ETV Bharat / state

ಹತ ಕಾರ್ತಿಕ್‌ನ ಸಾಮಾಜಿಕ ನಿಷ್ಠೆ, ಬದ್ಧತೆ ಎಲ್ಲರಿಗೂ ಸ್ಫೂರ್ತಿ: ಜಗದೀಶ್ ಕಾರಂತ್ ಹೇಳಿಕೆ - Puttur

ಸಾರ್ವಜನಿಕ ಬಸ್ ತಂಗುದಾಣವನ್ನು ಹಿಂದೂ ಜಾಗರಣಾ ವೇದಿಕೆ ಕ್ಷೇತ್ರಿಯ ಸಂಪರ್ಕ ಮುಖಂಡ ಜಗದೀಶ್ ಕಾರಂತ್ ಅವರ ಉಪಸ್ಥಿತಿಯಲ್ಲಿ ಸೆ.3 ರಂದು ಬೆಳಿಗ್ಗೆ ಕಾರ್ತಿಕ್ ಮೇರ್ಲ ಅವರ ತಂದೆ ರಮೇಶ್ ಸುವರ್ಣ, ತಾಯಿ ಹೇಮಾವತಿ ಅವರು ಲೋಕಾರ್ಪಣೆ ಮಾಡಿದರು.

Puttur
ಸಾರ್ವಜನಿಕ ಬಸ್ ತಂಗುದಾಣ
author img

By

Published : Sep 3, 2020, 8:27 PM IST

ಪುತ್ತೂರು: ದುಷ್ಕರ್ಮಿಗಳಿಂದ ಹತ್ಯೆಗೀಡಾದ ಹಿಂದೂ ಜಾಗರಣಾ ವೇದಿಕೆ ಪುತ್ತೂರು ತಾಲೂಕು ಕಾರ್ಯದರ್ಶಿಯಾಗಿದ್ದ ದಿ.ಕಾರ್ತಿಕ್ ಮೇರ್ಲ ಅವರ ಸ್ಮರಣಾರ್ಥ, ಪುತ್ತೂರು ಗ್ರಾಮಾಂತರದ ಸಂಪ್ಯ ಪೊಲೀಸ್ ಠಾಣೆಯ ಬಳಿ ನಿರ್ಮಾಣವಾದ ಸಾರ್ವಜನಿಕ ಬಸ್ ತಂಗುದಾಣವನ್ನು ಹಿಂದೂ ಜಾಗರಣಾ ವೇದಿಕೆ ಕ್ಷೇತ್ರಿಯ ಸಂಪರ್ಕ ಮುಖಂಡ ಜಗದೀಶ್ ಕಾರಂತ್ ಅವರ ಉಪಸ್ಥಿತಿಯಲ್ಲಿ ಕಾರ್ತಿಕ್ ಮೇರ್ಲ ಅವರ ತಂದೆ ರಮೇಶ್ ಸುವರ್ಣ, ತಾಯಿ ಹೇಮಾವತಿ ಅವರು ಲೋಕಾರ್ಪಣೆ ಮಾಡಿದರು.

ಸಾರ್ವಜನಿಕ ಬಸ್ ತಂಗುದಾಣವನ್ನು ಕಾರ್ತಿಕ್ ಮೇರ್ಲ ಅವರ ತಂದೆ ರಮೇಶ್ ಸುವರ್ಣ, ತಾಯಿ ಹೇಮಾವತಿ ಅವರು ಲೋಕಾರ್ಪಣೆ ಮಾಡಿದರು.

ಇದೇ ಸಂದರ್ಭದಲ್ಲಿ ಉಚಿತ ಆಯುಷ್ಮಾನ್ ಕಾರ್ಡ್ ಅಭಿಯಾನ ನಡೆಯಿತು. ಬಸ್ ತಂಗುದಾಣವನ್ನು ಲೋಕಾರ್ಪಣೆಗೊಂಡ ಬಳಿಕ ಜಗದೀಶ್ ಕಾರಂತ್ ಅವರು ಮಾತನಾಡಿ, ನಮ್ಮ ಸಾಮಾಜಿಕ ಸಂಘಟನೆಗಳಲ್ಲಿ ಕಾರ್ಯಕರ್ತನೆ ಆಸ್ತಿ ಮತ್ತು ಶಕ್ತಿ. ಅಂತಹ ಶಕ್ತಿಯಾಗಿ ನಮ್ಮೆಲ್ಲರ ಎದುರಿನಲ್ಲಿ ಅತಿ ಕಡಿಮೆ ಅವಧಿಯ ಕಾಲ ಬಾಳಿ ಬದುಕಿ ನಮ್ಮ ಕಣ್ಣು ಎದುರುಗಡೆ ಇಲ್ಲ ಎಂದಾಗಲೂ ತಾಲೂಕಿನ ಜಿಲ್ಲೆಯ ಕಾರ್ಯಕರ್ತರು ಇಲ್ಲಿ ಸೇರಿದ್ದಾರೆ ಎಂದಾದರೆ ಕಾರ್ತಿಕ್‌ನ ಸಾಮಾಜಿಕ ನಿಷ್ಠೆ ಮತು ಕಾರ್ಯದಲ್ಲಿರುವ ಬದ್ಧತೆ ಎಲ್ಲರಿಗೂ ಸ್ಪೂರ್ತಿಯಾಗಿದೆ ಎಂದರು.

ಕಾರ್ತಿಕನ ಕೊರತೆಯನ್ನು ತುಂಬಿಸುವ ಕೆಲಸ ಆತನ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿ:

ಸಹಜವಾಗಿ ಒಬ್ಬ ಸೇನಾಧಿಕಾರಿ ಆಕಸ್ಮಿಕವಾಗಿ ಕಳೆದು ಹೋದರೆ ಅವರ ಹಿಂದಿನ ಸೈನಿಕರು ಎದೆಗುಂದುತ್ತಾರೆ ಎಂಬ ಮಾತಿದೆ. ಆದರೆ ಕಾರ್ತಿಕ್‌ನ ನಂತರವೂ ಕೂಡಾ ಅವನ ಜೊತೆಯಲ್ಲಿದ್ದ ಪ್ರತಿಯೊಬ್ಬ ಕಾರ್ಯಕರ್ತರು ಅವನಿಗೆ ಸರಿಸಾಟಿಯಾಗಿ ಅವನ ಕೊರತೆಯನ್ನು ತುಂಬಿಸುವ ಸಂಕಲ್ಪವನ್ನು ತೊಟ್ಟು ಸಾಮಜಿಕ ಕಾರ್ಯಕ್ಕೆ ತೊಡಗಿಸಿಕೊಂಡಿರುವ ರೀತಿ ಪುತ್ತೂರಿನಲ್ಲಿ ಇದು ಅವನ ವ್ಯಕ್ತಿತ್ವಕಕೆ ಹಿಡಿದ ಕನ್ನಡಿ ಎಂದು ಜಗದೀಶ್ ಕಾರಂತ್ ಹೇಳಿದರು.

ಉಚಿತ ಆಯುಷ್ಮಾನ್ ಕಾರ್ಡ್ ವಿತರಣೆ:
ಕಾರ್ತಿಕ್ ಮೇರ್ಲ ಸ್ಮರಣಾರ್ಥ ಸಾರ್ವಜನಿಕ ಬಸ್ ತಂಗುದಾಣ ಉದ್ಘಾಟನೆಯ ಜೊತೆಗೆ ಉಚಿತ ಆಯುಷ್ಮಾನ್ ಕಾರ್ಡ್ ಯೋಜನೆ ರೂಪಿಸಲಾಗಿದ್ದು, ಸುಮಾರು 300ಕ್ಕೂ ಅಧಿಕ ಮಂದಿ ಉಚಿತ ಆಯುಷ್ಮಾನ್ ಕಾರ್ಡ್ ಮಾಡಿಸಿಕೊಂಡರು. ಕಾರ್ತಿಕ್ ಮೇರ್ಲ ಅವರ ತಂದೆ ರಮೇಶ್ ಸುವರ್ಣ ಅವರು ಸಾಂಕೇತಿಕವಾಗಿ ಫಲಾನುಭವಿಗಳಿಗೆ ಆಯುಷ್ಮಾನ್ ಕಾರ್ಡ್ ವಿತರಿಸಿದರು.

ಈ ಸಂದರ್ಭದಲ್ಲಿ ತಾ.ಪಂ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ತಾ.ಪಂ ಸ್ಥಾಯಿ ಸಮಿತಿ ಅಧ್ಯಕ್ಷರಾಗಿರುವ ಬಿಜೆಪಿ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಬಿಜೆಪಿ ನಗರ ಮಂಡಲದ ಅಧ್ಯಕ್ಷರಾಗಿರುವ ನಗರಸಭಾ ಸದಸ್ಯ ಪಿ.ಜಿ.ಜಗನ್ನಿವಾಸ ರಾವ್, ಕಾರ್ಯದರ್ಶಿ ಅಮಿತ್, ಹಿಂದೂ ಜಾಗರಣ ವೇದಿಕೆಯ ಚಿನ್ಮಯ್ ರೈ ಮತ್ತಿತ್ತರರು ಉಪಸ್ಥಿತರಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.