ETV Bharat / state

ಬೆಳ್ತಂಗಡಿ ಶಾಸಕ ಹರೀಶ್ ಪೂಂಜರಿಂದ ಜನರಿಗೆ ಉಚಿತ ದೋಣಿ ವ್ಯವಸ್ಥೆ - Belthangady Legislator Harish Pooja

ಕಳೆದ ಬಾರಿ ಸುರಿದಿದ್ದ ಭಾರೀ ಮಳೆಗೆ ನೇತ್ರಾವತಿ ನದಿಯಲ್ಲಿ ನೆರೆ ಬಂದು ತಾಲೂಕಿನ ಮೊಗ್ರು ಗ್ರಾಮದ ಮೊಗೇರಡ್ಕ ಜನರಿಗೆ ಸಂಪರ್ಕ ಕಲ್ಪಿಸುತ್ತಿದ್ದ ತೂಗು ಸೇತುವೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ಜನರು ಸಂಕಟ ಪಡುತ್ತಿದ್ದರು. ಇದನ್ನು ನೋಡಿದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಹೊಸ ದೋಣಿ ಖರೀದಿಸಿ ಈ ಭಾಗದ ಜನರಿಗೆ ಉಚಿತವಾಗಿ ದೋಣಿ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ.

Belthangady
ಉಚಿತವಾಗಿ ದೋಣಿ ವ್ಯವಸ್ಥೆ
author img

By

Published : Jun 15, 2020, 11:56 AM IST

ಬೆಳ್ತಂಗಡಿ: ತಾಲೂಕಿನ ಮೊಗ್ರು ಗ್ರಾಮದ ಮೊಗೇರಡ್ಕ ಜನತೆಗೆ ಓಡಾಡಲು ಸಹಕಾರಿಯಾಗುವಂತೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಹೊಸ ದೋಣಿ ಖರೀದಿಸಿ ಈ ಭಾಗದ ಜನರಿಗೆ ಉಚಿತವಾಗಿ ದೋಣಿ ವ್ಯವಸ್ಥೆಯನ್ನು ಮಾಡಿಕೊಟ್ಟಿದ್ದಾರೆ.

ಕಳೆದ ಬಾರಿ ಸುರಿದಿದ್ದ ಭಾರೀ ಮಳೆಗೆ ನೇತ್ರಾವತಿ ನದಿಯಲ್ಲಿ ನೆರೆ ಬಂದು ತಾಲೂಕಿನ ಮೊಗ್ರು ಗ್ರಾಮದ ಮೊಗೇರಡ್ಕ ಜನರಿಗೆ ಸಂಪರ್ಕ ಕಲ್ಪಿಸುತ್ತಿದ್ದ ತೂಗು ಸೇತುವೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿತ್ತು. ಹೀಗಾಗಿ ಅಲ್ಲಿಂದ ಈವರೆಗೆ ಜನರು ಸಂಕಷ್ಟ ಅನುಭವಿಸುತ್ತಿದ್ದರು. ಹಾಗಾಗಿ ಜನರಿಗೆ ದಿನನಿತ್ಯದ ಕೆಲಸಕ್ಕೆ ಪೇಟೆಗೆ ಹೋಗಲು ಸಹಾಯಕವಾಗಲು ಶಾಸಕರು ಹೊಸ ದೋಣಿ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ.

ಬೆಳ್ತಂಗಡಿ ಶಾಸಕ ಹರೀಶ್ ಪೂಂಜರಿಂದ ಜನರಿಗೆ ಉಚಿತವಾಗಿ ದೋಣಿ ವ್ಯವಸ್ಥೆ

ಈ ಕುರಿತು ಈಟಿವಿ ಭಾರತ ಶಾಸಕರನ್ನು ಮಾತನಾಡಿಸಿದಾಗ, ಊರಿನ ಸಂಪರ್ಕ ಕಲ್ಪಿಸಲು ಬೋಟ್ ವ್ಯವಸ್ಥೆ ಅನಿವಾರ್ಯವಾಗಿದೆ. ಕೊರೊನಾ ಲಾಕ್​ಡೌನ್​ನಿಂದಾಗಿ ಸೇತುವೆ ಕಾಮಗಾರಿ ತಡವಾಗಿದೆ. ಬೋಟ್ ನಡೆಸಲು ಒಬ್ಬರನ್ನು ನಿರ್ವಹಣೆಗಾಗಿ ಮೀಸಲಿಡಲಾಗಿದೆ. ಅವರಿಗೆ ಸಂಬಳ ನಿಗದಿ ಪಡಿಸಲಾಗುವುದು. ಉಚಿತವಾಗಿ ಸಾರ್ವಜನಿಕರಿಗೆ ಸೇತುವೆ ನಿರ್ಮಾಣ ಆಗುವವರೆಗೆ ಸೇವೆ ನೀಡಲಾಗುವುದು ಎಂದು ತಿಳಿಸಿದರು.

ಶಾಶ್ವತ ಸೇತುವೆ ಕಾಮಗಾರಿಗೆ ಈಗಾಗಲೇ 40 ಲಕ್ಷ ರೂ. ವೆಚ್ಚದಲ್ಲಿ ಡಿಪಿಆರ್ ಮಾಡಲು ಟೆಂಡರ್ ಆಗಿದೆ. ಈ ಮಳೆಗಾಲ ಕಳೆದ ಕೂಡಲೇ ದೊಡ್ಡ ಮಟ್ಟದ ಸೇತುವೆಯೊಂದಿಗೆ ಈ ಭಾಗದ ರೈತರಿಗೆ ಅನುಕೂಲವಾಗುವಂತೆ ಮುಖ್ಯಮಂತ್ರಿ ಅವರಲ್ಲಿ ಹಾಗೂ ಜಲ ಸಂಪನ್ಮೂಲ ಸಚಿವರ ಜೊತೆ ಮಾತುಕತೆ ನಡೆಸಿದ್ದೇನೆ. ಆದಷ್ಟು ಬೇಗ ಸೇತುವೆ ನಿರ್ಮಿಸಿ ಈ ಭಾಗದ ಜನತೆಯಲ್ಲಿರುವ ಕುಗ್ರಾಮ ಎಂಬ ಭಾವನೆಯನ್ನು ಹೋಗಲಾಡಿಸಲಾಗುವುದು ಎಂದರು.

ಶಾಸಕರು ದೋಣಿ ವ್ಯವಸ್ಥೆಯನ್ನು ನಮಗೆ ಉಚಿತವಾಗಿ ಮಾಡಿಕೊಟ್ಟಿದ್ದಾರೆ. ನಮ್ಮ ಈ ಭಾಗದ ಜನತೆಯ ಸೇತುವೆ ನಿರ್ಮಾಣದ ಬೇಡಿಕೆಯನ್ನು ಹಲವು ವರ್ಷಗಳಿಂದ ಸಲ್ಲಿಸುತ್ತಾ ಬಂದಿದ್ದೆವು. ಆದರೆ ಯಾರೂ ಕೂಡ ನಮ್ಮ ಮನವಿಗೆ ಸ್ಪಂದಿಸಿದ್ದಿಲ್ಲ. ಆದರೆ ಈಗಿನ ಶಾಸಕರು ಸೇತುವೆಯ ಭರವಸೆಯನ್ನು ನೀಡಿರುವುದು ತುಂಬಾ ಸಂತೋಷವಾಗುತ್ತಿದೆ ಎಂದು ಸ್ಥಳೀಯರು ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.