ETV Bharat / state

Free food: ಹಸಿದವರ ಹೊಟ್ಟೆ ತುಂಬಿಸಿದ ಹೊರನಾಡು ಅನ್ನಪೂರ್ಣೇಶ್ವರಿಯ ಅಕ್ಕಿ ಹರಕೆ - ಅಕ್ಕಿ ಹರಕೆ,

ಮಂಗಳೂರಿನ ಪಾಂಡೇಶ್ವರ ಶ್ರೀ ಗಣೇಶ್ ಹೋಟೆಲ್ ಮಾಲೀಕ ಹರಿಪ್ರಸಾದ್ ಶೆಟ್ಟಿಯವರು ನಿತ್ಯವೂ ಒಂದು ಹಿಡಿ ಅಕ್ಕಿಯನ್ನು ಹರಕೆಯಾಗಿ ಎತ್ತಿಟ್ಟು ಬಳಿಕ ವರ್ಷ, ಆರು ತಿಂಗಳಿಗೊಮ್ಮೆ ಹೊರನಾಡಿಗೆ ನೀಡುತ್ತಿದ್ದರು. ಆದರೆ ಲಾಕ್​ಡೌನ್​ನಿಂದ ಹರಕೆ ತೀರಿಸಲು ಸಾಧ್ಯವಾಗದೆ, ಅದೇ ಅಕ್ಕಿಯನ್ನು ನಿರಾಶ್ರಿತರ ಹೊಟ್ಟೆ ತುಂಬಿಸಲು ವಿನಿಯೋಗಿಸಿದ್ದಾರೆ.

ಅಕ್ಕಿ ಹರಕೆ
ಅಕ್ಕಿ ಹರಕೆ
author img

By

Published : May 27, 2021, 7:00 PM IST

ಮಂಗಳೂರು: ಹೊರನಾಡು ಶ್ರೀ ಅನ್ನಪೂರ್ಣೇಶ್ವರಿ ದೇವಿಗೆ ಹರಕೆಯಾಗಿ ಎತ್ತಿಟ್ಟ ಅಕ್ಕಿಯನ್ನು ಮಂಗಳೂರಿನ ಹೋಟೆಲ್ ಮಾಲೀಕರೊಬ್ಬರು ನಿರಾಶ್ರಿತರ‌ ಹೊಟ್ಟೆ ತುಂಬಿಸಲು ವಿನಿಯೋಗಿಸಿ ಮಾನವೀಯತೆ ಮೆರೆದಿದ್ದಾರೆ.

ಮಂಗಳೂರಿನ ಪಾಂಡೇಶ್ವರ ಶ್ರೀ ಗಣೇಶ್ ಹೋಟೆಲ್ ಮಾಲೀಕ ಹರಿಪ್ರಸಾದ್ ಶೆಟ್ಟಿಯವರು ಈ ಮಾನವೀಯ ಕಾರ್ಯದಲ್ಲಿ ತೊಡಗಿದವರು. ಎಂಬಿಎ ಪದವೀಧರರಾಗಿರುವ ಇವರು, ನಾಲ್ಕು ವರ್ಷಗಳ ಹಿಂದೆ ಹೋಟೆಲ್ ಆರಂಭಿಸಿದ್ದರು. ವ್ಯಾಪಾರ ಅಭಿವೃದ್ಧಿಗಾಗಿ ಹೊರನಾಡು ಕ್ಷೇತ್ರಕ್ಕೆ ತೆರಳಿ ಶ್ರೀ ಅನ್ನಪೂರ್ಣೇಶ್ವರಿ ದೇವಿಯಲ್ಲಿ ಪ್ರಾರ್ಥಿಸಿದ್ದರು. ಈ ಸಂದರ್ಭ ಅಲ್ಲಿನ ಪುರೋಹಿತರು ನಿತ್ಯವೂ ಹೋಟೆಲ್ ಊಟಕ್ಕೆ ಬಳಸುವ ಅಕ್ಕಿಯಲ್ಲಿ ಒಂದು ಹಿಡಿ ಅಕ್ಕಿಯನ್ನು ಕ್ಷೇತ್ರಕ್ಕೆ ಹರಕೆಯಾಗಿ ಎತ್ತಿಡಿ ಎಂದಿದ್ದರು.

ಲಾಕ್​ಡೌನ್ ನಲ್ಲಿ ಹರಕೆಗಾಗಿ ಎತ್ತಿಟ್ಟ 400ಕೆಜಿ ಅಕ್ಕಿಯನ್ನು ನಿರಾಶ್ರಿತರಿಗೆ ಹಂಚಿಕೆ

ಆ ಪ್ರಕಾರವಾಗಿ ಹರಿಪ್ರಸಾದ್ ಶೆಟ್ಟಿ ಕಳೆದ ನಾಲ್ಕು ವರ್ಷಗಳಿಂದಲೂ ನಿತ್ಯವೂ ಒಂದು ಹಿಡಿ ಅಕ್ಕಿಯನ್ನು ಹರಕೆಯಾಗಿ ಎತ್ತಿಡಲು ಆರಂಭಿಸಿದ್ದಾರೆ. ಬಳಿಕ ವರ್ಷ, ಆರು ತಿಂಗಳಿಗೊಮ್ಮೆ ಅಕ್ಕಿಯನ್ನು ಹೊರನಾಡಿಗೆ ಹರಕೆಯಾಗಿ ತೀರಿಸುತ್ತಿದ್ದರು. ಆದರೆ ಲಾಕ್​ಡೌನ್ ನಿಂದ ಹರಕೆ ತೀರಿಸಲು ಸಾಧ್ಯವಾಗದ್ದಕ್ಕೆ ಅದೇ ಅಕ್ಕಿಯನ್ನು ನಿರಾಶ್ರಿತರ ಹಸಿದವರ ಹೊಟ್ಟೆ ವಿನಿಯೋಗಿಸಿದ್ದಾರೆ. ಈ ಮೂಲಕ ದಿನವೂ ಇದೇ ಅಕ್ಕಿಯ ಅನ್ನವನ್ನು ಮಾಡಿ ಸಾಂಬಾರ್​ನೊಂದಿಗೆ ನಿರಾಶ್ರಿತರಿಗೆ ಹಂಚುತ್ತಿದ್ದಾರೆ.

ಕಳೆದ ಲಾಕ್​ಡೌನ್ ನಲ್ಲಿ ಹರಕೆಗಾಗಿ ಎತ್ತಿಟ್ಟ 400ಕೆಜಿ ಅಕ್ಕಿಯನ್ನು ನಿರಾಶ್ರಿತರಿಗೆ ಹಂಚಿದ್ದಾರೆ. ಈ ಬಾರಿ‌ಯ ಲಾಕ್​ಡೌನ್ ಸಂದರ್ಭದಲ್ಲಿ 150ಕೆಜಿ ಹರಕೆಯ ಅಕ್ಕಿ ಶೇಖರಣೆಯಾಗಿದೆ. ಎರಡನೇ ಹಂತದ ಲಾಕ್​ಡೌನ್ ಆರಂಭವಾದಾಗಿನಿಂದಲೂ ಮತ್ತೆ ನಿರಾಶ್ರಿತರಿಗೆ ಅನ್ನ ನೀಡುವ ಕಾರ್ಯದಲ್ಲಿ ತೊಡಗಿದ್ದಾರೆ. ದಿನವೂ ಮಧ್ಯಾಹ್ನ 350-400 ಮಂದಿಗೆ ಊಟ ಕೊಡುವ ಕಾರ್ಯ ನಡೆಯುತ್ತಿದ್ದು, ದಿನಕ್ಕೆ 4-5 ಸಾವಿರ ರೂ. ಇದಕ್ಕಾಗಿ ವ್ಯಯ ಮಾಡಲಾಗುತ್ತಿದೆ.

ಈ ಕಾರ್ಯದಲ್ಲಿ ಹೋಟೆಲ್​ ಸಿಬ್ಬಂದಿ ಜೊತೆಗೆ ಹತ್ತಿರದ ಪಾಂಡೇಶ್ವರ ಅಗ್ನಿಶಾಮಕ ದಳ ಸಿಬ್ಬಂದಿಯೂ ಕೈಜೋಡಿಸಿದ್ದು, ನಿರಾಶ್ರಿತರಿಗೆ ‌ಅನ್ನಹಾರ ಸರಬರಾಜು ಮಾಡಲು ಅಗ್ನಿಶಾಮಕ ದಳದ ವಾಹನವನ್ನೂ ಒದಗಿಸುತ್ತಿದ್ದಾರೆ. ಅಲ್ಲದೇ ಕೆಲ ದಾನಿಗಳೂ ಈ ಕೈಂಕರ್ಯದಲ್ಲಿ ಕೈಜೋಡಿಸಿದ್ದಾರೆಂದು ಹರಿಪ್ರಸಾದ್ ಶೆಟ್ಟಿ ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.