ETV Bharat / state

ಲಕ್ಷ್ಮೀಶ ತೋಳ್ಪಾಡಿ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

ಹಿರಿಯ ಚಿಂತಕ ಲಕ್ಷ್ಮೀಶ ತೋಳ್ಪಾಡಿಯವರ ಪ್ರಬಂಧ ಕೃತಿಗೆ ಈ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ.

ಲಕ್ಷ್ಮೀಶ ತೋಳ್ಪಾಡಿ
ಲಕ್ಷ್ಮೀಶ ತೋಳ್ಪಾಡಿ
author img

By ETV Bharat Karnataka Team

Published : Dec 20, 2023, 10:13 PM IST

ಮಂಗಳೂರು: ಹಿರಿಯ ಚಿಂತಕ, ಲೇಖಕ, ವಾಗ್ಮಿ ಲಕ್ಷ್ಮೀಶ ತೋಳ್ಪಾಡಿ ಅವರಿಗೆ ಈ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಘೋಷಣೆಯಾಗಿದೆ. ಇವರ 'ಮಹಾಭಾರತ ಅನುಸಂಧಾನದ ಭಾರತಯಾತ್ರೆ' ಎಂಬ ಪ್ರಬಂಧ ಕೃತಿಗೆ ಪ್ರಶಸ್ತಿ ಸಂದಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಶಾಂತಿಗೋಡು ಗ್ರಾಮದವರಾದ ಲಕ್ಷ್ಮೀಶ ತೋಳ್ಪಾಡಿಯವರದ್ದು ಸಂತನಂತಹ ಬದುಕು. ಸದಾ ಆಧ್ಯಾತ್ಮಿಕ ಚಿಂತನೆ ಹೊಂದಿರುವವರು. ಜೊತೆಗೊಂದಿಷ್ಟು ಬರಹ, ಮಾತು, ಮೌನ ಎಲ್ಲವನ್ನೂ ಒಳಗಿಟ್ಟುಕೊಂಡವರು. ಇವರು ಬರೆದಿರುವ ಅನೇಕ ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಭಗವದ್ಗೀತೆಯ ಬಗೆಗಿನ 'ಮಹಾಯುದ್ಧಕ್ಕೆ ಮುನ್ನ' ತೋಳ್ಪಾಡಿಯವರ ಮೊದಲ ಪ್ರಕಟಿತ ಕೃತಿ.

ಅಂತರ್ಜಾಲ ಪತ್ರಿಕೆ ಕೆಂಡ ಸಂಪಿಗೆಯಲ್ಲಿ ಭಾಗವತದ ಬಗ್ಗೆ ಬರೆದ ಸರಣಿ ಬರಹಗಳ ಸಂಕಲನ 'ಸಂಪಿಗೆ ಭಾಗವತ'ಕ್ಕೆ ಬಹಳಷ್ಟು ಮೆಚ್ಚುಗೆ ವ್ಯಕ್ತವಾಗಿತ್ತು. ಬಳಿಕ ಪುಸ್ತಕವಾಗಿಯೂ ಈ ಬರಹ ಪ್ರಕಟವಾಗಿದೆ. ಅಲ್ಲದೆ 'ಬೆಟ್ಟ ಮಹಮದನ ಬಳಿಗೆ ಬಾರದಿದ್ದರೆ', 'ಭವ ತಲ್ಲಣ' (ತಾಳಮದ್ದಲೆ ಕುರಿತು), 'ಆನಂದಲಹರೀ' (ಸೌಂದರ್ಯಲಹರಿಯ ಪೂರ್ವಭಾಗ), 'ಭಕ್ತಿಯ ನೆಪದಲ್ಲಿ' ಕೃತಿಗಳು ಪ್ರಕಟವಾಗಿವೆ. ಇವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ.

ಇದನ್ನೂ ಓದಿ: ಸಾಹಿತಿ ಮೂಡ್ನಾಕೂಡು ಚಿನ್ನಸ್ವಾಮಿ, ಪದ್ಮರಾಜ ದಂಡಾವತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.