ETV Bharat / state

ಅಪಘಾತದಲ್ಲಿ ಹೆತ್ತವರು, ಸಹೋದರ-ಸಹೋದರಿ ಕಳ್ಕೊಂಡ ವಿದ್ಯಾರ್ಥಿನಿಯ ಮೇರು ಸಾಧನೆ - ಕುಟುಂಬಸ್ಥರನ್ನು ಕಳೆದುಕೊಂಡರೂ ಸಾಧನೆಯಲ್ಲಿ‌ ಫುಲ್ ಮಾರ್ಕ್ಸ್

ಮೂಲತಃ ಕೊಡಗಿನವಳಾದ ಪ್ರಕೃತಿ ಅಶೋಕ್ ಮೂಡುಬಿದಿರೆಯ ಎಕ್ಸಲೆಂಟ್ ಕಾಲೇಜಿನ ವಿದ್ಯಾರ್ಥಿನಿ. ಈಕೆ ಪಿಯುಸಿ ಪರೀಕ್ಷೆಯಲ್ಲಿ ಶೇ.92 ಪ್ರತಿಶತ ಅಂಕಗಳಿಸಿ ಸಾಧನೆ ಮೆರೆದಿದ್ದಾಳೆ.

2nd PUC Examination
ಕುಟುಂಬಸ್ಥರನ್ನು ಕಳೆದುಕೊಂಡರೂ ಸಾಧನೆಯಲ್ಲಿ‌ ಫುಲ್​ಮಾರ್ಕ್ಸ್
author img

By

Published : Jul 18, 2020, 2:39 PM IST

Updated : Jul 18, 2020, 6:08 PM IST

ಮಂಗಳೂರು: ಅಪಘಾತವೊಂದರಲ್ಲಿ‌ ಹೆತ್ತವರು, ಸಹೋದರ, ಸಹೋದರಿ ಸಮೇತ ತನ್ನ ಮನೆಯವರನ್ನೆಲ್ಲಾ ಕಳೆದುಕೊಂಡ ವಿದ್ಯಾರ್ಥಿನಿ, ಈ ದುಃಖವನ್ನು ಮೆಟ್ಟಿ ನಿಂತು ಪಿಯುಸಿ ಪರೀಕ್ಷೆಯಲ್ಲಿ ಶೇ.92 ಪ್ರತಿಶತ ಅಂಕಗಳಿಸಿ ಸಾಧನೆ ಮೆರೆದಿದ್ದಾಳೆ.

ಕುಟುಂಬಸ್ಥರನ್ನು ಕಳೆದುಕೊಂಡರೂ ಸಾಧನೆಯಲ್ಲಿ‌ ಫುಲ್​ಮಾರ್ಕ್ಸ್: ಪಿಯುಸಿಯಲ್ಲಿ ಪ್ರಕೃತಿಗೆ 92% ಅಂಕ

ಕೊಡಗಿನವಳಾದ ಪ್ರಕೃತಿ ಅಶೋಕ್ ಮೂಡುಬಿದಿರೆಯ ಎಕ್ಸಲೆಂಟ್ ಕಾಲೇಜಿನ ವಿದ್ಯಾರ್ಥಿನಿ.‌ ಕಳೆದ ಸೆಪ್ಟೆಂಬರ್​ನ ಗಣೇಶ ಚತುರ್ಥಿಯಂದು ಮೂಡುಬಿದಿರೆಯ ಎಕ್ಸಲೆಂಟ್ ಕಾಲೇಜಿನ ಹಾಸ್ಟೇಲ್​ನಲ್ಲಿದ್ದ ಪ್ರಕೃತಿಯನ್ನು ಕಾಣಲು ಆಕೆಯ ತಂದೆ ನಿಡ್ಯಮಲೆ ಅಶೋಕ್, ತಾಯಿ ಹೇಮಲತಾ, ಸಹೋದರ ಯಶಸ್, ಸಹೋದರಿ ವರ್ಷಾ ಕಾರಿನಲ್ಲಿ ಬರುತ್ತಿರುವಾಗ ಬೆಳಗ್ಗಿನ ಜಾವ ಪುತ್ತೂರಿನ ಬಳಿ ಅಪಘಾತ ಸಂಭವಿಸಿತ್ತು. ಪರಿಣಾಮ ಕಾರು ರಸ್ತೆ ಬೀದಿಯಲ್ಲಿರುವ ಕೆರೆಗೆ ಬಿದ್ದು ನಾಲ್ವರೂ ಮೃತಪಟ್ಟಿದ್ದರು.

ಈ ದುರಂತದಿಂದ ಪ್ರಕೃತಿಗೆ ಬಹುದೊಡ್ಡ ಆಘಾತವಾಗಿದ್ದು, ಆಕೆಯನ್ನು ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯ ಯುವರಾಜ್ ಜೈನ್ ಹಾಗೂ ರಶ್ಮಿತಾ ದಂಪತಿ ಸ್ವಂತ ಮಗಳಂತೆ ಆರೈಕೆ ಮಾಡಿದ್ದರು. ಅವಳ‌ಲ್ಲಿನ ನೋವನ್ನು ನಿವಾರಿಸಿ, ಆತ್ಮಶಕ್ತಿ‌ ತುಂಬುವಲ್ಲಿ ಅವರು ಕಠಿಣ ಪರಿಶ್ರಮ ವಹಿಸಿದ್ದಾರೆ. ಆ ಬಳಿಕ ಆಕೆಯ ಎಲ್ಲಾ ಬೇಕು, ಬೇಡಗಳನ್ನು‌ ನಿಭಾಯಿಸುತ್ತಾ ಪೋಷಕರಾಗಿ ನೋಡಿಕೊಂಡಿದ್ದಾರೆ. ಜೊತೆಗೆ ಕಾಲೇಜಿನ ಶಿಕ್ಷಕರು, ಕ್ಲಾಸ್​ಮೇಟ್ಸ್​‌ ಆಕೆಯ ಬಗ್ಗೆ ಕಾಳಜಿ ವಹಿಸಿದ್ದಾರೆ.

ಇದೆಲ್ಲವೂ ಆಕೆಯ ನೋವುಗಳನ್ನು ಮೆಟ್ಟಿ‌ ನಿಲ್ಲಲು ಸಹಕಾರಿಯಾಯಿತು. ಮುಂದೆ ಪಿಯುಸಿ ಪರೀಕ್ಷೆಯಲ್ಲಿ ಶೇ.92 (550) ಅಂಕ ಗಳಿಸಿ ಸಾಧನೆ ತೋರಿದ್ದಾಳೆ.

ತನ್ನ ಸಾಧನೆಯ ಹಿಂದೆ ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯ ಮ್ಯಾನೇಜ್​ಮೆಂಟ್ ಅಲ್ಲದೆ ಶಿಕ್ಷಕರು, ಸಹಪಾಠಿಗಳ ಕೊಡುಗೆ ಇದೆ ಎಂದು ಹೇಳುವ ಪ್ರಕೃತಿ, ಜೀವನದಲ್ಲಿ‌ ಯಾವ ರೀತಿ ಕಷ್ಟಗಳು ಎದುರಾಗುತ್ತವೆ ಎಂದು ಹೇಳಲು ಅಸಾಧ್ಯ. ಅದೆಲ್ಲವನ್ನೂ ಎದುರಿಸುವ ಛಲವಿದ್ದರೆ ಎಲ್ಲವೂ ಸಾಧ್ಯ ಎನ್ನುತ್ತಾಳೆ.

Last Updated : Jul 18, 2020, 6:08 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.