ಮಂಗಳೂರು: ಕೆಂಪೇಗೌಡರಲ್ಲಿದ್ದ ದೂರದೃಷ್ಟಿಯೇ ಈಗಿನ ಬೆಂಗಳೂರು ಅಭಿವೃದ್ಧಿಗೆ ಕಾರಣವೆಂದು ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ಅಭಿಪ್ರಾಯಟ್ಟಿದ್ದಾರೆ.
ದ.ಕ. ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಒಕ್ಕಲಿಗರ ಯಾನೆ ಗೌಡರ ಸೇವಾ ಸಂಘದ ವತಿಯಿಂದ ಮಂಗಳೂರು ವಿವಿಯಲ್ಲಿ ನಡೆದ ನಾಡಪ್ರಭು ಕೆಂಪೇಗೌಡ ಜಯಂತಿಯಲ್ಲಿ ಅವರು ಮಾತನಾಡಿದರು. ಇಂದು ಬೆಂಗಳೂರಿನಲ್ಲಿರುವ ವೃತ್ತಿ ಆಧಾರಿತವಾದ ಅಕ್ಕಿಪೇಟೆ, ಬಳೇಪೇಟೆ, ಚಿಕ್ಕಪೇಟೆ ಇವೆಲ್ಲವೂ ಕೆಂಪೇಗೌಡರ ದೂರದೃಷ್ಟಿಯ ಉದಾಹರಣೆ. ಅಲ್ಲದೆ ಬೆಂಗಳೂರು ಬಹಳ ಎತ್ತರವಾದ ಪ್ರದೇಶದಲ್ಲಿದ್ದು, ಕೆಳಗಿನಿಂದ ನೀರು ಸರಬರಾಜು ಮಾಡಲು ಕಷ್ಟ ಎಂಬ ಕಾರಣಕ್ಕೆ ಅಲ್ಲಲ್ಲಿ ಬಹಳಷ್ಟು ಕೆರೆಗಳ ನಿರ್ಮಾಣ ಮಾಡಿ ಬೆಂಗಳೂರನ್ನು ಕೆರೆಗಳ ನಗರವನ್ನಾಗಿ ಮಾಡಿದ್ದು ಕೆಂಪೇಗೌಡರ ಆಲೋಚನೆಯಿಂದಲೇ ಎಂದರು.