ETV Bharat / state

ಆನ್​ಲೈನ್​ ಕ್ಲಾಸ್​ಗಳಿಗೆ ಮೊರೆ ಹೋದ ವಿದ್ಯಾಸಂಸ್ಥೆಗಳು.. ಲ್ಯಾಪ್​ಟಾಪ್​, ಕಂಪ್ಯೂಟರ್​​ಗಳ ಕೊರತೆ!! - online classes

ಕೊರೊನಾ ಹಿನ್ನೆಯಲ್ಲಿ ಶಾಲೆಗಳು, ಕಾಲೇಜುಗಳಲ್ಲಿ ಪಾಠ ಮಾಡೋಕೆ ಅವಕಾಶ ಇಲ್ಲದೇ ಇರುವುದರಿಂದ ಸಾಕಷ್ಟು ವಿದ್ಯಾಸಂಸ್ಥೆಗಳು ಈಗಾಗಲೇ ಆನ್​ಲೈನ್ ಕ್ಲಾಸ್​​ಗಳ ಮೊರೆಹೋಗಿವೆ. ಆನ್​ಲೈನ್​ ಪಾಠ ಕೇಳೋಕೆ ಬೇಕಾಗಿರೋ ಲ್ಯಾಪ್​ಟಾಪ್​ ಹಾಗೂ ಕಂಪ್ಯೂಟರ್​ಗಳಿಗೆ ಬೇಡಿಕೆ ಹೆಚ್ಚಾಗಿದೆ..

online classes
ಆನ್​ಲೈನ್​ ಕ್ಲಾಸ್
author img

By

Published : Jun 29, 2020, 4:27 PM IST

ಮಂಗಳೂರು : ಲಾಕ್​​ಡೌನ್ ಬಳಿಕ ಶೈಕ್ಷಣಿಕ ಸಂಸ್ಥೆಗಳು ಇನ್ನೂ ಪ್ರಾರಂಭವಾಗಿಲ್ಲ. ಈ ವರ್ಷದ ಶೈಕ್ಷಣಿಕ ವರ್ಷ ಆರಂಭವಾಗುವ ಬಗ್ಗೆ ಅನಿಶ್ಚಿತತೆ ಇರುವ ನಡುವೆ‌ ಕೆಲವು ಶಿಕ್ಷಣ ಸಂಸ್ಥೆಗಳು ಆನ್​ಲೈನ್ ಕ್ಲಾಸ್ ಆರಂಭಿಸಿವೆ. ಇದರಿಂದಾಗಿ ಲ್ಯಾಪ್​ಟಾಪ್, ಕಂಪ್ಯೂಟರ್​​​​ಗಳಿಗೆ ಬೇಡಿಕೆ ಹೆಚ್ಚಾಗಿದೆ.

ಆನ್​ಲೈನ್​ ಕ್ಲಾಸ್

ಕೊರೊನಾ ಹಿನ್ನೆಯಲ್ಲಿ ಶಾಲೆಗಳು, ಕಾಲೇಜುಗಳಲ್ಲಿ ಪಾಠ ಮಾಡೋಕೆ ಅವಕಾಶ ಇಲ್ಲದೇ ಇರುವುದರಿಂದ ಸಾಕಷ್ಟು ವಿದ್ಯಾಸಂಸ್ಥೆಗಳು ಈಗಾಗಲೇ ಆನ್​ಲೈನ್ ಕ್ಲಾಸ್​​ಗಳ ಮೊರೆಹೋಗಿವೆ. ಇದು ಒಂದೆಡೆಯಾದ್ರೆ ಮತ್ತೊಂದೆಡೆ ಆನ್​ಲೈನ್​ ಪಾಠ ಕೇಳೋಕೆ ಬೇಕಾಗಿರೋ ಲ್ಯಾಪ್​ಟಾಪ್​ ಹಾಗೂ ಕಂಪ್ಯೂಟರ್​ಗಳಿಗೆ ಬೇಡಿಕೆ ಹೆಚ್ಚಾಗಿದೆ. ಇದರಿಂದಾಗಿ ಕೆಲವರಿಗೆ ಮಾರುಕಟ್ಟೆಯಲ್ಲಿ ಲ್ಯಾಪ್​ಟಾಪ್​ ಹಾಗೂ ಕಂಪ್ಯೂಟರ್​ಗಳಿಗೆ ಕೊರತೆಯಾಗಿದೆ.

ಆನ್​​​ಲೈನ್ ಕ್ಲಾಸ್​​ನಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು ಲ್ಯಾಪ್‌ಟಾಪ್ ಅಥವಾ ಕಂಪ್ಯೂಟರ್ ಖರೀದಿಗೆ ಬರುತ್ತಿದ್ದಾರೆ. ಸ್ಮಾರ್ಟ್‌ಫೋನ್​ ಇದ್ರೆ ಆನ್​ಲೈನ್​ ಕ್ಲಾಸ್​ನಲ್ಲಿ ಪಾಲ್ಗೊಳ್ಳಬಹುದಾದ್ರೂ ಬಹುಪಾಲು ಮಂದಿ ಲ್ಯಾಪ್​ಟಾಪ್​ ಹಾಗೂ ಕಂಪ್ಯೂಟರ್​ಗಳಲ್ಲಿ ಪಾಠ ಕೇಳೋಕೆ ಬಯಸುತ್ತಿದ್ದಾರೆ ಎಂಬುದು ವಿದ್ಯಾರ್ಥಿನಿ ಮಂತ್ರ ಅವರ ಅಭಿಪ್ರಾಯ.

ದೇಶಾದ್ಯಂತ ಕೊರೊನಾ ‌ಕಾರಣದಿಂದ ಹೆಚ್ಚಿನ ಉದ್ಯಮಗಳು ನೆಲಕಚ್ಚಿದ್ರೆ ಕಂಪ್ಯೂಟರ್​ ಹಾಗೂ ಲ್ಯಾಪ್​ಟಾಪ್​​ಗಳ ಉದ್ಯಮ ಮಾತ್ರ ಬೆಳವಣಿಗೆಯಾಗುತ್ತಿವೆ. ಎಲ್ಲಾ ವಿದ್ಯಾಸಂಸ್ಥೆಗಳು ಆನ್​ಲೈನ್​ ಕ್ಲಾಸ್​​ಗಳ ಮೊರೆಹೋಗಿರುವ ಕಾರಣದಿಂದ ಡಿಜಿಟಲ್​ ಸಾಮಗ್ರಿಗಳ ಉತ್ಪಾದಕ ಕಂಪನಿಗಳಿಗೆ ವರದಾನವಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.