ETV Bharat / state

ಊಟದ ತಟ್ಟೆ ತೊಳೆಯುವ ವಿಚಾರಕ್ಕೆ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯ; ಆರೋಪಿ ಸೆರೆ - ETV Bharat kannada News

ಬಜಪೆ ಠಾಣಾ ವ್ಯಾಪ್ತಿಯಲ್ಲಿ ಕ್ಷುಲ್ಲಕ ಕಾರಣಕ್ಕೆ ತನ್ನೊಂದಿಗಿದ್ದ ವ್ಯಕ್ತಿಯನ್ನು ಕೊಲೆಗೈದ ಆರೋಪಿ ಪೊಲೀಸರ ಅತಿಥಿಯಾಗಿದ್ದಾನೆ.

Accused arrested
ಆರೋಪಿ ಬಂಧನ
author img

By

Published : Mar 8, 2023, 1:16 PM IST

ಮಂಗಳೂರು (ದಕ್ಷಿಣ ಕನ್ನಡ) : ಊಟದ ತಟ್ಟೆ ತೊಳೆಯುವ ವಿಚಾರವಾಗಿ ನಡೆದ ಮಾತಿನ ಚಕಮಕಿ ಯುವಕನೊಬ್ಬನ ಹತ್ಯೆಯ ಮೂಲಕ ಅಂತ್ಯ ಕಂಡ ಘಟನೆ ಇಲ್ಲಿನ ಮರವೂರು ಗ್ರಾಮದ ಕೋಸ್ಟಲ್​ ಸೈಟ್​ನಲ್ಲಿ ನಡೆದಿದೆ. ಆರೋಪಿಯನ್ನು ಬಜ್ಪೆ ಪೊಲೀಸರು ಬಂಧಿಸಿದ್ದಾರೆ. ಉತ್ತರ ಪ್ರದೇಶದ ಮಹರಾಜ್ ಘಂಜ್​ನ ಹರ್ ಪುರದ ಸಂಜಯ್ (28) ಕೊಲೆಯಾಗಿದ್ದಾನೆ. ಮಹರಾಜ್ ಘಂಜ್‌ನ ಬದಲಸಲುಯ ಖುರ್ದ್‌ನ ಸೋಹನ್ ಯಾದವ್(19) ಆರೋಪಿ ಎಂದು ತಿಳಿದುಬಂದಿದೆ.

ವಿವರ: ಬಜಪೆ ಠಾಣಾ ವ್ಯಾಪ್ತಿಯ ಮರವೂರು ಗ್ರಾಮದ ಕೋಸ್ಟಲ್ ಗಾರ್ಡ್ ಸೈಟ್​ನಲ್ಲಿ ಕೂಲಿ ಕಾರ್ಮಿಕರಾಗಿ ಸಂಜಯ್ ಮತ್ತು ಸೊಹಾನ್ ಯಾದವ್ ಕೆಲಸ ಮಾಡುತ್ತಿದ್ದರು. ಎಂದಿನಂತೆ ಮಾರ್ಚ್ 5ರಂದು ಊಟ ಮುಗಿಸಿ ತಟ್ಟೆ ತೊಳೆಯಲು ಹೋಗಿದ್ದಾಗ ಇಬ್ಬರ ನಡುವೆ ಗಲಾಟೆ ಆರಂಭವಾಗಿದೆ. ಈ ಗಲಾಟೆ ಮೊದಲು ಪರಸ್ಪರ ಮಾತಿಗೆ ಮಾತು ಬೆಳೆದು ಶುರುವಾಗಿದ್ದು, ಕೋಪಗೊಂಡ ಸೊಹನ್ ಯಾದವ ಸಂಜಯ್‌ನನ್ನು ಬಲವಾಗಿ ನೆಲಕ್ಕೆ ತಳ್ಳಿದ್ದಾನೆ. ಪರಿಣಾಮ ಸಂಜಯ ಹಿಮ್ಮುಖವಾಗಿ ಬಿದ್ದು ಆತನ ತಲೆಗೆ ಗಂಭೀರವಾದ ಗಾಯವಾಗಿತ್ತು. ಬಳಿಕ ಆಸ್ಪತ್ರೆಗೆ ದಾಖಲಾಗಿದ್ದ ಆತ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದ. ಈ ಘಟನೆ ನಡೆದ ಬಳಿಕ ಆರೋಪಿ ಸೋಹನ್ ಯಾದವ್ ಸ್ಥಳದಿಂದ ಪರಾರಿಯಾಗಿದ್ದ. ಈತ ಮಾರ್ಚ್ 7 ರಂದು ಮಧ್ಯಾಹ್ನ 1 ಗಂಟೆಯ ವೇಳೆಗೆ ಊರಿಗೆ ಹೋಗಲು ಯತ್ನಿಸುತ್ತಿದ್ದ ಸಂದರ್ಭದಲ್ಲಿ ಬಜಪೆ ಪೊಲೀಸರು ಮಂಗಳೂರು ರೈಲ್ವೇ ನಿಲ್ದಾಣದ ಬಳಿ ವಶಕ್ಕೆ ಪಡೆದು ನಂತರ ಬಂಧಿಸಿದ್ದಾರೆ.

ಆರೋಪಿಯ ಬಂಧನ ಕಾರ್ಯಾಚರಣೆಯಲ್ಲಿ ಬಜಪೆ ಠಾಣಾ ಪಿ.ಐ.ಪ್ರಕಾಶ್, ಪಿ.ಸ್.ಐ. ಗುರು ಕಾಂತಿ, ಪೂವಪ್ಪ, ಎ.ಎಸ್.ಐ. ರಾಮ ಪೂಜಾರಿ, ಮತ್ತು ಹೆಡ್‌ ಕಾನ್ಸ್‌ಟೇಬಲ್‌ಗಳಾದ ಪುರುಷೋತ್ತಮ, ಸಂತೋಷ್ ಡಿ.ಕೆ. ಮಹೇಶ್, ಸುಜನ್, ರಾಜೇಶ್, ರಶೀದ್ ಹಾಗೂ ಸಂಜೀವ ಭಜಂತ್ರಿ, ಪ್ರೇಮ್ ಕುಮಾರ್ ಪಾಲ್ಗೊಂಡಿದ್ದರು.

ಜ್ಯುವೆಲ್ಲರಿ ಸೇಲ್ಸ್ ಮ್ಯಾನೇಜರ್ ಬಂಧನ: ಉದ್ಯೋಗಿಯೊಂದಿಗೆ ಅನೈಸರ್ಗಿಕ ಲೈಂಗಿಕ ಕ್ರಿಯೆ ನಡೆಸಿದ ಆರೋಪದ ಮೇಲೆ ಜ್ಯುವೆಲ್ಲರಿಯೊಂದರ ಸೇಲ್ಸ್ ಮ್ಯಾನೇಜರ್‌ನನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಮೊಗ್ರಾಲ್​ನ ಮೊಹಮ್ಮದ್ ಕುಂಞಿ (52) ಬಂಧಿತ ಆರೋಪಿ. ಈತ ಮಂಗಳೂರಿನ ಜ್ಯುವೆಲ್ಲರಿಯೊಂದರಲ್ಲಿ ಸೇಲ್ಸ್ ಮ್ಯಾನೇಜರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ.

ಈ ಜ್ಯುವೆಲ್ಲರಿಯ ಮಂಗಳೂರು ಬ್ರಾಂಚ್​ನ ಯುವಕನೊಬ್ಬನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಆತನನ್ನು ಕಂಕನಾಡಿಯ ಪ್ರದೇಶವೊಂದಕ್ಕೆ ಕರೆದೊಯ್ದು ಒತ್ತಾಯಪೂರ್ವಕ ಅನೈಸರ್ಗಿಕ ಲೈಂಗಿಕ ಕ್ರಿಯೆ ನಡೆಸಿದ್ದ ಎಂದು ಆರೋಪಿಸಲಾಗಿದೆ. ಈ ಬಗ್ಗೆ ಸಂತ್ರಸ್ತ ಯುವಕ ಕದ್ರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದ. ಈ ದೂರಿನಂತೆ ಪೊಲೀಸರು ಐಪಿಸಿ ಸೆಕ್ಷನ್ 377 ಮತ 506 ರಂತೆ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಕೇರಳದ ಕಾಸರಗೋಡಿನಲ್ಲಿ ಬಂಧಿಸಿದ್ದು, ನಗರದ ಕೋರ್ಟ್‌ಗೆ ಹಾಜರುಪಡಿಸಿದ್ದರು.

ಇದನ್ನೂ ಓದಿ :ಮಂಗಳೂರು: ಮಲಾರ್ ಪಲ್ಲಿಯಬ್ಬ ಕೊಲೆ ಪ್ರಕರಣದಲ್ಲಿ ಐವರು ದೋಷಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.