ETV Bharat / state

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಲಾಕ್​ಡೌನ್ ಸಡಿಲಿಕೆ: ಸಂಜೆ 5 ಗಂಟೆವರೆಗೆ ಅವಕಾಶ - ದಕ್ಷಿಣ ಕನ್ನಡ ಜಿಲ್ಲೆ ಕೊರೊನಾ ವರದಿ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಪ್ರಕರಣ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಲಾಕ್​ಡೌನ್ ಸಡಿಲಿಕೆ ಮಾಡಲಾಗಿದ್ದು ಸಂಜೆ 5 ಗಂಟೆವರೆಗೆ ಜನರ ಓಡಾಟ ಮತ್ತು ವ್ಯಾಪಾರ ಚಟುವಟಿಕೆಗಳಿಗೆ ಅನುಮತಿ ನೀಡಲಾಗಿದೆ.

lockdown relaxation in dakshina kannada
ಲಾಕ್​ಡೌನ್ ಸಡಿಲಿಕೆ
author img

By

Published : Jul 1, 2021, 8:45 PM IST

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಲಾಕ್​ಡೌನ್ ಸಡಿಲಿಕೆ ಮಾಡಲಾಗಿದೆ. ಇದೀಗ ಸಂಜೆ 5 ಗಂಟೆವರೆಗೆ ಜನರ ಓಡಾಟ ಮತ್ತು ವ್ಯಾಪಾರ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸಲಾಗಿದೆ.

ರಾಜ್ಯ ಸರಕಾರದ ಈ ಹಿಂದಿನ ಆದೇಶದಂತೆ ದಕ್ಷಿಣ ಕನ್ನಡ ಜಿಲ್ಲೆ ಕೆಟಗರಿ 2ರಲ್ಲಿ ಇದ್ದು ಬೆಳಿಗ್ಗೆ 6 ಗಂಟೆಯಿಂದ 2 ಗಂಟೆವರೆಗೆ ಮಾತ್ರ ಸಡಿಲಿಕೆ ಇತ್ತು. ಇದೀಗ ಜಿಲ್ಲೆಯಲ್ಲಿ ಕೊರೊನಾ ಪ್ರಕರಣ ಕಡಿಮೆಯಾಗುತ್ತಿದ್ದು ಕೆಟಗರಿ-1ರ ಜಿಲ್ಲೆಗೆ ಸೇರಿಸಿದೆ.

ಇದರಿಂದಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾಳೆಯಿಂದ ಬೆಳಿಗ್ಗೆ 6 ಗಂಟೆಯಿಂದ 5 ಗಂಟೆವರೆಗೆ ವ್ಯಾಪಾರ ಚಟುವಟಿಕೆ ಮತ್ತು ಜನರು ಸಂಚರಿಸಲು ಅನುಮತಿ ನೀಡಲಾಗಿದೆ. ಶುಕ್ರವಾರ ಸಂಜೆಯಿಂದ‌ ಸೋಮವಾರ ಬೆಳಗ್ಗೆವರೆಗೆ ವಾರಂತ್ಯದ ಕರ್ಫ್ಯೂ ಜಾರಿಯಲ್ಲಿರುತ್ತದೆ.

ಇದನ್ನೂ ಓದಿ: Karnataka Covid update: 3,203 ಸೋಂಕಿತರು ಪತ್ತೆ; 94 ಮಂದಿ ಸಾವು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.