ETV Bharat / state

ಅಫ್ಘಾನಿಸ್ತಾನನಿಂದ ಜಿಲ್ಲೆಗೆ ಬಂದವರ ಜೊತೆ ಚರ್ಚೆ ನಡೆಸಿದ ದ.ಕ ಪೊಲೀಸ್ ಆಯುಕ್ತರು - ಏಳು ಮಂದಿಯೊಂದಿಗೆ ಚರ್ಚೆ ನಡೆಸಿದ ಪೊಲೀಸ್​ ಕಮಿಷನರ್​​ ಶಶಿಕುಮಾರ್

ಇಂದು ಈ ಏಳೂ ಮಂದಿ ಮಂಗಳೂರು ನಗರ‌ ಪೊಲೀಸ್ ಕಮಿಷನರ್ ಕಚೇರಿಗೆ ಆಗಮಿಸಿ ಕಮಿಷನರ್​ ಜೊತೆ ಚರ್ಚೆ ನಡೆಸಿದರು. ಇತ್ತೀಚೆಗೆ ಮಂಗಳೂರು ವಿವಿಯಲ್ಲಿ ಉನ್ನತ ವ್ಯಾಸಂಗ ಮಾಡುತ್ತಿದ್ದ 47 ಮಂದಿ ಅಫ್ಘಾನ್​ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ, ಸುರಕ್ಷತೆಯ ಭರವಸೆ ನೀಡಿದ್ದರು..

Mangalore Police Commissioner interact with who came to district from Afghanistan
ಅಫ್ಘಾನಿಸ್ತಾನನಿಂದ ಜಿಲ್ಲೆಗೆ ಬಂದವರ ಜೊತೆ ಚರ್ಚೆ ನಡೆಸಿದ ದ.ಕ ಪೊಲೀಸ್ ಆಯುಕ್ತರು
author img

By

Published : Aug 25, 2021, 5:33 PM IST

ಮಂಗಳೂರು : ಅಫ್ಘಾನಿಸ್ತಾನನಿಂದ ಜಿಲ್ಲೆಗೆ ಆಗಮಿಸಿರುವ ಏಳು ಮಂದಿಯೊಂದಿಗೆ ಇಂದು ಮಂಗಳೂರು ಪೊಲೀಸ್​ ಕಮಿಷನರ್​​ ಶಶಿಕುಮಾರ್ ಚರ್ಚೆ ನಡೆಸಿದರು.

ಅಫ್ಘಾನಿಸ್ತಾನನಿಂದ ಜಿಲ್ಲೆಗೆ ಬಂದವರ ಜೊತೆ ಚರ್ಚೆ ನಡೆಸಿದ ದ.ಕ ಪೊಲೀಸ್ ಆಯುಕ್ತರು

ಜಿಲ್ಲೆಗೆ ವಿವಿಧ ತಾರೀಕಿನಂದು ಸುಮಾರು 7 ಮಂದಿ ಅಫ್ಘಾನಿಸ್ತಾನದಿಂದ ಜಿಲ್ಲೆಗೆ ಬಂದಿದ್ದು, ಅವರನ್ನು ಉಳ್ಳಾಲದ ಉಳಿಯ ನಿವಾಸಿ ಮೆಲ್ವಿನ್ ಮೊಂತೆರೋ , ‌ನಗರದ ಕೊಲ್ಯ ನಿವಾಸಿ ಪ್ರಸಾದ್ ಆನಂದ್, ಬಜ್ಪೆ ಕರಂಬಾರು ನಿವಾಸಿ ದಿನೇಶ್ ರೈ, ಮೂಡುಬಿದಿರೆ ಪಾಡ್ಯಾರಬೆಟ್ಟು ಜಗದೀಶ್ ಪೂಜಾರಿ, ಮೂಲ್ಕಿ ಪಡುಪಣಂಬೂರು ನಿವಾಸಿ ಡೆಸ್ಮಂಡ್ ಡೇವಿಡ್ ನಿವಾಸಿ, ಬಿಜೈ ನಿವಾಸಿ ಶ್ರವಣ್ ಅಂಚನ್ ಹಾಗೂ ಉಳ್ಳಾಲದ ಉಳಿಯ ನಿವಾಸಿ ಡೆಮ್ಸಿ ಮೊಂತೆರೋ ಎಂದು ಗುರುತಿಸಲಾಗಿದೆ. ಇವರೆಲ್ಲ ಕಾಬೂಲ್​​ನಲ್ಲಿನ ಮಿಲಿಟರಿ ಬೇಸ್(ನ್ಯಾಟೊ ಬೇಸ್)ನಲ್ಲಿ ಕೆಲಸ ನಿರ್ವಹಿಸುತ್ತಿದ್ದರು.

ಇಂದು ಈ ಏಳೂ ಮಂದಿ ಮಂಗಳೂರು ನಗರ‌ ಪೊಲೀಸ್ ಕಮಿಷನರ್ ಕಚೇರಿಗೆ ಆಗಮಿಸಿ ಕಮಿಷನರ್​ ಜೊತೆ ಚರ್ಚೆ ನಡೆಸಿದರು. ಇತ್ತೀಚೆಗೆ ಮಂಗಳೂರು ವಿವಿಯಲ್ಲಿ ಉನ್ನತ ವ್ಯಾಸಂಗ ಮಾಡುತ್ತಿದ್ದ 47 ಮಂದಿ ಅಫ್ಘಾನ್​ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ, ಸುರಕ್ಷತೆಯ ಭರವಸೆ ನೀಡಿದ್ದರು.

ಚರ್ಚೆ ಬಳಿಕ ಮಾಧ್ಯಮಗಳೊಂದಿಗೆ ಕಮಿಷನರ್ ಶಶಿಕುಮಾರ್ ಮಾತನಾಡಿ, ಇದೀಗ ತಾಯ್ನಾಡಿಗೆ ಮರಳಿ ಬಂದವರೆಲ್ಲ ನ್ಯಾಟೊ ಮಿಲಿಟರಿ ಬೇಸ್​ನಲ್ಲಿ ಇದ್ದವರಾಗಿದ್ದಾರೆ. ಹೀಗಾಗಿ, ಹೊರಗಡೆ ಬೆಳವಣಿಗೆ ಯಾವುದೂ ಇವರ ಗಮನಕ್ಕೆ ಬಂದಿಲ್ಲ. ಇವರನ್ನು ಕ್ಯಾಂಪ್ ಅಧಿಕಾರಿಗಳು ಸುರಕ್ಷಿತವಾಗಿ ಕತಾರ್​​​ ಮೂಲಕವೇ ತವರಿಗೆ ಕಳುಹಿಸಿ ಕೊಟ್ಟಿದ್ದಾರೆ ಎಂದರು.

ನಂತರ ಅಫ್ಘಾನಿಸ್ತಾನನಿಂದ ಜಿಲ್ಲೆಗೆ ಬಂದಿರುವ ಶ್ರವಣ್ ಅಂಚನ್ ಎಂಬುವರು ಮಾತನಾಡಿ, ಆ. 15ರಂದು ತಾಲಿಬಾನ್ ಉಗ್ರರು ಅಫ್ಘಾನಿಸ್ತಾನವನ್ನು ಕೈವಶ ಮಾಡಿಕೊಂಡು ಅಟ್ಟಹಾಸ ಮೆರೆಯಲು ಆರಂಭಿದರು. ಆದರೆ, ನಾವೆಲ್ಲರೂ ಮಿಲಿಟರಿ ಬೇಸ್(ನಾಟೊ ಬೇಸ್)ನಲ್ಲಿ‌ ಕೆಲಸ ನಿರ್ವಹಿಸುತ್ತಿರುವುದರಿಂದ ನಮಗಾರಿಗೂ ಯಾವುದೇ ತೊಂದರೆಯಾಗಿಲ್ಲ.

ಅಫ್ಘಾನ್​​ ನನ್ನು ತಾಲಿಬಾನ್ ವಶಪಡಿಸಿದ ಕೂಡಲೇ ನಮ್ಮ ಕಂಪನಿ ಹಾಗೂ ಅಲ್ಲಿನ ಸೇನೆ ನಮ್ಮನ್ನು‌ ಆ.17ರಂದು ಕಾಬೂಲ್​​ನಿಂದ ಏರ್ ಲಿಫ್ಟ್ ಮಾಡಿ ಕತಾರ್​​ಗೆ ಕರೆದುಕೊಂಡು ಬಂದರು. ಅಲ್ಲಿ ಮೂರು ದಿನಗಳ ಕಾಲ ಯುಎಸ್​ ಬೇಸ್​​​​ನಲ್ಲಿ ಉಳಿದುಕೊಂಡಿದ್ದೆವು. ಅಲ್ಲಿಂದ ವಿಮಾನದ ಮೂಲಕ ಡೆಲ್ಲಿಗೆ ಕಳುಹಿಸಿದರು. ಅಲ್ಲಿಂದ ಮುಂಬೈಗೆ ಬಂದು ಆ.23ರಂದು ಮಂಗಳೂರು ತಲುಪಿದ್ದೇವೆ ಎಂದರು.

ಅಫ್ಘಾನಿಸ್ತಾನನಿಂದ ಜಿಲ್ಲೆಗೆ ಬಂದಿರುವ ಶ್ರವಣ್ ಅಂಚನ್

ಇಂದು ಪೊಲೀಸ್ ಕಮಿಷನರ್ ಶಶಿಕುಮಾರ್ ಅವರು ನಮ್ಮನ್ನು ತಮ್ಮ ಕಚೇರಿಗೆ ಕರೆಸಿಕೊಂಡು ಅಲ್ಲಿನ ಅನುಭವ, ಅಲ್ಲಿ ಏನಾದರೂ ತೊಂದರೆಯಾಯಿತೇ ಎಂಬುದರ ಬಗ್ಗೆ ಚರ್ಚೆ ನಡೆಸಿದರು. ನಾವಿದ್ದ ಸಂಸ್ಥೆಯಲ್ಲಿ ನಮ್ಮನ್ನು ಹೊರತುಪಡಿಸಿ ಮಂಗಳೂರಿನವರು ಯಾರೂ ಇರಲಿಲ್ಲ.‌ ಕೆಲವರು ಹಿಂದೆಯೇ ವರ್ಷದ ರಜೆ ನಿಮಿತ್ತ ರಾಜೀನಾಮೆ ನೀಡಿ ಬಂದಿದ್ದರು ಎಂದರು.

ಓದಿ: ಮೈಸೂರು: ಸ್ನೇಹಿತನ ಜೊತೆ ಚಾಮುಂಡಿ ಬೆಟ್ಟಕ್ಕೆ ತೆರಳಿದ್ದ ವಿದ್ಯಾರ್ಥಿನಿ ಮೇಲೆ Gangrape

ETV Bharat Logo

Copyright © 2025 Ushodaya Enterprises Pvt. Ltd., All Rights Reserved.