ಬಂಟ್ವಾಳ(ದಕ್ಷಿಣ ಕನ್ನಡ) : ತೆಂಗಿನಕಾಯಿ ಕೀಳುವ ಸಂದರ್ಭದಲ್ಲಿ ವ್ಯಕ್ತಿಯೋರ್ವ ಆಯತಪ್ಪಿ ಮರದಿಂದ ಬಿದ್ದು ಸಾವನ್ನಪ್ಪಿದ ಘಟನೆ ನಾವೂರ ಎಂಬಲ್ಲಿ ನಡೆದಿದೆ. ನಾವೂರ, ಸೂರ ನಿವಾಸಿಯಾದ ಸುರೇಶ್ ಮೃತಪಟ್ಟ ವ್ಯಕ್ತಿ.
ಸುರೇಶ್ ಅವರು ಹಲವಾರು ವರ್ಷಗಳಿಂದ ತೆಂಗಿನಕಾಯಿ, ಅಡಿಕೆ ಮರದಿಂದ ಕಾಯಿ ಕೀಳುವ ಕೂಲಿ ಮಾಡುತ್ತಿದ್ದರು. ಎಂದಿನಂತೆ ತೆಂಗಿನಕಾಯಿ ಕೀಳುವು ಕೂಲಿಗಾಗಿ ನಾವೂರ ಅದರ್ಕಳ ವಸಂತ ಅವರ ಮನೆಗೆ ಹೋಗಿದ್ದರು. ವಸಂತ ಅವರ ತೋಟದಲ್ಲಿ ತೆಂಗಿನ ಕಾಯಿ ಕೀಳುವ ಸಂದರ್ಭದಲ್ಲಿ ಆಯತಪ್ಪಿ ಮರದಿಂದ ಕೆಳಗೆ ಬಿದ್ದಿದ್ದಾರೆ.
ಮರದಿಂದ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡ ಅವರನ್ನು ಕೂಡಲೇ ಬಂಟ್ವಾಳ ಆಸ್ಪತ್ರೆಗೆ ಚಿಕಿತ್ಸೆಗೆಂದು ತರಲಾಯಿತು. ಅಲ್ಲಿನ ವೈದ್ಯರು ಪರೀಕ್ಷೆ ನಡೆಸಿ ಗಂಭೀರವಾದ ಗಾಯವಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಸೂಚಿಸಿದರು. ಮಂಗಳೂರಿಗೆ ಕರೆದುಕೊಂಡು ಹೋಗುವ ವೇಳೆ ಆತ ಮೃತಪಟ್ಟಿರುವ ಬಗ್ಗೆ ವೈದ್ಯರು ಪರೀಕ್ಷೆ ನಡೆಸಿ ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಬಂಟ್ವಾಳ ಗ್ರಾಮಾಂತರ ಪೊಲೀಸರು ಬೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ : ಉಪ್ಪಿನಂಗಡಿಯಲ್ಲಿ ಕಾಡಾನೆ ದಾಳಿ: ತಂದೆ ಸಾವು, ಮಗ ಗಂಭೀರ