ಮಂಗಳೂರು: ನಗರದ ಕೊಟ್ಟಾರ ಚೌಕಿಯಲ್ಲಿ ಬೆಳಗ್ಗೆ ವಾಕಿಂಗ್ ಮಾಡುತ್ತಿದ್ದ ಪಾದಚಾರಿ ಮೇಲೆ ಲಾರಿ ಹರಿದ ಪರಿಣಾಮ ಸ್ಥಳದಲ್ಲಿಯೇ ಸಾವಿಗೀಡಾದ ಘಟನೆ ನಡೆದಿದೆ. ಅಶೋಕನಗರದ ನಿವಾಸಿ ಅಶೋಕ್ (40) ಮೃತಪಟ್ಟವರು.
ಅಶೋಕ್ ಅವರು ತಮ್ಮ ಆ್ಯಕ್ಟಿವಾ ಬೈಕ್ ಅನ್ನು ರಸ್ತೆ ಬದಿ ನಿಲ್ಲಿಸಿ ಕೊಟ್ಟಾರದಲ್ಲಿ ವಾಕಿಂಗ್ ನಿರತರಾಗಿದ್ದರು. ಈ ವೇಳೆ ಹರಿಯಾಣದ ನೋಂದಣಿ ಇರುವ ಲಾರಿ ಅವರ ಮೇಲೆ ಹರಿದಿದೆ. ಲಾರಿ ಹರಿದ ಪರಿಣಾಮ ಪಾದಚಾರಿ ವ್ಯಕ್ತಿ ಗಂಭೀರ ಗಾಯಗೊಂಡಿದ್ದು, ತಕ್ಷಣ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಅಷ್ಟರಲ್ಲಿ ಅವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ಈ ಬಗ್ಗೆ ಸಂಚಾರ ಉತ್ತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನು ಓದಿ: ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಇಳಿದ ಕೆಎಸ್ಆರ್ಟಿಸಿ ಬಸ್: 25 ಮಂದಿಗೆ ಗಾಯ