ETV Bharat / state

ರಬ್ಬರ್​ಗೂ ತಟ್ಟಿದ ಲಾಕ್​ಡೌನ್ ಬಿಸಿ... ಮಾರುಕಟ್ಟೆ ಇಲ್ಲದೆ ಬೆಳೆಗಾರ ಕಂಗಾಲು - latest purttur lackdown news

ಕಳೆದ 20 ದಿನಗಳಿಂದ ರಬ್ಬರ್ ಬೆಳೆಗೆ ಮಾರುಕಟ್ಟೆ ಇಲ್ಲದಂತಾಗಿದೆ. ಖಾಸಗಿಯಾಗಿ ರಬ್ಬರ್ ಬೆಳೆ ಬೆಳೆಯುತ್ತಿದ್ದ ಬೆಳೆಗಾರರು ಸಹಕಾರಿ ಸಂಘಗಳನ್ನು ಸ್ಥಾಪಿಸಿಕೊಂಡು ಆ ಮೂಲಕ ಮಾರಾಟ ಮಾಡಿಕೊಂಡು ಬರುತ್ತಿದ್ದರು. ಸಹಕಾರಿ ಸಂಘಗಳು ಎಂಆರ್​ಎಫ್ ಕಂಪನಿಗೆ ರಬ್ಬರ್ ಪೂರೈಕೆ ಮಾಡುತ್ತಿದ್ದವು. ಈ ಕಂಪನಿಯ ಘಟಕಗಳು ಗೋವಾ, ಕೇರಳ, ಆಂಧ್ರಪ್ರದೇಶ ಸೇರಿದಂತೆ ಇತರೆ ರಾಜ್ಯಗಳಲ್ಲಿವೆ.

Lackdown effect on rubber
ರಬ್ಬರ್ ಮಾರಕಟ್ಟೆ
author img

By

Published : Apr 20, 2020, 6:36 PM IST

Updated : Apr 20, 2020, 6:41 PM IST

ಪುತ್ತೂರು : ಲಾಕ್​ಡೌನ್​ ಪ್ರಯುಕ್ತ ರಬ್ಬರ್ ಬೆಳೆ ಮಾರಾಟಕ್ಕೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಇಲ್ಲದೆ ಬೆಳೆಗಾರರು ಕಂಗಾಲಾಗಿದ್ದಾರೆ.

ಕಳೆದ 20 ದಿನಗಳಿಂದ ರಬ್ಬರ್ ಬೆಳೆಗೆ ಮಾರುಕಟ್ಟೆ ಇಲ್ಲದಂತಾಗಿದೆ. ಖಾಸಗಿಯಾಗಿ ರಬ್ಬರ್ ಬೆಳೆ ಬೆಳೆಯುತ್ತಿದ್ದ ಬೆಳೆಗಾರರು ಸಹಕಾರಿ ಸಂಘಗಳನ್ನು ಸ್ಥಾಪಿಸಿಕೊಂಡು ಆ ಮೂಲಕ ಮಾರಾಟ ಮಾಡಿಕೊಂಡು ಬರುತ್ತಿದ್ದರು. ಸಹಕಾರಿ ಸಂಘಗಳು ಎಂಆರ್​ಎಫ್ ಕಂಪನಿಗೆ ರಬ್ಬರ್ ಪೂರೈಕೆ ಮಾಡುತ್ತಿದ್ದವು. ಈ ಕಂಪನಿಯ ಘಟಕಗಳು ಗೋವಾ, ಕೇರಳ, ಆಂಧ್ರಪ್ರದೇಶ ಸೇರಿದಂತೆ ಇತರೆ ರಾಜ್ಯಗಳಲ್ಲಿವೆ. ಸಾರಿಗೆ ಸಂಪರ್ಕ ಬಂದ್ ಮಾಡಿದ್ದರಿಂದ ರಬ್ಬರ್ ಶೀಟ್ ಸಾಗಿಸಲು ಅವಕಾಶ ಇಲ್ಲದಂತಾಗಿದೆ.

ಕೇರಳಕ್ಕೆ ಕೂಡ ಇಲ್ಲಿನ ಬಹುತೇಕ ರಬ್ಬರ್ ಪೂರೈಕೆಯಾಗುತ್ತಿತ್ತು. ಆ ರಾಜ್ಯದ ಗಡಿಯನ್ನು ಕೊರೊನಾ ಹಿನ್ನಲೆಯಲ್ಲಿ ಬಂದ್ ಮಾಡಿರುವುದರಿಂದ ರಬ್ಬರ್ ಶೀಟ್​ಗಳನ್ನು ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ, ರಬ್ಬರ್ ವಹಿವಾಟು ಸಂಪೂರ್ಣವಾಗಿ ನಿಂತುಹೋಗಿದೆ.

ರಬ್ಬರ್ ಮಾರಕಟ್ಟೆ

ವಾಣಿಜ್ಯ ಬೆಳೆ ಎಂಬ ಪರಿಗಣನೆಯಿಂದ ರಬ್ಬರ್ ಬೆಳೆ ಮಾರಾಟ ಆಗದ ಹಿನ್ನಲೆಯಲ್ಲಿ ಈ ಬೆಳೆಗೆ ಬೆಲೆ ನಿಗಧಿ ಮಾಡುವಂತಿಲ್ಲ. ಇದು ಖರೀದಿಸಲು ವರ್ತಕರು ಇಲ್ಲದೆ ಇರುವುದರಿಂದ ಬೆಳೆಗಾರರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಜಿಲ್ಲೆಯಲ್ಲಿ ಸಾವಿರಾರು ಬೆಳೆಗಾರರ ಬದುಕು ನಿರ್ಣಯಿಸುವ ರಬ್ಬರ್ ಬೆಳೆಗೆ ಬೆಂಬಲ ಬೆಲೆ ನೀಡಬೇಕು. ಇದರ ಜನತೆ ಕೊರೊನಾದಿಂದ ಅಡಿಕೆ ರೈತರ ಬದುಕು ಸಂಕಷ್ಟಕ್ಕಿಡಾಗಿದೆ. ಅವರಿಗೂ ಅವಶ್ಯಕತೆಗೆ ಬೇಕಾದ ಆರ್ಥಿಕತೆ ದೊರೆಯಬೇಕು. ರಬ್ಬರ್ ಹಾಗೂ ಅಡಿಕೆ ಬೆಳೆಗಾರರಿಗೆ ಸರ್ಕಾರ ವಿಶೇಷ ಪ್ಯಾಕೇಜ್ ನೀಡಿಬೇಕು ಎಂದು ಜಿಲ್ಲಾ ಸಹಕಾರಿ ಯೂನಿಯನ್ ಹಾಗೂ ಪುತ್ತೂರು ರಬ್ಬರ್ ಬೆಳೆಗಾರರ ಸಹಕಾರಿ ಸಂಘದ ಅಧ್ಯಕ್ಷ ಕೌಶಲ್ ಪ್ರಸಾದ್ ಶೆಟ್ಟಿ ಮನವಿ ಮಾಡಿದ್ದಾರೆ.

Last Updated : Apr 20, 2020, 6:41 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.