ಬಂಟ್ವಾಳ (ದ.ಕ.) : ಈಟಿವಿ ಭಾರತದಲ್ಲಿ ಶನಿವಾರ ಬೆಳಗ್ಗೆ ಪ್ರಕಟಗೊಂಡ ವರದಿಗೆ ಸ್ಪಂದಿಸಿರುವ ಸಹೃದಯಿಗಳು ತಾಲೂಕಿನ ಕಾರಿಂಜ ದೇವಸ್ಥಾನದಲ್ಲಿ ಹಸಿವಿನಿಂದ ತೊಂದರೆ ಅನುಭವಿಸುತ್ತಿದ್ದ ಕೋತಿಗಳಿಗೆ ಆಹಾರ ಒದಗಿಸಿದ್ದಾರೆ.
ಲಾಕ್ಡೌನ್ ಪರಿಣಾಮ ತಾಲೂಕಿನ ಪುಣ್ಯಕ್ಷೇತ್ರ ಕಾರಿಂಜದ ಬೆಟ್ಟ ಹಾಗೂ ದೇವಸ್ಥಾನಕ್ಕೆ ಪ್ರವಾಸಿಗರು, ಭಕ್ತರು ಬರುವುದನ್ನು ನಿಲ್ಲಿಸಿದ್ದಾರೆ ಕಾರಣ, ಅವರು ನೀಡುವ ಆಹಾರವನ್ನೇ ನಂಬಿಕೊಂಡಿದ್ದ ಕೋತಿಗಳು ಉಪವಾಸದಿಂದ ಬಳಲುತ್ತಿದ್ದವು. ಈ ಕುರಿತು ಈ ಟಿವಿ ಭಾರತದಲ್ಲಿ ಶನಿವಾರ ವರದಿ ಪ್ರಕಟಿಸಿತ್ತು.
ಇದಕ್ಕೆ ಹಲವರು ಸ್ಪಂದಿಸಿದ್ದು, ಶನಿವಾರ ಮಧ್ಯಾಹ್ನದ ವೇಳೆಗೆ ಸ್ಥಳೀಯರಾದ ಸುಧಾಕರ ಪ್ರಭು ಮತ್ತು ಭಾಸ್ಕರ್ ದೇವಾಡಿಗ ಬಾಳೆಗೊನೆ ಸಹಿತ ಆಹಾರಗಳನ್ನು ತಂದೊದಗಿಸಿದ್ದರು. ಮುಂದೆ ಕೂಡ ಕಪಿಗಳಿಗೆ ಆಹಾರ ಒದಗಿಸಲು ದಾನಿಗಳು ಮುಂದಾಗಿದ್ದಾರೆ.
ಇದನ್ನು ಓದಿ : ‘ಲಾಕ್ಡೌನ್ ಎಫೆಕ್ಟ್: ಆಹಾರಕ್ಕಾಗಿ ಪರದಾಡುತ್ತಿರುವ ಪ್ರಾಣಿಗಳು’