ETV Bharat / state

ಸುಬ್ರಹ್ಮಣ್ಯ ಬಳಿ ಗುಡ್ಡ ಕುಸಿತ: ಮಂಗಳೂರು- ಬೆಂಗಳೂರು ರೈಲು ಸಂಚಾರ ಸ್ಥಗಿತ

ಮಂಗಳೂರು ಹೊರವಲಯದ ಕುಲಶೇಖರ ಬಳಿ ರೈಲ್ವೆ ಹಳಿ ಮೇಲೆ ಬಿದ್ದಿದ್ದ ಮಣ್ಣು ತೆರವುಗೊಳಿಸಿ ರೈಲು ಸಂಚಾರಕ್ಕೆ ಅನುವು ಮಾಡಿಕೊಡುತ್ತಿದ್ದಂತೆ, ಸುಬ್ರಹ್ಮಣ್ಯ ಬಳಿ ಹಳಿ ಮೇಲೆ ಗುಡ್ಡ ಕುಸಿದು ರೈಲು ಸಂಚಾರ ಸ್ಥಗಿತಗೊಂಡಿದೆ.

Land Collapsed on Railway track in Mangaluru
ರೈಲ್ವೆ ಹಳಿ ಮೇಲೆ ಗುಡ್ಡ ಕುಸಿತ
author img

By

Published : Jul 18, 2021, 1:05 PM IST

ಮಂಗಳೂರು : ನಗರದ ಕುಲಶೇಖರ ಬಳಿ ರೈಲ್ವೆ ಹಳಿ ಮೇಲೆ ಕುಸಿದು ಬಿದ್ದಿದ್ದ ಕಲ್ಲು, ಮಣ್ಣು ತೆರವುಗೊಳಿಸಲಾಗಿದ್ದು, ಇಂದು ಬೆಳಗ್ಗೆಯಿಂದ ರೈಲು ಸಂಚಾರ ಪುನರಾರಂಭಗೊಂಡಿತ್ತು. ಇದಾದ, ಬೆನ್ನಲ್ಲೇ ಸುಬ್ರಹ್ಮಣ್ಯ ಬಳಿ ಗುಡ್ಡ ಸಂಭವಿಸಿದ್ದು, ಮಂಗಳೂರು- ಬೆಂಗಳೂರು ರೈಲು ಸಂಚಾರ ಸ್ಥಗಿತಗೊಂಡಿದೆ.

ಮಂಗಳೂರಿನ ಕುಲಶೇಖರ ಬಳಿ ಪಾಲ್ಘಾಟ್ ರೈಲ್ವೇ ವಿಭಾಗಕ್ಕೆ ಬರುವ ಹಳಿಯ ಮೇಲೆ ಜು.16ರಂದು ತಡೆಗೋಡೆ ಕುಸಿದು ಭಾರಿ ಪ್ರಮಾಣದಲ್ಲಿ ಕಲ್ಲು, ಮಣ್ಣು ಬಿದ್ದಿತ್ತು. ಶೀಘ್ರದಲ್ಲಿಯೇ ಕಲ್ಲು, ಮಣ್ಣ ತೆರವು ಮಾಡಿ ರೈಲು ಸಂಚಾರ ಪುನಾರಂಭವಾಗುವ ಬಗ್ಗೆ ರೈಲ್ವೆ ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದರು. ಅದರಂತೆ ಕಾರ್ಯಾಚರಣೆ ಪೂರ್ಣಗೊಂಡು ಭಾನುವಾರ ಬೆಳಗ್ಗೆ 8.45ರ ಹೊತ್ತಿಗೆ ಎರ್ನಾಕುಲಂನಿಂದ ಅಜ್ಮೇರ್‌ಗೆ ಮೊದಲ ರೈಲು ಸಂಚರಿಸಿದೆ.

ಮಣ್ಣು ಕುಸಿತಗೊಂಡ ಕುಲಶೇಖರ ಪ್ರದೇಶದಲ್ಲಿ ರೈಲು ತೆರಳುವ ವೇಳೆ ರೈಲ್ವೆ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದು, ವೀಕ್ಷಣೆ ಮಾಡಿದರು.

ಓದಿ : ದಾವಣಗೆರೆ ಜಿಲ್ಲೆಯಲ್ಲಿ ಅಬ್ಬರಿಸಿದ ವರುಣ.. ಮಳೆಗೆ ನಲುಗಿದ ಜನ

ಇಂದಿನಿಂದಲೇ ರೈಲು ಸಂಚಾರವನ್ನು ಪುನರಾರಂಭಿಸಬೇಕು ಎನ್ನುವ ಉದ್ದೇಶದಿಂದ ಶನಿವಾರ ತಡರಾತ್ರಿಯವರೆಗೂ ಮಣ್ಣು ತೆರವು ಕಾರ್ಯಾಚರಣೆ ನಡೆಸಲಾಗಿತ್ತು. ಹಿಟಾಚಿ ಮೂಲಕ ತಡೆಗೋಡೆ ಕುಸಿದ ಪ್ರದೇಶದಿಂದ ಮಣ್ಣು, ಬೃಹತ್ ಗಾತ್ರದ ಕಲ್ಲುಗಳನ್ನು ತೆರವು ಮಾಡಲಾಯಿತು. ರೈಲ್ವೆ ಹಳಿಗೆ ವಾಲಿದ್ದ ತಡೆಗೋಡೆಯನ್ನು ಯಂತ್ರ ಬಳಸಿ ಕಟ್ಟಿಂಗ್ ಮಾಡಲಾಗಿದೆ. ಮೇಲ್ಬಾಗದಲ್ಲಿರುವ ಮಣ್ಣು, ಕಲ್ಲು ಕುಸಿತವಾಗದಂತೆ ವ್ಯವಸ್ಥೆ ಮಾಡಲಾಗಿದೆ.

ಪಾಲ್ಘಾಟ್ ರೈಲ್ವೆ ವಿಭಾಗದ ಚೀಫ್ ಇಂಜಿನಿಯರ್ ಸೇರಿದಂತೆ ಹಿರಿಯ ಅಧಿಕಾರಿಗಳು ಸ್ಥಳದಲ್ಲೇ‌ ಮೊಕ್ಕಾಂ ಹೂಡಿ ಕಾರ್ಯಾಚರಣೆಗೆ ಮಾರ್ಗದರ್ಶನ ನೀಡಿದರು. ಕಾರ್ಯಾಚರಣೆ ಬಳಿಕ ಹಿರಿಯ ಅಧಿಕಾರಿಗಳು ರೈಲ್ವೆ ಹಳಿ ಪರಿಶೀಲನೆ ನಡೆಸಿ ರೈಲು ಓಡಾಟಕ್ಕೆ ಗ್ರೀನ್ ಸಿಗ್ನಲ್ ನೀಡಿದರು. ಅದರಂತೆ ರೈಲು ಸಂಚಾರ ಪುನರಾರಂಭಗೊಂಡಿದೆ.

ವೀರಮಂಗಲದಲ್ಲಿ ಗುಡ್ಡ ಕುಸಿತ, ರೈಲು ಸಂಚಾರ ಸ್ಥಗಿತ : ಕುಲಶೇಖರ ಬಳಿ ರೈಲ್ವೆ ಹಳಿಗೆ ಕುಸಿದು ಬಿದ್ದಿದ್ದ ಕಲ್ಲು, ಮಣ್ಣು ತೆರವುಗೊಳಿಸಿ ರೈಲು ಸಂಚಾರ ಪುನರಾರಂಭವಾಗುತ್ತಿದ್ದಂತೆ ಕಬಕ-ಸುಬ್ರಹ್ಮಣ್ಯ ರೈಲ್ವೆ ಹಳಿಯ ವೀರಮಂಗಲ ಗಡಿಪಿಲ ಸಮೀಪದಲ್ಲಿ ರೈಲು ಚಲಿಸುತ್ತಿದ್ದಾಗಲೇ ಗುಡ್ಡ ಕುಸಿದು ಬಿದ್ದಿದೆ. ಗುಡ್ಡ ಕುಸಿತದಿಂದ ರೈಲಿನ ಗಾರ್ಡ್‌ಗೆ ಹಾನಿಯಾಗಿದೆ.

ಮಣ್ಣು ಕುಸಿದು ಬಿದ್ದ ಪರಿಣಾಮ ಮಂಗಳೂರು- ಬೆಂಗಳೂರು ನಡುವಿನ ರೈಲು ಸಂಚಾರ ಸ್ಥಗಿತಗೊಂಡಿದೆ. ರೈಲ್ವೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದು, ಮಣ್ಣು ತೆರವು ಮಾಡಲಾಗುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.