ಮಂಗಳೂರು: ಇಲ್ಲಿನ ಸುರತ್ಕಲ್ ಬಳಿ ಹಾಕಲಾಗಿದ್ದ ಪ್ರಧಾನಮಂತ್ರಿಗಳ ಭಾವಚಿತ್ರವಿರುವ ಬ್ಯಾನರ್ಗೆ ಸಗಣಿ, ಕೆಸರು ಬಳಿದಿದ್ದವನನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಸುರತ್ಕಲ್ ಗೋವಿಂದ ದಾಸ ಕಾಲೇಜ್ ಬಳಿ ಹಾಕಲಾಗಿದ್ದ ಮೋದಿ ಭಾವಚಿತ್ರದ ಬ್ಯಾನರ್ಗೆ ಅ.2ರಂದು ಕೆಸರು, ಸಗಣಿ ಬಳಿಯಲಾಗಿತ್ತು.
ಈ ಘಟನೆ ಸಂಬಂಧ ಸುರತ್ಕಲ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಸಿಸಿಟಿವಿ ಪರಿಶೀಲಿಸಿದ ಪೊಲೀಸರು ಆತನಿಗಾಗಿ ಶೋಧ ನಡೆಸಿದ್ದರು. ಇದೀಗ ಕೃತ್ಯ ನಡೆಸಿದವನನ್ನು ಪತ್ತೆ ಮಾಡಲಾಗಿದ್ದು, ಆತ ಮಾನಸಿಕ ಅಸ್ವಸ್ಥ ಎಂಬುದು ತಿಳಿದುಬಂದಿದೆ.
ಇದನ್ನೂ ಓದಿ: ಸಿಸಿಟಿವಿ ಹಾಕಿಸದಿದ್ದರೆ ಬೀಳುತ್ತೆ ದುಬಾರಿ ದಂಡ: ಹಾಸನ ವ್ಯಾಪಾರಿಗಳೇ ಎಚ್ಚರ