ETV Bharat / state

ಮಂಗಳೂರು ಸಂಪೂರ್ಣ ಲಾಕ್‌ಡೌನ್.. ಜನರಿಂದ ಉತ್ತಮ ಸ್ಪಂದನೆ - Mangalore is a complete lock down

ಅಗತ್ಯ ವಸ್ತುಗಳಿಗೆ, ವೈದ್ಯಕೀಯ ಸೇವೆಗಳಿಗೆ ಬರುವವರೂ ಸಾಮಾಜಿಕ ಅಂತರವನ್ನು ನಿರಂತರವಾಗಿ ಪಾಲಿಸುತ್ತಾ ಬರುತ್ತಿದ್ದಾರೆ. ಪೊಲೀಸರೂ ಅಲ್ಲಲ್ಲಿ ನಾಕಾ ಬಂದಿ ವ್ಯವಸ್ಥೆ ಮಾಡಿ ಅನಗತ್ಯ ತಿರುಗಾಡುತ್ತಿರುವವರ ಮೇಲೆ ಶಿಸ್ತು ಕ್ರಮ ಜರುಗಿಸಿ ವಾಹನಗಳನ್ನು ಜಪ್ತಿ ಮಾಡುತ್ತಿದ್ದಾರೆ.

Mangalore is a complete lock down
ಮಂಗಳೂರು ಸಂಪೂರ್ಣ ಲಾಕ್ ಡೌನ್
author img

By

Published : Apr 10, 2020, 12:17 PM IST

ಮಂಗಳೂರು : ಕೊರೊನಾ ಸೋಂಕು ಹರಡದಂತೆ ಮಂಗಳೂರು ಸಂಪೂರ್ಣ ಲಾಕ್‌ಡೌನ್ ಆಗಿದೆ. ಜನರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಗತ್ಯ ಸಾಮಾಗ್ರಿ ಖರೀದಿ, ವೈದ್ಯಕೀಯ ತುರ್ತು ಸೇವೆಗಳಿಗಷ್ಟೇ ಜನ ಹೊರ ಬರುತ್ತಿದ್ದಾರೆ. ಉಳಿದಂತೆ ಮನೆಯಲ್ಲಿಯೇ ಉಳಿದು ಜಿಲ್ಲಾಡಳಿತದ ಮನವಿಗೆ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ.

ಅಗತ್ಯ ವಸ್ತುಗಳಿಗೆ, ವೈದ್ಯಕೀಯ ಸೇವೆಗಳಿಗೆ ಬರುವವರೂ ಸಾಮಾಜಿಕ ಅಂತರವನ್ನು ನಿರಂತರವಾಗಿ ಪಾಲಿಸುತ್ತಾ ಬರುತ್ತಿದ್ದಾರೆ. ಪೊಲೀಸರೂ ಅಲ್ಲಲ್ಲಿ ನಾಕಾ ಬಂದಿ ವ್ಯವಸ್ಥೆ ಮಾಡಿ ಅನಗತ್ಯ ತಿರುಗಾಡುತ್ತಿರುವವರ ಮೇಲೆ ಶಿಸ್ತು ಕ್ರಮ ಜರುಗಿಸಿ ವಾಹನಗಳನ್ನು ಜಪ್ತಿ ಮಾಡುತ್ತಿದ್ದಾರೆ.

ಬಸ್, ಆಟೋರಿಕ್ಷಾ ಸಂಪೂರ್ಣ ಸ್ಥಗಿತಗೊಳಿಸಿರುವ ಪರಿಣಾಮ ವಾಹನ ಸಂಚಾರಗಳಿಗೂ ಕಡಿವಾಣ ಬಿದ್ದಿದೆ. ಅಗತ್ಯ ವಸ್ತುಗಳ ಖರೀದಿಗಾಗಿ ವಿರಳವಾಗಿ ಖಾಸಗಿ ವಾಹನಗಳು, ಪಾಸ್ ವ್ಯವಸ್ಥೆ ಇರುವ ವಾಹನಗಳು, ವೈದ್ಯಕೀಯ ಸೇವೆಯಲ್ಲಿರುವ ವಾಹನಗಳು ಹಾಗೂ ಅಗತ್ಯ ಸಾಮಾಗ್ರಿಗಳ ಸರಬರಾಜು ವಾಹನಗಳು ಮಾತ್ರ ರಸ್ತೆಯಲ್ಲಿ ಸಂಚಾರ ನಡೆಸುತ್ತಿವೆ. ಒಟ್ಟಿನಲ್ಲಿ ಜಿಲ್ಲಾಡಳಿತ ಕರೆ ನೀಡಿರುವ ಸಂಪೂರ್ಣ ಲಾಕ್‌ಡೌನ್‌ಗೆ ಮಂಗಳೂರಿನಲ್ಲಿ ಉತ್ತಮ ಪ್ರತಿಕ್ರಿಯೆ ಲಭ್ಯವಾಗುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.