ETV Bharat / state

ಜನರು ಗುಜರಿಗೆ ಹಾಕಿದ ಪುಸ್ತಕ ಆಯ್ದು ಮನೆಯಲ್ಲೇ ಗ್ರಂಥಾಲಯ ಕಟ್ಟಿದ ವ್ಯಕ್ತಿ! - ಪುಸ್ತಕಗಳ ಲೈಬ್ರೆರಿ

ಗ್ರಾಮೀಣ ಭಾಗದಲ್ಲಿ ಹುಟ್ಟಿ ಬೆಳೆದ ಇಸ್ಮಾಯಿಲ್ ಕಾನತ್ತೂರು ಕಾಲೇಜು ಮೆಟ್ಟಿಲು ಹತ್ತಿದವರಲ್ಲ. ಆದರೆ ಅವರ ಜ್ಞಾನದಾಹ, ಆಸಕ್ತಿ ಮೆಚ್ಚುವಂಥದ್ದೇ.

A library of books in the house of a Gujari trader
ಇಸ್ಮಾಯಿಲ್ ಕಾನತ್ತೂರು ಮನೆಯಲ್ಲಿ ಲೈಬ್ರೆರಿ
author img

By

Published : Oct 20, 2022, 7:45 PM IST

ಬಂಟ್ವಾಳ: ಇಲ್ಲಿನ ಬಾಳೆಪುಣಿ ಗ್ರಾಮದ ಹೂಹಾಕುವಕಲ್ಲು ಎಂಬಲ್ಲಿ ಇಸ್ಮಾಯಿಲ್ ಕಾನತ್ತೂರು ಗುಜರಿ ಅಂಗಡಿ ನಡೆಸುತ್ತಿದ್ದಾರೆ. ಇವರು 25 ವರ್ಷಗಳಿಂದ ವ್ಯಾಪಾರ ಮಾಡಿಕೊಂಡು ಬಂದಿದ್ದಾರೆ. ವಿದ್ಯಾರ್ಥಿಗಳು, ಸಾರ್ವಜನಿಕರು ಗುಜರಿಗೆ ಮಾರಿದ ಪುಸ್ತಕದಲ್ಲಿ ಉತ್ತಮ ಪುಸ್ತಕಗಳನ್ನು ಆಯ್ದು ತಮ್ಮ ಪುಟ್ಟ ನಿವಾಸದಲ್ಲಿ ಗ್ರಂಥಾಲಯವನ್ನೇ ಮಾಡಿದ್ದಾರೆ.

ಧರ್ಮ ಗ್ರಂಥಗಳು, ಪಠ್ಯ ಪುಸ್ತಕಗಳು: ಇಸ್ಮಾಯಿಲ್ ಅವರ ಲೈಬ್ರೆರಿಯಲ್ಲಿ 10 ರೂ. ಪುಸ್ತಕದಿಂದ ಹಿಡಿದು 2 ಸಾವಿರ ರೂ. ಗೂ ಅಧಿಕ ವೌಲ್ಯದ ಪುಸ್ತಕಗಳಿವೆ. ನಾನಾ ಧರ್ಮಗ್ರಂಥಗಳು, ಕಥೆ ಪುಸ್ತಕಗಳು, ಮಹಾನ್ ಪುರುಷರ ಪುಸ್ತಕಗಳು, ಪ್ರಾಥಮಿಕ ಶಾಲೆಯಿಂದ ಹಿಡಿದು ಪದವಿ, ಎಂಜಿನಿಯರಿಂಗ್​​ವರೆಗಿನ ಪುಸ್ತಕಗಳು ಇವರ ಸಂಗ್ರಹದಲ್ಲಿವೆ. ಪುಸ್ತಕ ಕೊಂಡುಕೊಳ್ಳಲು ಆರ್ಥಿಕ ಸಂಕಷ್ಟದಲ್ಲಿರುವ ವಿದ್ಯಾರ್ಥಿಗಳು ಇವರ ಮನೆಗೆ ಬಂದು ಪುಸ್ತಕಗಳನ್ನು ಹುಡುಕಾಡಿ ಪಡೆದುಕೊಂಡು ಹೋಗುತ್ತಾರೆ.

A library of books in the house of a Gujari trader
ಇಸ್ಮಾಯಿಲ್ ಕಾನತ್ತೂರು ಮನೆಯಲ್ಲಿ ಲೈಬ್ರೆರಿ

ಯಾವುದೇ ಪುಸ್ತಕಗಳನ್ನು ಕೊಂಡೊಯ್ಯುವವರು ದಾಖಲೆ ಪುಸ್ತಕಕ್ಕೆ ಸಹಿ ಮಾಡಿ ಅವರು ಓದಿ ಮುಗಿಸಿದ ಬಳಿಕ ಮರಳಿ ತಂದುಕೊಡಬೇಕೆಂಬ ನಿಯಮವಿದೆ. ಇದರಿಂದ ಹೆಚ್ಚು ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತಿದೆ ಇಸ್ಮಾಯಿಲ್ ಅಭಿಪ್ರಾಯವಾಗಿದೆ.

ಇದನ್ನೂ ಓದಿ: ಗುಜುರಿ ವ್ಯಾಪಾರಿ ಬಳಿ 120 ವರ್ಷದ ಹಿಂದಿನ ಉಗಿ ಬಂಡಿ.. ವಸ್ತು ಸಂಗ್ರಹಾಲಯದಲ್ಲಿಡುವಂತೆ ಮನವಿ

ಸಾಮಾಜಿಕ ಕಳಕಳಿ: ಪುಸ್ತಕಪ್ರಿಯ ಇಸ್ಮಾಯಿಲ್ ವ್ಯಾಪಾರದ ಜತೆ ಸಮಾಜಮುಖಿಯಾಗಿ ಚಿಂತನೆ ಮಾಡಿದವರು. ಸ್ಥಳೀಯವಾಗಿ ಯಾರಾದರೂ ಅಪಘಾತಕ್ಕೀಡಾಗಿ, ಅನಾರೋಗ್ಯಕೀಡಾಗಿ ಸಂಕಷ್ಟದಲ್ಲಿದ್ದರೆ ಅವರಿಗೆ ನೆರವು ಮಾಡುತ್ತಾರೆ. ಬಡ ಹುಡುಗಿಯರ ಮದುವೆಗೆ ಸಹಾಯಹಸ್ತ ಚಾಚಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.