ಮಂಗಳೂರು : ಎಂಆರ್ಪಿಎಲ್ ಜೋಕಟ್ಟೆ ಕೈಗಾರಿಕಾ ವಲಯ ಪ್ರದೇಶದಲ್ಲಿ ಚಿರತೆಯೊಂದು ಹಂದಿಗೆ ಬಿಟ್ಟಿದ್ದ ಉರುಳಿಗೆ ಸಿಲುಕಿದ್ದ ಘಟನೆ ನಡೆದಿದೆ.
ಈ ಪ್ರದೇಶದ ಜನತೆಯಲ್ಲಿ ಭೀತಿ ಹುಟ್ಟಿಸಿದ್ದ ಚಿರತೆ ಕುತ್ತೆತ್ತೂರು ಬಾಜಾವು ಸಮೀಪದ ನೋಯಿ ಬಳಿ ಉರುಳಿಗೆ ಬಿದ್ದಿದೆ.
ಬಳಿಕ ಸ್ಥಳೀಯರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗಳ ಕಾರ್ಯಾಚರಣೆಯಿಂದ ಚಿರತೆಯನ್ನು ರಕ್ಷಿಸಿ ಅರಣ್ಯಕ್ಕೆ ಬಿಡಲಾಯಿತು.