ETV Bharat / state

ಕುಕ್ಕೆಯಲ್ಲಿ ವಾರ್ಷಿಕ ಜಾತ್ರಾ ಉತ್ಸವಾಧಿಗಳಿಗೆ ಸಿದ್ಧತೆ

ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನ.21ರಿಂದ ಡಿ.5ರ ವರೆಗೆ ವಾರ್ಷಿಕ ಜಾತ್ರಾ ಉತ್ಸವಾದಿಗಳು ನಡೆಯಲಿದ್ದು, ಸೇವೆ ಮತ್ತು ಉತ್ಸವಗಳ ವಿವರ ಈ ಕೆಳಗಿನಂತಿವೆ.

kn_dk_01_k
ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನ
author img

By

Published : Nov 11, 2022, 7:37 PM IST

ಸುಬ್ರಹ್ಮಣ್ಯ(ದಕ್ಷಿಣಕನ್ನಡ): ವಿಶ್ವವಿಖ್ಯಾತ ನಾಗಕ್ಷೇತ್ರ ಮಹತೋಭಾರ ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಪೂರ್ವಶಿಷ್ಟ ಸಂಪ್ರದಾಯ ಪ್ರಕಾರ ಇದೇ ಶುಭಕೃತ್ ನಾಮ ಸಂವತ್ಸರದ ಕಾರ್ತಿಕ ಬಹುಳ ದ್ವಾದಶಿ ಸೋಮವಾರ ದಿನಾಂಕ 21-11-2022ರ ಲಾಗ್ಯಾತು ಮಾರ್ಗಶಿರ ಶುದ್ಧ ದ್ವಾದಶಿ ಸೋಮವಾರ ದಿನಾಂಕ 05-12-2022ರ ವರೆಗೆ ಈ ಕೆಳಗಿನಂತೆ ವಾರ್ಷಿಕ ಜಾತ್ರಾ ಉತ್ಸವಾದಿಗಳು ನಡೆಯಲಿವೆ.

ಭಗವತ್ಸಂಕಲ್ಪ ಪ್ರಕಾರ ನಡೆಯತಕ್ಕ ಈ ಮಹೋತ್ಸವಗಳಿಗೆ ಭಕ್ತರು ಆಗಮಿಸಿ, ಶ್ರೀ ದೇವರ ಮೂಲಮೃತ್ತಿಕಾ ಗಂಧ - ಪ್ರಸಾದವನ್ನು ಸ್ವೀಕರಿಸಿ, ಶ್ರೀ ಸುಬ್ರಹ್ಮಣ್ಯ ದೇವರ ಅನುಗ್ರಹಕ್ಕೆ ಪಾತ್ರರಾಗಬೇಕು ಎಂದು ದೇಗುಲದ ಆಡಳಿತ ಮಂಡಳಿ ಹಾಗೂ ವ್ಯವಸ್ಥಾಪನಾ ಸಮಿತಿ ಪ್ರಕಟಣೆ ಹೊರಡಿಸಿದೆ.

ಉತ್ಸವಗಳ ವಿವರ: ನವೆಂಬರ್‌ 21-11-2022 ಸೋಮವಾರ ಕೊಪ್ಪರಿಗೆ ಏರುವುದು, ರಾತ್ರಿ ಶೇಷವಾಹನಯುಕ್ತ ಬಂಡಿ ಉತ್ಸವ, 22-11-2022 ಮಂಗಳವಾರ ರಾತ್ರಿ ಶೇಷವಾಹನಯುಕ್ತ ಬಂಡಿ ಉತ್ಸವ, 23-11-2022 ಬುಧವಾರ ಲಕ್ಷದೀಪೋತ್ಸವ, 24-11-2022 ಗುರುವಾರ ಶೇಷವಾಹನೋತ್ಸವ, 25-11-2022 ಶುಕ್ರವಾರ ಅಶ್ವವಾಹನೋತ್ಸವ, 26-11-2022 ಶನಿವಾರ ಮಯೂರ ವಾಹನೋತ್ಸವ, 27-11-2022 ಆದಿತ್ಯವಾರ ರಾತ್ರಿ ಹೂವಿನ ತೇರಿನ ಉತ್ಸವ, 28-11-2022 ಸೋಮವಾರ ರಾತ್ರಿ ಪಂಚಮಿ ರಥೋತ್ಸವ, ತೈಲಾಭ್ಯಂಜನ, 29-11-2022 ಮಂಗಳವಾರ ಪ್ರಾತಃ ಕಾಲ ಚಂಪಾಷಷ್ಠಿ ಮಹಾರಥೋತ್ಸವ, 30- 11-2022 ಬುಧವಾರ ಅವಧೃತೋತ್ಸವ, ನೌಕಾವಿಹಾರ 05-12-2022 ಸೋಮವಾರ ಕೊಪ್ಪರಿಗೆ ಇಳಿಯುವುದು, ರಾತ್ರಿ ನೀರುಬಂಡಿ ಉತ್ಸವ, ದೈವಗಳ ನಡಾವಳಿ ನಡೆಯಲಿದೆ.

ದಿನಾಂಕ 20-11-2022 ಆದಿತ್ಯವಾರ ಮೂಲಮೃತ್ತಿಕಾ ಪ್ರಸಾದ ವಿತರಣೆ ಮತ್ತು ಕಿರುಷಷ್ಠಿ ಮಹೋತ್ಸವವು ದಿನಾಂಕ 28-12 -2022 ರಂದು ಜರಗಲಿದೆ. ದಿನಾಂಕ 21-11-2022 ರಿಂದ 23-11-2022ರ ವರೇಗೆ ಭಕ್ತಾದಿಗಳು ಒಪ್ಪಿಸುವ ಹಸಿರು ಕಾಣಿಕೆಗಳನ್ನು ಕೃತಜ್ಞತಾಪೂರ್ವಕವಾಗಿ ಸ್ವೀಕರಿಸಲಾಗುತ್ತದೆ.

kn_dk_
ಸೇವಗಳ ವಿವಿರ

ಸೇವೆಗಳ ವಿವರ: ಮಹಾರಥೋತ್ಸವ ರೂ.25,000-00, ಚಿಕ್ಕ ರಥೋತ್ಸವ ರೂ. 8,000, ಚಂದ್ರಮಂಡಲ ಉತ್ಸವ ರೂ.6,000, ಹೂವಿನ ತೇರಿನ ಉತ್ಸವ ರೂ.5,000, ಬಂಡಿ ಉತ್ಸವ ರೂ.3,000, ಮಹಾಭಿಷೇಕ ರೂ.6,000, ದೀಪಾರಾಧನೆ ಪಾಲಕಿ ಉತ್ಸವ ರೂ.2,500, ಮಹಾಪೂಜೆ ಪಲ್ಲಕಿ ಉತ್ಸವ ರೂ.1,500-00, ಸಪರಿವಾರ ಸೇವಾ ರೂ.2,000, ನಾಗಪ್ರತಿಷ್ಠೆ ರೂ.400, ಆಶ್ಲೇಷ ಬಲಿ ರೂ.400, ಮಹಾಪೂಜೆ (ಇಡೀ ದಿನದ್ದು) ರೂ.400, ಮಹಾಪೂಜೆ (ಮಧ್ಯಾಹ್ನ)ರೂ.250, ಪಂಚಾಮೃತ ಅಭಿಷೇಕ ರೂ.75, ರುದ್ರಾಭಿಷೇಕ ರೂ.75, ಕ್ಷೀರಾಭಿಷೇಕ ರೂ.50, ಶೇಷ ಸೇವೆ ರೂ.100, ಹರಿವಾಣ ನೈವೇದ್ಯ ರೂ.100, ಕಾರ್ತಿಕ ಪೂಜೆ ರೂ.50, ಪಂಚಕಜ್ಜಾಯ ರೂ.20, ಲಾಡು ಪ್ರಸಾದ ರೂ.20, ತೀರ್ಥ ಬಾಟ್ಲೀ ರೂ. 8. ನಿಗದಿಪಡಿಸಲಾಗಿದೆ. ಅಂಚೆ ಮೂಲಕವೂ ಪ್ರಸಾದ ಕಳುಹಿಸುವ ವ್ಯವಸ್ಥೆ ಮಾಡಲಾಗಿದೆ.

ಇದನ್ನೂ ಓದಿ: ಕಾರವಾರದಲ್ಲೊಂದು ವಿಭಿನ್ನ ಬಲೂನ್ ಜಾತ್ರೆ: ಬಿಸಿ ಗಾಳಿಯಲ್ಲಿ ತೇಲಾಡುವ ಬೃಹತ್ ಬಲೂನ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.