, 2023, 12:34 PM IST

Updated : Jan 18, 2023, 3:58 PM IST

ಆಟೋ ಚಾಲಕನ ಬದುಕಿನ ಬವಣೆ

ಮಂಗಳೂರು: ದೇಹದ ಎಲ್ಲ ಅಂಗಾಂಗಗಳು ಸಮರ್ಥವಾಗಿ ಕಾರ್ಯನಿರ್ವಹಿಸುತ್ತಿದ್ದರೂ ಕೆಲಸವಿಲ್ಲವೆಂದು ಕೊರಗಿ ಜೀವನ ವ್ಯರ್ಥ ಮಾಡುವ ಸಾಕಷ್ಟು ಮಂದಿ ಇದ್ದಾರೆ. ಇಂಥವರನ್ನು ಬಡಿದೆಬ್ಬಿಸಬಲ್ಲರು ಈ ವ್ಯಕ್ತಿ.! ಇವರ ದೇಹದ ಸೊಂಟದ ಕೆಳಗೆ ಸ್ವಾಧೀನವಿಲ್ಲ. ಹೀಗಿದ್ದರೂ ರಿಕ್ಷಾ ಚಾಲನೆ ಮಾಡುತ್ತಾ ಬದುಕು ರೂಪಿಸಿಕೊಳ್ಳುತ್ತಿದ್ದಾರೆ.

ಮಂಗಳೂರಿನಲ್ಲಿ ಎಲೆಕ್ಟ್ರಿಕ್ ಆಟೋ ರಿಕ್ಷಾ ಓಡಿಸುತ್ತಿರುವ ಸುಭಾಷ್ ನೋಡಲು ಸಾಮಾನ್ಯ ವ್ಯಕ್ತಿ. ಆದರೆ ಇವರು ಬದುಕು ಸಂಕಷ್ಟದಲ್ಲಿದೆ. ತಮ್ಮ ಸೊಂಟದ ಕೆಳಭಾಗದಲ್ಲಿ ಬಲ ಕಳೆದುಕೊಂಡಿದ್ದರೂ ಛಲ ಮಾತ್ರ ಬಿಟ್ಟಿಲ್ಲ. ನಗರದಲ್ಲಿ ರಿಕ್ಷಾ ಚಾಲನೆ ಮಾಡುವ ಮೂಲಕ ಹೊಟ್ಟೆಹೊರೆಯುವ ಕಾಯಕ ಮಾಡುತ್ತಿದ್ದಾರೆ. 2018 ರವರೆಗೆ ಸದೃಢರಾಗಿದ್ದ ಸುಭಾಷ್​, ಆ ಬಳಿಕ ಸಂಭವಿಸಿದ ಅಪಘಾತವೊಂದರಿಂದ ಈ ದುಸ್ಥಿತಿಗೆ ತಲುಪಿದ್ದಾರೆ.

ಸುಭಾಷ್ ಅವರು ಸುಮಾರು ಏಳು ವರ್ಷಗಳ ಕಾಲ ಅರಬ್ ದೇಶದಲ್ಲಿ ದುಡಿದವರು. ಅಲ್ಲಿಂದ ತಾಯ್ನಾಡಿಗೆ ಮರಳಿ ಟಿಪ್ಪರ್​ ಖರೀದಿಸಿ ಕೆಲಸ ಪ್ರಾರಂಭಿಸಿದ್ದರು. ಆದ್ರೆ ಈ ಕೆಲಸ ಅವರಿಗೆ ಅಷ್ಟೇನೂ ಲಾಭ ತಂದುಕೊಡಲಿಲ್ಲ. ನಂತರ ಕಲ್ಲಿದ್ದಲು ಸಾಗಾಟದ ಟ್ರಕ್ ಡ್ರೈವರ್ ಆದರು. ಆದರೆ ಆ ಒಂದು ದಿನ ಸುರಿದ ಜಡಿಮಳೆ ಚಾಲಕನನ್ನು ಕಷ್ಟಗಳ ಕೂಪಕ್ಕೆ ತಳ್ಳಿತು. ಟ್ರಕ್​ನಲ್ಲಿ ಲೋಡ್ ಸಾಗಿಸುತ್ತಿದ್ದಾಗ ಮಳೆನೀರು ನಿಂತು ರಸ್ತೆ ಹಂಪ್ಸ್​ ಕಾಣದೇ ವಾಹನ ಚಲಾಯಿಸಿದ್ದು, ಅವರ ಬೆನ್ನುಹುರಿ ಶಾಶ್ವತವಾಗಿ ಹಾನಿಗೀಡಾಗಿದೆ.

ವಾಹನ ಅಪಘಾತವಾದ ಸಂದರ್ಭದಲ್ಲಿ ಮಧ್ಯರಾತ್ರಿಯಾಗಿದ್ದರಿಂದ ಯಾರೂ ಇರಲಿಲ್ಲ. ಈ ವೇಳೆ ಸುಭಾಷ್ ಸೊಂಟದ ಬಲ ಕಳೆದುಕೊಂಡಿರುವುದು ಬಿಟ್ಟರೆ ಅವರಿಗೆ ಬೇರಾವುದೇ ಗಾಯಗಳಾಗಿರಲಿಲ್ಲ. ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದರೂ ಗುಣಮುಖರಾಗಲಿಲ್ಲ. ಕೆಲಸ ಮಾಡದೆ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಸುಭಾಷ್​, ತನ್ನ ತಾಯಿ ಕಷ್ಟಪಟ್ಟು ದುಡಿಯುವುದನ್ನು ಕಂಡು ಸುಮ್ಮನೆ ಕೂರಲಾಗದೆ ತಾನೂ ದುಡಿಯಬೇಕು ಎಂದು ನಿರ್ಧರಿಸಿದರು.

ಇದನ್ನೂ ಓದಿ: ಬಳ್ಳಾರಿ: ಆಟೋ ರಿಕ್ಷಾ ಓಡಿಸಿ ಜೀವನ ನಡೆಸುತ್ತಿರುವ ಅತಿಥಿ ಉಪನ್ಯಾಸಕ

ತಾಯಿ ಮತ್ತು ಅಣ್ಣನನ್ನು ಒಪ್ಪಿಸಿ ಒಂದು ಇಲೆಕ್ಟ್ರಿಕ್ ರಿಕ್ಷಾ ತೆಗೆದುಕೊಂಡು ಚಾಲಕರಾಗಿ ದುಡಿಯುತ್ತಿದ್ದಾರೆ. ಬೆಳಗ್ಗೆ ಮನೆಯಿಂದ ಬರುವಾಗ ಇವರ ಅತ್ತಿಗೆ ವ್ಹೀಲ್ ಚೇರ್ ಮೂಲಕ ಕರೆತಂದು ರಿಕ್ಷಾದಲ್ಲಿ ಕೂರಿಸುತ್ತಾರೆ. ಮತ್ತೆ ಮಧ್ಯಾಹ್ನ ಊಟ ಮುಗಿಸಿ ಹೊರಡುವಾಗ, ಸಂಜೆ ಹಿಂದಿರುಗುವಾಗ ಅತ್ತಿಗೆಯೇ ಇವರನ್ನು ನೋಡಿಕೊಳ್ಳುತ್ತಾರೆ.

6 ತಿಂಗಳುಗಳಿಂದ ರಿಕ್ಷಾ ಚಾಲನೆ: ರಿಕ್ಷಾವನ್ನು ತಮಗೆ ಬೇಕಾದ ರೀತಿಯಲ್ಲಿ ಸುಭಾಷ್ ಬದಲಾವಣೆ ಮಾಡಿಕೊಂಡಿದ್ದಾರೆ. ಕಾಲಿನಲ್ಲಿ ಕೆಲಸ ಮಾಡುವ ಬ್ರೇಕ್ ಅನ್ನು ಕೈಯಲ್ಲಿ ಹಾಕುವಂತೆ ವ್ಯವಸ್ಥೆ ಮಾಡಿದ್ದಾರೆ. ರಿಕ್ಷಾದಲ್ಲಿ ಆರಾಮದಾಯಕವಾಗಿ ಕೂರಲು ಸ್ಟ್ಯಾಂಡ್ ವ್ಯವಸ್ಥೆ ಮಾಡಲಾಗಿದೆ. ಹೀಗೆ ಕಳೆದ ಆರು ತಿಂಗಳುಗಳಿಂದ ಮಂಗಳೂರು ನಗರದಲ್ಲಿ ರಿಕ್ಷಾ ಚಾಲನೆ ಮಾಡುತ್ತಾ ಜೀವನ ಸಾಗಿಸುತ್ತಿದ್ದಾರೆ.

ಈಟಿವಿ ಭಾರತ ಜೊತೆಗೆ ಮಾತನಾಡಿದ ಸುಭಾಷ್, 'ನನ್ನ ಸ್ಥಿತಿಯ ಬಗ್ಗೆ ನನ್ನ ತಾಯಿಗೆ ಬಹಳಷ್ಟು ಚಿಂತೆಯಾಗಿತ್ತು. ನನ್ನ ಮಗನ ಬದುಕು ಹೀಗೆ ಆಯ್ತಲ್ಲಾ ಎಂದು ಚಿಂತಿತರಾಗಿದ್ದರು. ಆದ್ರೆ, ಈಗ ಅವರಿಗೆ ನಂಬಿಕೆ ಬಂದಿದೆ. ನನಗೂ ಮನೆಯೊಳಗೆ ಕೂರುವ ಬದಲು ಹೊರ ಜಗತ್ತಿಗೆ ಬರಲು ಸಾಧ್ಯವಾಗಿದೆ' ಎಂದರು.

ಇದನ್ನೂ ಓದಿ: ರೋಗಿಗಳನ್ನು ಆಸ್ಪತ್ರೆಗೆ ಸಾಗಿಸಲು ಉಚಿತ ಆಟೋ ಸೇವೆ.. ಗದಗ ರಿಕ್ಷಾ ಚಾಲಕರ ಮಾನವೀಯತೆಗೆ ಸಲಾಂ

ಆಸಕ್ತರು ಸಹಾಯ ಮಾಡಬಹುದು: ಇನ್ನು ಸುಭಾಷ್ ಅವರು ಟಿಪ್ಪರ್ ಖರೀದಿಸಿದ ವೇಳೆ ಮಾಡಿದ ಸಾಲ ಹೊರೆಯಾಗಿ ಕಾಡುತ್ತಿದೆ. ಇರುವ ಮನೆ ಸಹ ಜಪ್ತಿಗೆ ಬಂದಿದ್ದು, ಮುಂದೇನು ಎಂದು ದಿಕ್ಕು ತೋಚದ ಸ್ಥಿತಿಯಲ್ಲಿದ್ದಾರೆ. ಆಸಕ್ತರು ಬಡ ಚಾಲಕನ ಸಹಾಯಕ್ಕೆ ನೆರವಾಗಬಹುದು. ಸುಭಾಷ್ ಅವರ ಸಂಪರ್ಕ ಸಂಖ್ಯೆ- 8431439056.

Last Updated : Jan 18, 2023, 3:58 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.