ETV Bharat / state

ನವಮಂಗಳೂರು ಬಂದರಿಗೆ 3ನೇ ವಿದೇಶಿ ಪ್ರಯಾಣಿಕ ಹಡಗು ಆಗಮನ - ನವಮಂಗಳೂರು ಬಂದರಿಗೆ ವಿದೇಶಿ ಹಡಗು

M.S.Nautica cruise vessel: 501 ವಿದೇಶಿ ಪ್ರಯಾಣಿಕರಿದ್ದ M S Nautica ಐಷಾರಾಮಿ ಪ್ರಯಾಣಿಕ ಕ್ರೂಸ್ ಹಡಗು ಇಂದು ಮಂಗಳೂರು ತಲುಪಿತು. ವಿದೇಶಿ ಪ್ರವಾಸಿಗರಿಗೆ ಚೆಂಡೆ, ಯಕ್ಷಗಾನ ವೇಷಧಾರಿಗಳ ಮೂಲಕ ಸಾಂಪ್ರದಾಯಿಕ ಸ್ವಾಗತ ಕೋರಲಾಯಿತು.

ವಿದೇಶಿ ಪ್ರಯಾಣಿಕ ಹಡಗು
ವಿದೇಶಿ ಪ್ರಯಾಣಿಕ ಹಡಗು
author img

By ETV Bharat Karnataka Team

Published : Dec 15, 2023, 10:23 PM IST

ಮಂಗಳೂರು: ಈ‌ ಋತುವಿನ ಮೂರನೇ ವಿದೇಶಿ ಪ್ರಯಾಣಿಕ ಕ್ರೂಸ್ ಹಡಗು ಇಂದು ಮಂಗಳೂರಿಗೆ ಆಗಮಿಸಿತು. M.S.Nautica ನವಮಂಗಳೂರು ಬಂದರಿಗೆ ಬೆಳಿಗ್ಗೆ 8 ಗಂಟೆಗೆ ಬಂದಿದ್ದು, ಹಡಗಿನಲ್ಲಿ 501 ಪ್ರಯಾಣಿಕರು ಮತ್ತು 395 ಸಿಬ್ಬಂದಿ ಇದ್ದರು. ಈ ಹಡಗನ್ನು ಬಂದರಿನ ಬರ್ತ್ ಸಂಖ್ಯೆ 04ರಲ್ಲಿ ಲಂಗರು ಹಾಕಲಾಯಿತು.

ಹಡಗಿನಿಂದ ಇಳಿಯುತ್ತಿರುವ ವಿದೇಶಿ ಪ್ರಯಾಣಿಕರು
ಹಡಗಿನಿಂದ ಇಳಿಯುತ್ತಿರುವ ವಿದೇಶಿ ಪ್ರಯಾಣಿಕರು

ಹಡಗು ಒಟ್ಟಾರೆ 180.5 ಮೀಟರ್ ಉದ್ದ, 30,277 ಒಟ್ಟು ಟನ್ ಸಾಮರ್ಥ್ಯ ಮತ್ತು 6.0 ಮೀಟರ್‌ ಕರಡು ಸಾಗಿಸುವ ಸಾಮರ್ಥ್ಯ ಹೊಂದಿದೆ. ವಿದೇಶಿ ಪ್ರವಾಸಿಗರಿಗೆ ಚೆಂಡೆ ಮತ್ತು ಯಕ್ಷಗಾನ ವೇಷಗಳ ಮೂಲಕ ಸಾಂಪ್ರದಾಯಿಕ ಸ್ವಾಗತ ನೀಡಲಾಯಿತು.

ಹಡಗಿನಿಂದ ಇಳಿಯುತ್ತಿರುವ ವಿದೇಶಿ ಪ್ರಯಾಣಿಕರು
ಹಡಗಿನಿಂದ ಇಳಿಯುತ್ತಿರುವ ವಿದೇಶಿ ಪ್ರಯಾಣಿಕರು

ಕ್ರೂಸ್ ಲಾಂಜ್‌ನಲ್ಲಿ ವಿವಿಧ ಸಾಂಸ್ಕೃತಿಕ ಆಕರ್ಷಣೆಗೆ ವ್ಯವಸ್ಥೆ ಮಾಡಲಾಗಿತ್ತು. ಪ್ರವಾಸಿಗರಿಗೆ ವೈದ್ಯಕೀಯ ತಪಾಸಣೆ, ಬಹು ವಲಸೆ ಮತ್ತು ಕಸ್ಟಮ್ಸ್ ಸೇರಿದಂತೆ ತ್ವರಿತ ಚಲನೆಗಾಗಿ ಕೌಂಟರ್‌ಗಳು, ಬಸ್‌ಗಳು ಮತ್ತು ವಿಶೇಷ ಟ್ಯಾಕ್ಸಿಗಳ ವ್ಯವಸ್ಥೆ ಮಾಡಲಾಗಿತ್ತು.

ವಿದೇಶಿ ಪ್ರಯಾಣಿಕರಿಗೆ ಸಾಂಪ್ರದಾಯಿಕ ಸ್ವಾಗತ
ವಿದೇಶಿ ಪ್ರಯಾಣಿಕರಿಗೆ ಸಾಂಪ್ರದಾಯಿಕ ಸ್ವಾಗತ

ಆಯುಷ್ ಸಚಿವಾಲಯದಿಂದ ಧ್ಯಾನ ಕೇಂದ್ರ, ವರ್ಚುವಲ್ ರಿಯಾಲಿಟಿ ಅನುಭವ ವಲಯ, NMPAಯಿಂದ ಉಚಿತ ವೈಫೈ ಮತ್ತು ಮಂಗಳೂರನ್ನು ಬಿಂಬಿಸುವ ಸೆಲ್ಫಿ ಸ್ಟ್ಯಾಂಡ್ ಪ್ರವಾಸೋದ್ಯಮ ಸಚಿವಾಲಯದಿಂದ ಯಕ್ಷಗಾನ ಕಲಾ ಪ್ರಕಾರ, ನಂತರ ವಿವಿಧ ಸಾಂಸ್ಕೃತಿಕ ನೃತ್ಯ ಕಾರ್ಯಕ್ರಮಗಳು ಪ್ರವಾಸಿಗರನ್ನು ರಂಜಿಸಿದವು.

ವಿದೇಶಿ ಪ್ರಯಾಣಿಕರು
ವಿದೇಶಿ ಪ್ರಯಾಣಿಕರು

ಐತಿಹಾಸಿಕ ಸ್ಥಳಗಳ ವೀಕ್ಷಣೆ: ಗೋಮಟೇಶ್ವರ ದೇವಸ್ಥಾನ, ಮೂಡಬಿದ್ರಿಯ 1000 ಕಂಬಗಳ ಬಸದಿ, ಸೋನ್ಸ್ ಫಾರ್ಮ್, ಅಚಲ್ ಗೋಡಂಬಿ ಕಾರ್ಖಾನೆ, ಗೋಕರ್ಣನಾಥ ದೇವಸ್ಥಾನ, ಸೇಂಟ್ ಅಲೋಶಿಯಸ್ ಚಾಪೆಲ್, ಸ್ಥಳೀಯ ಮಾರುಕಟ್ಟೆ ಮತ್ತು ನಗರದಲ್ಲಿರುವ ಸಾಂಪ್ರದಾಯಿಕ ಮನೆಗಳಿಗೆ ಪ್ರವಾಸಿಗರು ಭೇಟಿ ನೀಡಿದರು. ಮಂಗಳೂರಿನ ಸಂಸ್ಕೃತಿಯನ್ನು ಬಿಂಬಿಸುವ ವರ್ಣರಂಜಿತ ಸ್ಮರಣಿಕೆಗಳನ್ನು ಪ್ರವಾಸಿಗರಿಗೆ ನೀಡಲಾಯಿತು. ಹಡಗು ತನ್ನ ಮುಂದಿನ ತಾಣ ಕೊಚ್ಚಿನ್‌ಗೆ ಸಂಜೆ 5 ಗಂಟೆಗೆ ಪ್ರಯಾಣ ಬೆಳೆಸಿತು.

ವಿದೇಶಿ ಪ್ರಯಾಣಿಕರು
ವಿದೇಶಿ ಪ್ರಯಾಣಿಕರು

ಇದನ್ನು ಓದಿ: ನವ ಮಂಗಳೂರು ಬಂದರಿಗೆ ಎರಡನೇ ವಿದೇಶಿ ಪ್ರವಾಸಿ ಹಡಗು: 704 ಪ್ರವಾಸಿಗರ ಆಗಮನ

ಗುರುವಾರ ಇದೇ ಬಂದರಿಗೆ ಎರಡನೇ ಪ್ರವಾಸಿ ಹಡಗು ಆಗಮಿಸಿತ್ತು. ಫ್ರೆಡ್ ಓಲ್ಸೆನ್ ಕ್ರೂಸ್ ಲೈನ್ಸ್ ಹಡಗು 'MS BOLETTE' ಬೆಳಿಗ್ಗೆ 8 ಗಂಟೆಗೆ ಬಂದಿತ್ತು. ಹಡಗಿನಲ್ಲಿ 704 ಪ್ರಯಾಣಿಕರು ಮತ್ತು 645 ಸಿಬ್ಬಂದಿ ಇದ್ದರು. ಈ ಹಡಗಿನ ಒಟ್ಟಾರೆ ಉದ್ದ 238 ಮೀಟರ್ ಮತ್ತು 62,735 ಒಟ್ಟು ಟನ್ನೇಜ್ ಮತ್ತು ಇದು 8.1 ಮೀಟರ್ ಕರಡು ಸಾಗಿಸುವ ಸಾಮರ್ಥ್ಯ ಹೊಂದಿದೆ. ಹಡಗಿನಿಂದ ಇಳಿಯುವಾಗ ಪ್ರಯಾಣಿಕರಿಗೆ ಚೆಂಡೆ ಮತ್ತು ಹುಲಿವೇಷ ಕುಣಿತಗಳ ಮೂಲಕ ಸಾಂಪ್ರದಾಯಿಕ ಸ್ವಾಗತ ನೀಡಲಾಯಿತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.