ಮಂಗಳೂರು: ಆಹಾರವನ್ನರಿಸಿ ನಾಡಿಗೆ ಬಂದ ಚಿರತೆಯೊಂದು ಬಾವಿಗೆ ಬಿದ್ದ ಘಟನೆ ದಕ್ಷಿಣ ಕನ್ನಡದ ಬೆಳ್ತಂಗಡಿ ತಾಲೂಕಿನ ನಾವೂರಿನಲ್ಲಿ ನಡೆದಿದೆ.
ನಾವೂರು ಗ್ರಾಮದ ಗಂಗಯ್ಯ ಗೌಡ ಎಂಬುವವರ ಮನೆಯ ಬಾವಿಗೆ ರಾತ್ರಿಯ ವೇಳೆ ಚಿರತೆಯೊಂದು ಬಿದ್ದು ಬಾವಿಯ ಬದಿಯಲ್ಲಿ ಕುಳಿತಿತ್ತು. ಇಂದು ಬೆಳಗ್ಗೆ ಇದನ್ನು ಗಮನಿಸಿದ ಮನೆಯವರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಬಲೆಯ ಮೂಲಕ ಚಿರತೆಯನ್ನು ಮೇಲಕ್ಕೆತ್ತಿ, ಕಾಡಿಗೆ ಬಿಟ್ಟಿದ್ದಾರೆ.