ಸುಬ್ರಹ್ಮಣ್ಯ: ಕರ್ನಾಟಕದಲ್ಲಿ ಅತ್ಯಧಿಕ ಆದಾಯ ಗಳಿಸುವ ಪುಣ್ಯ ಕ್ಷೇತ್ರಗಳಲ್ಲಿ ಒಂದಾದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನವು ಈ ವರ್ಷ 68 ಕೋಟಿ ರೂ. ಆದಾಯ ಗಳಿಸಿದೆ.
ದೇವಸ್ಥಾನವು 2020-21 ಸಾಲಿನಲ್ಲಿ 68,94,88,039 ರೂಪಾಯಿ ಆದಾಯ ಗಳಿಸಿದೆ. ಪ್ರಸಕ್ತ ಸಾಲಿನಲ್ಲಿ 33,88,01,849 ರೂ ಖರ್ಚಾಗಿರುವುದಾಗಿ ವರದಿಯಾಗಿದೆ.
2019-20ನೇ ಸಾಲಿನಲ್ಲಿ 98 ಕೋಟಿ ರೂ.ಗಿಂತಲೂ ಹೆಚ್ಚು ಆದಾಯ ಸಂಗ್ರಹವಾಗಿತ್ತು. ಈ ವರ್ಷ 68 ಕೋಟಿ ರೂ.ಗೆ ಇಳಿಮುಖವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ 30 ಕೋಟಿ ರೂ ಕಡಿಮೆ ಆದಾಯ ಬಂದಿದೆ.
ಕೊರೊನಾ, ಅತಿವೃಷ್ಠಿ ಹಾಗೂ ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಡೆಯುತ್ತಿರುವ ಮಾಸ್ಟರ್ ಪ್ಲಾನ್ ಕಾಮಗಾರಿ ಹಿನ್ನೆಲೆಯಲ್ಲಿ ಆದಾಯ ಕುಂಠಿತವಾಗಿದೆ ಎನ್ನಲಾಗಿದೆ.
ಇದನ್ನೂ ಓದಿ: ಈ ದೇವಾಲಯದ ಆದಾಯದಲ್ಲಿ ಗಳಿಕೆ ಕಡಿಮೆ ಇದ್ದರೂ ಮುಜುರಾಯಿ ಇಲಾಖೆಯಲ್ಲಿ ನಂ.1 ಸ್ಥಾನ