ETV Bharat / state

ಅತ್ಯಾಚಾರ ಆರೋಪಿಯನ್ನು ಗಡಿಪಾರು ಮಾಡುವಂತೆ ವಿಎಚ್‍ಪಿ, ಬಜರಂಗದಳ ಆಗ್ರಹ

author img

By

Published : Dec 11, 2019, 6:33 PM IST

ಕೆಯ್ಯೂರಿನಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಆರೋಪಿಗೆ ಗಡಿಪಾರಿನಂತಹ ಉಗ್ರ ಶಿಕ್ಷೆ ನೀಡುವಂತೆ ಆಗ್ರಹಿಸಿ ವಿಎಚ್‍ಪಿ ಮತ್ತು ಬಜರಂಗದಳ ವತಿಯಿಂದ ವಿಧಾನಸೌಧ ಮುಂಭಾಗದ ಸಾಂಕೇತಿಕ ಪ್ರತಿಭಟನೆ ನಡೆಸಿದ್ದು, ಇಂತಹ ವ್ಯಕ್ತಿಗಳಿಗೆ ಗಡೀಪಾರಿನಂತಹ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿದರು.

ವಿಎಚ್‍ಪಿ, ಬಜರಂಗದಳ ಪ್ರತಿಭಟನೆ
VHP and Bajrang Dal protest

ಪುತ್ತೂರು: ಕೆಯ್ಯೂರಿನಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಆರೋಪಿಯನ್ನು ಗಡಿಪಾರು ಮಾಡಬೇಕು ಎಂದು ಆಗ್ರಹಿಸಿ ವಿಎಚ್‍ಪಿ ಮತ್ತು ಬಜರಂಗದಳ ವತಿಯಿಂದ ವಿಧಾನಸೌಧ ಮುಂಭಾಗದ ಸಾಂಕೇತಿಕ ಪ್ರತಿಭಟನೆ ನಡೆಯಿತು.

ಆರೋಪಿಗೆ ಗಡೀಪಾರು ಶಿಕ್ಷೆಗೆ ಆಗ್ರಹಿಸಿ ವಿಎಚ್‍ಪಿ, ಬಜರಂಗದಳ ಪ್ರತಿಭಟನೆ

ಇಂದು ಪುತ್ತೂರು ಮಿನಿವಿಧಾನಸೌಧದ ಮುಂಭಾಗದಲ್ಲಿ ವಿಎಚ್‍ಪಿ ಮತ್ತು ಬಜರಂಗದಳ ವತಿಯಿಂದ ನೂರಾರು ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಇನ್ನು ಪ್ರತಿಭಟನೆಯಲ್ಲಿ ವಿಶ್ವ ಹಿಂದೂ ಪರಿಷತ್ ಪುತ್ತೂರು ಪ್ರಖಂಡ ಅಧ್ಯಕ್ಷ ಜನಾರ್ದನ ಬೆಟ್ಟ ಮಾತನಾಡಿ, ಕೆಯ್ಯೂರು ಗ್ರಾಮದಲ್ಲಿ ಮನೆಗೆ ನುಗ್ಗಿ ಅಪ್ರಾಪ್ತ ಬಾಲಕಿಯ ಅತ್ಯಾಚಾರಕ್ಕೆ ಯತ್ನಿಸಿದ ಆರೋಪಿಗೆ ಉಗ್ರ ಶಿಕ್ಷೆ ನೀಡಬೇಕು. ಕಾನೂನು ಹಿಡಿತದಿಂದ ತಪ್ಪಿಸಿಕೊಳ್ಳುವ ಇಂತಹ ವ್ಯಕ್ತಿಗಳಿಗೆ ಗಡಿಪಾರಿನಂತಹ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ವಿಶ್ವಹಿಂದೂ ಪರಿಷತ್ತಿನ ಜಿಲ್ಲಾ ಕಾರ್ಯದರ್ಶಿ ಸತೀಶ್ ಬಿ.ಎಸ್, ಬಜರಂಗದಳ ಪುತ್ತೂರು ಪ್ರಖಂಡದ ಅಧ್ಯಕ್ಷ ಹರೀಶ್ ಕುಮಾರ್ ದೋಳ್ಪಾಡಿ, ಸಾಪ್ತಾಹಿಕ ಪ್ರಮುಖ್ ವಿಶಾಖ್ ರೈ, ವಿಶ್ವಹಿಂದೂ ಪರಿಷತ್ ಕೆಯ್ಯೂರು ಘಟಕದ ಅಧ್ಯಕ್ಷ ಚರಣ್ ಸಣಂಗಲ, ಬಜರಂಗದಳ ಕೆಯ್ಯೂರು ಘಟಕದ ಉದಯ ಕೆಯ್ಯೂರು, ಸಂತೋಷ್ ಬೆಟ್ಟಂಪಾಡಿ ಮತ್ತಿತರರು ಭಾಗವಹಿಸಿದ್ದರು.

Intro:Body:ಕೆಯ್ಯೂರು ಅಪ್ರಾಪ್ತ ಬಾಲಕಿ ಅತ್ಯಾಚಾರ ಯತ್ನ ಪ್ರಕರಣ
`ಆರೋಪಿಗೆ ಗಡೀಪಾರು ಶಿಕ್ಷೆ' ವಿಎಚ್‍ಪಿ ಬಜರಂಗದಳ ಆಗ್ರಹ
ಪುತ್ತೂರು; ಕೆಯ್ಯೂರಿನಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಆರೋಪಿಗೆ ಗಡೀಪಾರಿನಂತಹ ಉಗ್ರಶಿಕ್ಷೆ ನೀಡುವಂತೆ ಆಗ್ರಹಿಸಿ ವಿಎಚ್‍ಪಿ ಮತ್ತು ಬಜರಂಗದಳ ವತಿಯಿಂದ ವಿಧಾನಸೌಧ ಮುಂಭಾಗದ ಸಾಂಕೇತಿಕ ಪ್ರತಿಭಟನೆ ನಡೆಯಿತು.
ಕೆಯ್ಯೂರು ಗ್ರಾಮದಲ್ಲಿ ಮನೆಗೆ ನುಗ್ಗಿ ಅಪ್ರಾಪ್ತ ಬಾಲಕಿಯ ಅತ್ಯಾಚಾರಕ್ಕೆ ಯತ್ನಿಸಿದ ಆರೋಪಿಗೆ ಉಗ್ರಶಿಕ್ಷೆ ನೀಡಬೇಕು. ಕಾನೂನು ಹಿಡಿತದಿಂದ ತಪ್ಪಿಸಿಕೊಳ್ಳುವ ಇಂತಹ ವ್ಯಕ್ತಿಗಳಿಗೆ ಗಡೀಪಾರು ಶಿಕ್ಷೆ ವಿಧಿಸಬೇಕು ಎಂದು ವಿಶ್ವಹಿಂದೂ ಪರಿಷತ್ ಪುತ್ತೂರು ಪ್ರಖಂಡದ ಅಧ್ಯಕ್ಷ ಜನಾರ್ಧನ ಬೆಟ್ಟ ಆಗ್ರಹಿಸಿದರು.
ಪುತ್ತೂರು ಮಿನಿವಿಧಾನಸೌಧದ ಮುಂಭಾಗದಲ್ಲಿ ಬುಧವಾರ ವಿಎಚ್‍ಪಿ ಮತ್ತು ಬಜರಂಗದಳ ವತಿಯಿಂದ ನಡೆದ ಸಾಂಕೇತಿಕ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ಕೆಯ್ಯೂರು ಪ್ರಕರಣದ ಆರೋಪಿ ಮಾದಕದ್ರವ್ಯದ ವ್ಯಸನಿಯಾಗಿದ್ದು, ಬಡ ಕುಟುಂಬದ ಮನೆಗೆ ನುಗ್ಗಿ ಅತ್ಯಾಚಾರ ಪ್ರಯತ್ನ ಮಾಡಿದ್ದಾನೆ. ಸೂಕ್ತ ಶಿಕ್ಷೆಯಾಗದಿದ್ದರೆ ಆತನ ಇಂತಹ ಕೃತ್ಯಗಳು ಪುನರಾವರ್ತನೆಯಾಗುತ್ತದೆ. ಅತ್ಯಾಚಾರದ ಆರೋಪಿಗಳನ್ನು ಎನ್‍ಕೌಂಟರ್ ಮಾಡಿದರೂ ನಾಡಿನಲ್ಲಿ ಮತ್ತೆ ಮತ್ತೆ ಇಂತಹ ಕೃತ್ಯಗಳು ನಡೆಯುತ್ತಿವೆ. ಹಾಗಾಗಿ ಇಂತಹ ಮನೋಸ್ಥಿತಿಯ ವ್ಯಕ್ತಿಗಳಿಗೆ ಭಯ ಹುಟ್ಟಿಸುವ ಶಿಕ್ಷೆ ನೀಡಬೇಕು ಎಂದ ಅವರು ವಿಎಚ್‍ಪಿ ಮತ್ತು ಬಜರಂಗದಳ ಈ ಘಟನೆಯನ್ನು ತೀವ್ರವಾಗಿ ಖಂಡಿಸುತ್ತದೆ ಎಂದರು.
ಜಿಲ್ಲಾಧ್ಯಕ್ಷ ಡಾ.ಕೃಷ್ಣಪ್ರಸನ್ನ ಮಾತನಾಡಿ, ಕಾನೂನಿನ ಲೋಪದಿಂದ ಇಂತಹ ಪ್ರಕರಣಗಳು ಮರುಕಳಿಸುತ್ತಿದೆ. ಅಪ್ರಾಪ್ತೆಯ ಅತ್ಯಾಚಾರಕ್ಕೆ ಯತ್ನಿಸಿದ ಆರೋಪಿಯ ಮೇಲೆ ಕಠಿನ ಕ್ರಮಕೈಗೊಳ್ಳಬೇಕು. ಯಾವೂದೇ ಕಾರಣಕ್ಕೂ ಆರೋಪಿಯನ್ನು ಜಾಮೀನಿನಲ್ಲಿ ಬಿಡುಗಡೆ ಮಾಡಬಾರದು. ಆತನಿಗೆ ಉಗ್ರ ಶಿಕ್ಷೆ ನೀಡುವ ಮೂಲಕ ಸಮಾಜಕ್ಕೆ ಎಚ್ಚರಿಕೆಯ ಸಂದೇಶ ರವಾಣೆಯಾಗುವಂತೆ ಜಿಲ್ಲಾಡಳಿತ, ಪೆÇಲೀಸ್ ಇಲಾಖೆ ಕ್ರಮಕೈಗೊಳ್ಳುವಂತೆ ಆಗ್ರಹಿಸಿದ ಅವರು ಕೆಯ್ಯೂರಿನ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಆರೋಪಿಯನ್ನು ತಕ್ಷಣ ಬಂಧಿಸಿದ ಪೊಲೀಸರನ್ನು ಅಭಿನಂದಿಸಿದರು.
ಕೆಯ್ಯೂರು ಗ್ರಾಮದಲ್ಲಿರುವ ಮನೆಗೆ ನುಗ್ಗಿ ಅತ್ಯಾಚಾರಕ್ಕೆ ಯತ್ನಿಸಿದ ಆರೋಪಿಗೆ ಕಠಿಣ ಶಿಕ್ಷೆ ನೀಡುವಂತೆ ಆಗ್ರಹಿಸಿ ವಿಶ್ವಹಿಂದು ಪರಿಷತ್ ಹಾಗೂ ಬಜರಂಗದಳ ವತಿಯಿಂದ ಪುತ್ತೂರು ಉಪವಿಭಾಗಾಧಿಕಾರಿ ಅವರಿಗೆ ಮನವಿ ಸಲ್ಲಿಸಲಾಯಿತು.
ವಿಶ್ವಹಿಂದು ಪರಿಷತ್ತಿನ ಜಿಲ್ಲಾ ಕಾರ್ಯದರ್ಶಿ ಸತೀಶ್ ಬಿ.ಎಸ್, ಬಜರಂಗದಳ ಪುತ್ತೂರು ಪ್ರಖಂಡದ ಅಧ್ಯಕ್ಷ ಹರೀಶ್ ಕುಮಾರ್ ದೋಳ್ಪಾಡಿ, ಸಾಪ್ತಾಹಿಕ ಪ್ರಮುಖ್ ವಿಶಾಖ್ ರೈ, ವಿಶ್ವಹಿಂದು ಪರಿಷತ್ ಕೆಯ್ಯೂರು ಘಟಕದ ಅಧ್ಯಕ್ಷ ಚರಣ್ ಸಣಂಗಲ, ಬಜರಂಗದಳ ಕೆಯ್ಯೂರು ಘಟಕದ ಉದಯ ಕೆಯ್ಯೂರು, ಸಂತೋಷ್ ಬೆಟ್ಟಂಪಾಡಿ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.Conclusion:

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.