ಸುಳ್ಯ(ದಕ್ಷಿಣ ಕನ್ನಡ): ಕಳೆದ ಕೆಲವು ತಿಂಗಳ ಹಿಂದೆ ಸರಣಿ ಭೂಕಂಪನದ ಹೊಡೆತಕ್ಕೆ ಸಿಲುಕಿ ನಂತರ ಶಾಂತವಾಗಿದ್ದ ಸುಳ್ಯ ತಾಲೂಕಿನಲ್ಲಿ ಮತ್ತೆ ನಿನ್ನೆ ಸಂಜೆ ಭೂಕಂಪನದ ಅನುಭವವಾಗಿದೆ. ಮಡಪ್ಪಾಡಿಯಲ್ಲಿ ಸಂಜೆ ಸುಮಾರು 7:32ರ ಹೊತ್ತಿಗೆ ಭುವಿಯೊಡಲು ಕಂಪಿಸಿದ ಅನುಭವ ಆಗಿದೆ. ಈ ಘಟನೆ ಜನರಲ್ಲಿ ಆತಂಕ ಉಂಟು ಮಾಡಿದೆ.
ಮಡಪ್ಪಾಡಿ ಗ್ರಾಮದ ಕಡ್ಯ, ಹಾಡಿಕಲ್ಲು ಗ್ರಾಮದಲ್ಲಿ ಭಾರಿ ಶಬ್ದದೊಂದಿಗೆ ಭೂಮಿ ನಡುಗಿದಂತಾಯಿತು ಎಂದು ಜನರು ಹೇಳಿದ್ದಾರೆ. ಕೆಲವು ತಿಂಗಳುಗಳ ಹಿಂದೆ ಇಲ್ಲಿನ ಸಂಪಾಜೆ, ಚೆಂಬು, ಕರಿಕೆ, ಅರಂತೋಡು, ತೊಡಿಕಾನ, ಪೆರಾಜೆ, ಗೂನಡ್ಕ ಸೇರಿದಂತೆ ಹಲವೆಡೆಗಳಲ್ಲೂ ಸರಣಿ ಭೂಕಂಪನವಾಗಿತ್ತು. ನಿನ್ನೆಯ ಘಟನೆಯ ಬಗ್ಗೆ ಭೂವಿಜ್ಞಾನ ಅಧಿಕಾರಿಗಳಿಂದ ಯಾವುದೇ ಅಧಿಕೃತ ಮಾಹಿತಿ ದೊರೆತಿಲ್ಲ.
ಇದನ್ನೂ ಓದಿ: ಇಂಡೋನೇಷ್ಯಾದಲ್ಲಿ ಭೀಕರ ಭೂಕಂಪ: ಮೃತರ ಸಂಖ್ಯೆ 318ಕ್ಕೆ ಏರಿಕೆ