ಬಂಟ್ವಾಳ: ಲಾಕ್ಡೌನ್ ಹಿನ್ನೆಲೆ ವಾಹನ ಸಂಚಾರವಿಲ್ಲದ ಕಾರಣ, ಎನ್.ಹೆಚ್.ಎ.ಐ. ಬಿ.ಸಿ.ರೋಡಿನ ಹೆದ್ದಾರಿಯಲ್ಲಿರುವ ಗುಂಡಿಗಳನ್ನು ಮುಚ್ಚುವ ಕಾರ್ಯ ಇಂದು ನಡೆಯಿತು.
ಲಾಕ್ಡೌನ್ ಕಾರಣ ಬಂಟ್ವಾಳ, ಬಿ.ಸಿ. ರೋಡಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳ ಓಡಾಟ ವಿರಳವಾಗಿದೆ. ಇದನ್ನು ಸದುಪಯೋಗಪಡಿಸಿಕೊಂಡ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ ಅಧಿಕಾರಿಗಳು ಬಿ.ಸಿ. ರೋಡಿನ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣ ಸಮೀಪ ರಸ್ತೆಯಲ್ಲಿರುವ ಗುಂಡಿಗಳಿಗೆ ತೇಪೆ ಹಾಕಿಸಿದರು.