ETV Bharat / state

ಪಿಎಫ್ಐ ಬಿಜೆಪಿಯ 'ಬಿ' ಟೀಂ, ಪಿಎಫ್ಐ,ಎಸ್​ಡಿಪಿ‌ಐ ಅನ್ನು ನಿಷೇಧ ಮಾಡಲಿ: ಸಿದ್ದರಾಮಯ್ಯ - ಸಿದ್ದರಾಮಯ್ಯ ಆಗ್ರಹ

ಇಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಂಗಳೂರಿಗೆ ಆಗಮಿಸಿದ್ದು, ಈ ವೇಳ, ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪಿಎಫ್ಐ,ಎಸ್​​ಡಿಪಿಐ ಬಿಜೆಪಿಯ 'ಬಿ' ಟೀಂ ಆಗಿದ್ದು, ಅದನ್ನು ನಿಷೇಧ ಮಾಡಲಿ ಎಂದು ಆಗ್ರಹಿಸಿದರು.

ಸಿದ್ದರಾಮಯ್ಯ
Siddaramaiah
author img

By

Published : Feb 22, 2021, 1:39 PM IST

ಮಂಗಳೂರು: ಪಿಎಫ್ಐ, ಎಸ್​​ಡಿಪಿಐ ಬಿಜೆಪಿಯ 'ಬಿ' ಟೀಂ ಆಗಿದ್ದು, ಅದನ್ನು ನಿಷೇಧ ಮಾಡಲಿ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಮಂಗಳೂರಿಗೆ ಆಗಮಿಸಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ

ನಗರದ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಪಿಎಫ್ಐ ಬಿಜೆಪಿಯ ಬಿ ಟೀಂ ಆಗಿದೆ. ಪಿಎಫ್ಐಗೆ ರ‍್ಯಾಲಿ ಮಾಡಲು ಬಿಜೆಪಿಯವರು ಅನುಮತಿ ಕೊಟ್ಟಿದ್ದಾರೆ. ಪಿಎಫ್ಐ,ಎಸ್ ಡಿಪಿಐ ರದ್ದು ಮಾಡಲಿ, ರದ್ದು ಮಾಡಲು ಸಾಕಷ್ಟು ಸಾಕ್ಷ್ಯಗಳಿವೆ. ಅದನ್ನು ಕೇಂದ್ರಕ್ಕೆ ಕಳುಹಿಸಿ ನಿಷೇಧ ಮಾಡಲಿ, ಎಸ್​ಡಿಪಿಐಯನ್ನು ಬೆಳೆಸುತ್ತಿರುವುದೇ ಬಿಜೆಪಿ. ಅವರಿಗೆ ಅದನ್ನು ನಿಷೇಧ ಮಾಡಲು ತೊಂದರೆ ಏನು ಎಂದು ಪ್ರಶ್ನಿಸಿದರು.

ಓದಿ: ಮಹಾರಾಷ್ಟ್ರಕ್ಕೆ ಸಂಚರಿಸುವ ಎಲ್ಲ ಬಸ್​ಗ​ಳಿಗೂ ಪರ್ಮಿಟ್ ಇದೆ: ಎಂ.ಆರ್. ಮುಂಜಿ

ಪುದುಚೇರಿಯಲ್ಲಿ ಸಿಎಂ ನಾರಾಯಣಸ್ವಾಮಿ ನೇತೃತ್ವದ ಕಾಂಗ್ರೆಸ್​ ಸರ್ಕಾರ ಬಿದ್ದು ಹೋದ ವಿಚಾರವಾಗಿ ಪ್ರತಿಕ್ರಿಯಿಸಿ, ನಾರಾಯಣಸ್ವಾಮಿ ಅವರು ಚುನಾವಣೆ ಸಂದರ್ಭದಲ್ಲಿ ಮುಖ್ಯಮಂತ್ರಿಯಾಗಿ ಇರಬಾರದು. ಅವರ ಅಧಿಕಾರಾವಧಿಯಲ್ಲಿ ಚುನಾವಣೆ ನಡೆಯಬಾರದು ಎಂದು ಸರ್ಕಾರ ಕಿತ್ತು ಹಾಕುತ್ತಿದ್ದಾರೆ. ಇದು ಅಸಾಂವಿಧಾನಿಕವಾಗಿದ್ದು, ಶಾಸಕರನ್ನು ಖರೀದಿಸಿ ರಾಜೀನಾಮೆ ‌ಕೊಡಿಸುತ್ತಿದ್ದಾರೆ ಎಂದು ಆಪಾದಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.