ETV Bharat / state

ಲಾಕ್​ಡೌನ್​ಗೆ ಇತಿಶ್ರೀ ಹಾಡಿದ ಮಂಗಳೂರಿಗರು: ಖಾಸಗಿ ವಾಹನಗಳ ಸಂಚಾರ ನಿರಾತಂಕ - ಮಂಗಳೂರು ಸೇರಿದಂತೆ ಹಲವೆಡೆ ಖಾಸಗಿ ವಾಹನ ಸಂಚಾರ

ನಿತ್ಯ 8 ರಿಂದ 11 ರವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ‌ ನೀಡಲಾಗಿತ್ತು. ಮೊದಲ ದಿನ ಜನಸಾಮಾನ್ಯರು ಮನೆಯಲ್ಲೇ ಇದ್ದು ಯಾರೂ ಹೊರಬರದೇ ಆದೇಶ ಪಾಲನೆ ಮಾಡಿದ್ದರು. ಇದೀಗ ಲಾಕ್​ಡೌನ್ ನಿಯಮಗಳನ್ನು ಗಾಳಿಗೆ ತೂರಿ‌ ಅನಗತ್ಯ ಸಂಚಾರ ನಡೆಸುತ್ತಿದ್ದಾರೆ.

Mangalore
ಒಂದೇ ದಿನದ ಲಾಕ್​ಡೌನ್​ಗೆ ಇತಿಶ್ರೀ ಹಾಡಿದ ಮಂಗಳೂರಿಗರು
author img

By

Published : Jul 18, 2020, 2:12 PM IST

ಮಂಗಳೂರು: ದ.ಕ.ಜಿಲ್ಲೆಯಲ್ಲಿ ಲಾಕ್​ಡೌನ್​ನ ಮೂರನೇ ದಿನವಾದ ಇಂದು‌ ಮಂಗಳೂರು ಸೇರಿದಂತೆ ಹಲವೆಡೆ ಖಾಸಗಿ ವಾಹನಗಳು ನಿರಾತಂಕವಾಗಿ ಸಂಚಾರ ನಡೆಸುತ್ತಿದೆ. ಈ ಮೂಲಕ ಮಂಗಳೂರಿನಲ್ಲಿ ಒಂದೇ ದಿನ ಲಾಕ್​ಡೌನ್​ಗೆ ಇತಿಶ್ರೀ ಹಾಡಿದಂತಿದೆ.

ಒಂದೇ ದಿನದ ಲಾಕ್​ಡೌನ್​ಗೆ ಇತಿಶ್ರೀ ಹಾಡಿದ ಮಂಗಳೂರಿಗರು

ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ದ.ಕ.ಜಿಲ್ಲೆಯಲ್ಲಿ ಗುರುವಾರದಿಂದ ಒಂದು ವಾರಗಳ ಲಾಕ್​ಡೌನ್ ಘೋಷಣೆ ಮಾಡಲಾಗಿತ್ತು. ಆದರೆ, ನಿತ್ಯ 8 ರಿಂದ 11 ರವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ‌ ನೀಡಲಾಗಿತ್ತು. ಮೊದಲ ದಿನ ಜನಸಾಮಾನ್ಯರು ಮನೆಯಲ್ಲೇ ಇದ್ದು ಯಾರೂ ಹೊರಬರದೇ ಆದೇಶ ಪಾಲನೆ ಮಾಡಿದ್ದರು. ಇದೀಗ ಲಾಕ್​ಡೌನ್ ನಿಯಮಗಳನ್ನು ಗಾಳಿಗೆ ತೂರಿ‌ ಅನಗತ್ಯ ಸಂಚಾರ ನಡೆಸುತ್ತಿದ್ದಾರೆ.

ಆಯಕಟ್ಟಿನ ಪ್ರದೇಶಗಳಲ್ಲಿ ಬ್ಯಾರಿಕೇಡ್​ಗಳನ್ನು ಹಾಕಿ ಅಗತ್ಯ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ. ಈ ಮೂಲಕ‌ ಅನಾವಶ್ಯಕವಾಗಿ ಸಂಚಾರ ಮಾಡುವ ಖಾಸಗಿ ವಾಹನಗಳ ಸವಾರರಿಗೆ ಎಚ್ಚರಿಕೆ ನೀಡಿ‌ ವಾಪಸ್ ಕಳುಹಿಸಲಾಗುತ್ತಿದೆ. ಬೆಳಗ್ಗೆ ಪೊಲೀಸರು ಕೊಂಚ ಸಡಿಲಿಕೆ ಮಾಡಿದ್ದರೂ, 11 ಗಂಟೆಯ ಬಳಿಕ‌ ಕಟ್ಟುನಿಟ್ಟಿನ ಆದೇಶ ಪಾಲಿಸುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.