ETV Bharat / state

ಜನಸಂಖ್ಯಾ ಸ್ಫೋಟಕ್ಕೆ ಜನತೆ, ಸಮಾಜ ಹಾಗೂ ವ್ಯವಸ್ಥೆ ಕಾರಣ: ಬಿ.ಎಲ್​​.ಸಂತೋಷ್​​ - latest mangalore news

ಜನಸಂಖ್ಯೆ ಸ್ಫೋಟಗೊಳ್ಳಲು ಜನತೆ, ಸಮಾಜ ಹಾಗೂ ವ್ಯವಸ್ಥೆಯೇ ಕಾರಣ ಎಂದು ಟಿಎಂಎಪೈ ಕನ್ವೆನ್ಷನ್ ಹಾಲ್​ನಲ್ಲಿ ನಡೆಯುತ್ತಿರುವ ಲಿಟ್​ ಫೆಸ್ಟ್​​ನಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅಭಿಪ್ರಾಯಪಟ್ಟರು. ಇನ್ನು ಧರ್ಮ ಎಂಬುವುದು ದೇವರು ಹಾಗೂ ಆತನ ಸೃಷ್ಟಿಯ ನಡುವೆ ಇರುವ ಸಂಬಂಧವನ್ನು‌ ಉತ್ಪತ್ತಿ ಮಾಡುವ ಮಾಧ್ಯಮ ಎಂದು ಕೇರಳದ ರಾಜ್ಯಪಾಲ ಆರೀಫ್ ಮಹಮ್ಮದ್ ಖಾನ್ ಹೇಳಿದರು.

literature fest at mangalore
ಜನಸಂಖ್ಯೆಯು ಸ್ಪೋಟಗೊಳ್ಳಲು ಜನತೆ, ಸಮಾಜ ಹಾಗೂ ವ್ಯವಸ್ಥೆ ಕಾರಣ: ಬಿ.ಎಲ್.ಸಂತೋಷ್
author img

By

Published : Nov 30, 2019, 8:22 PM IST

ಮಂಗಳೂರು: ಜನಸಂಖ್ಯೆ ಸ್ಫೋಟಗೊಳ್ಳಲು ಜನತೆ, ಸಮಾಜ ಹಾಗೂ ವ್ಯವಸ್ಥೆಯೇ ಕಾರಣ ಎಂದು ಟಿಎಂಎಪೈ ಕನ್ವೆನ್ಷನ್ ಹಾಲ್​ನಲ್ಲಿ ನಡೆಯುತ್ತಿರುವ ಲಿಟ್​ ಫೆಸ್ಟ್​​ನಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅಭಿಪ್ರಾಯಪಟ್ಟರು.

ಜನಸಂಖ್ಯೆ ಸ್ಫೋಟಗೊಳ್ಳಲು ಜನತೆ, ಸಮಾಜ ಹಾಗೂ ವ್ಯವಸ್ಥೆ ಕಾರಣ: ಬಿ.ಎಲ್.ಸಂತೋಷ್

ನಗರದ ಟಿಎಂಎಪೈ ಕನ್ವೆನ್ಷನ್ ಹಾಲ್​ನಲ್ಲಿ ನಡೆಯುತ್ತಿರುವ ಲಿಟ್​ ಫೆಸ್ಟ್​ನಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಮ್ಮ ದೇಶದಲ್ಲಿ ಜನಸಂಖ್ಯೆ ಹೆಚ್ಚಳದ ಪರಿಣಾಮ ಲಾಭವೂ ಆಗಿದೆ, ಅಪಾಯಕಾರಿಯೂ ಆಗಿದೆ. ಆದ್ದರಿಂದ ಇಡೀ ಜಗತ್ತಿನಲ್ಲಿ ಇದೊಂದು ಸಮಸ್ಯೆಯಾಗಿಯೂ ಇದೆ. ಸಮಾಜ, ವ್ಯವಸ್ಥೆ ಮತ್ತು ಸರ್ಕಾರ ಜನಸಂಖ್ಯಾ ಶಾಸ್ತ್ರವನ್ನು ಸರಿಯಾಗಿ ಉಪಯೋಗಿಸಿಕೊಳ್ಳಲು ಆಗಲಿಲ್ಲದಿದ್ದರೆ ಅಥವಾ ಧನಾತ್ಮಕವಾಗಿ ಬಳಸಿಕೊಳ್ಳಲು ವಿಫಲವಾದಲ್ಲಿ ಇದು ಬಹುದೊಡ್ಡ ಸಮಸ್ಯೆಯಾಗಿ ತಲೆದೋರಲಿದೆ ಎಂದರು.

ಇನ್ನು ಕೇರಳದ ರಾಜ್ಯಪಾಲ ಆರೀಫ್ ಮಹಮ್ಮದ್ ಖಾನ್ ಮಾತನಾಡಿ, ಧರ್ಮ ಎಂಬುವುದು ದೇವರು ಹಾಗೂ ಆತನ ಸೃಷ್ಟಿಯ ನಡುವೆ ಇರುವ ಸಂಬಂಧವನ್ನು‌ ಉತ್ಪತ್ತಿ ಮಾಡುವ ಮಾಧ್ಯಮ. ಈ ಇಬ್ಬರ ಮಧ್ಯದಲ್ಲಿ ಮಧ್ಯವರ್ತಿ ಇರಬಾರದು ಎಂದು ಹೇಳಿದರು. ಜೊತೆಗೆ ದೇವರನ್ನು ಒಂದು ಗುಂಪಿನ ನಂಬಿಕೆಯುಳ್ಳ ಸಮುದಾಯ ಅಥವಾ ಧರ್ಮಕ್ಕೆ ಸೀಮಿತಗೊಳಿಸಲೂ ಆಗುವುದಿಲ್ಲ. ಧರ್ಮದ ಉದ್ದೇಶ ಮಾನವರನ್ನು ಬೇರ್ಪಡಿಸುವುದಲ್ಲ, ಒಗ್ಗೂಡಿಸುವುದು ಎಂದು ಹೇಳಿದರು.

Intro:ಮಂಗಳೂರು: ಜನಸಂಖ್ಯೆಯು ಸ್ಪೋಟಗೊಳ್ಳಲು ಜನತೆ, ಸಮಾಜ ಹಾಗೂ ವ್ಯವಸ್ಥೆ ಕಾರಣ. ಇದು ಮೂರು ಒಟ್ಟಿಗೆ ಕೆಲಸಮಾಡಿದಾಗ ಲಾಭಾಂಶವಾಗುತ್ತದೆ. ಆದರೆ ಮೂರು ಅರ್ಹತಾ ಘಟಕವಾಗಿ ಕೆಲಸಮಾಡದಿದ್ದಾಗ ಇದು ಅಪಾಯಕಾರಿಯಾಗುತ್ತದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಬಿ.ಎಲ್.ಸಂತೋಷ್ ಅಭಿಪ್ರಾಯಪಟ್ಟರು.

ನಗರದ ಟಿಎಂಎ ಪೈ ಕನ್ಷೆನ್ಷನ್ ಹಾಲ್ ನಲ್ಲಿ ನಡೆಯುತ್ತಿರುವ ಲಿಟ್ ಫೆಸ್ಟ್ ನಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಮ್ಮ ದೇಶದಲ್ಲಿ ಜನಸಂಖ್ಯೆಯ ಹೆಚ್ಚಳದ ಪರಿಣಾಮ ಲಾಭಾಂಶವೂ ಆಗಿದೆ, ಅಪಾಯಕಾರಿಯೂ ಆಗಿದೆ. ಆದ್ದರಿಂದ ಇಡೀ ಜಗತ್ತಿನಲ್ಲಿ ಇದೊಂದು ಸಮಸ್ಯೆಯಾಗಿಯೂ ಇದೆ. ಅರ್ಥಪೂರ್ಣವಾಗಿ ಬಳಸಿಕೊಂಡಿರುವುದನ್ನು ಕಂಡಿದ್ದೇವೆ ಎಂದು ಅವರು ಹೇಳಿದರು.

Body:ಸಮಾಜ, ವ್ಯವಸ್ಥೆ ಮತ್ತು ಸರಕಾರ ಜನಸಂಖ್ಯಾಶಾಸ್ತ್ರವನ್ನು ಸರಿಯಾಗಿ ಉಪಯೋಗಿಸಿಕೊಳ್ಳಲು ಆಗಲಿಲ್ಲದಿದ್ದರೆ ಅಥವಾ ಧನಾತ್ಮಕವಾಗಿ ಬಳಸಿಕೊಳ್ಳಲು ವಿಫಲವಾದಲ್ಲಿ ಇದು ಬಹುದೊಡ್ಡ ಸಮಸ್ಯೆಯಾಗಿ ತಲೆದೋರಲಿದೆ. ಓದಿದವರಿದ್ದಾರೆ ಆದರೆ ಅವರಲ್ಲಿ ಕೌಶಲ್ಯವಿಲ್ಲದಿದ್ದರೆ ನಿರುದ್ಯೋಗ ತಲೆದೋರುತ್ತದೆ. ಓದಿದವರಿದ್ದಾರೆ, ಕೌಶಲ್ಯವಿದೆ ಆದರೆ ಅವಕಾಶವಿಲ್ಲದಿದ್ದರೆ ಅಲ್ಲೂ ನಿರುದ್ಯೋಗ ಸಮಸ್ಯೆ ಉದ್ಭವವಾಗುತ್ತದೆ. ಕೇರಳದಲ್ಲಿ ಇದೇ ಸಮಸ್ಯೆ ನಾವು ನೋಡುತ್ತಿದ್ದೇವೆ. ಅಲ್ಲಿನ ಶಿಕ್ಷಿತರು ಬಹುಪಾಲು ಗಲ್ಫ್ ರಾಷ್ಟ್ರದಲ್ಲಿದ್ದರೆ ಅಲ್ಲಿನ ಉದ್ಯೋಗಾವಕಾಶದ ಕೊರತೆಯೇ ಕಾರಣ. ಸಾಮಾಜಿಕವಾದ ಅನೇಕ ತಲ್ಲಣಗಳು ಇಂತಹ ಕಾರಣಕ್ಕಾಗಿಯೇ ಉಂಟಾಗುತ್ತದೆ. ಇದು ಅಪಾಯಕ್ಕೂ ತಿರುಗುವ ಎಲ್ಲಾ ಸೂಚನೆಯೂ ಕಾಣುತ್ತಿದೆ ಎಂದು ಹೇಳಿದರು.

ಇಂತಹ ಸಮಸ್ಯೆಗಳ ಸರಕಾರ ಅದಕ್ಕೆ ತಕ್ಕನಾದ ವ್ಯವಸ್ಥೆಗಳನ್ನು ನಿರ್ಮಾಣ ಮಾಡಬೇಕಾಗುತ್ತದೆ. ಭಾರತದಲ್ಲಿ ಒಂದು ಕೋಟಿ ಉದ್ಯೋಗ ನಿರ್ಮಾಣ ವಾಗಿದೆ ಎನ್ನುವುದಕ್ಕಿಂತಲೂ, ಬೇರೆ ಬೇರೆ ರಾಜ್ಯಗಳಲ್ಲಿ ಎಷ್ಟು ಉದ್ಯೋಗಗಳು ಸೃಷ್ಟಿಯಾಗುತ್ತಿವೆ ಎನ್ನುವುದು ಪ್ರಮುಖ‌ ಎಂದು ಬಿ.ಎಲ್.ಸಂತೋಷ್ ಹೇಳಿದರು‌.

Reporter_Vishwanath Panjimogaru

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.