ಮಂಗಳೂರು: ಇಂದು ಬೆಳಗ್ಗೆ ಆರು ಗಂಟೆಯಿಂದ ಸಡಿಲಿಕೆಗೊಂಡಿದ್ದ ಕರ್ಫ್ಯೂ ಸಂಜೆ ಆರು ಗಂಟೆಯಿಂದ ನಾಳೆ ಬೆಳಗ್ಗೆ ಆರು ಗಂಟೆಯವರೆಗೆ ಮತ್ತೆ ಮುಂದುವರಿಯಲಿದೆ.
ವ್ಯಾಪಾರಿಗಳು ಐದು ಗಂಟೆಯಿಂದಲೇ ತಮ್ಮ ವ್ಯಾಪಾರವನ್ನು ಸ್ಥಗಿತಗೊಳಿಸುತ್ತಿರುವುದರಿಂದ ಅಂಗಡಿ-ಮುಗ್ಗಟ್ಟುಗಳು ಸಂಜೆ ಆರು ಗಂಟೆಯಾಗುತ್ತಲೇ ಮುಚ್ಚಲ್ಪಟ್ಟವು. ಇನ್ನೂ ಮುಚ್ಚದ ಅಂಗಡಿಗಳಿಗೆ ಪೊಲೀಸರೇ ತೆರಳಿ ಮುಚ್ಚುವಂತೆ ಸೂಚನೆ ನೀಡಿದರು. ಕರ್ಫ್ಯೂ ಹಿನ್ನೆಲೆಯಲ್ಲಿ ಬಸ್ಗಳು, ಆಟೋಗಳ ಸಂಚಾರ, ಜನ ಸಂಚಾರವೂ ಕಡಿಮೆಯಾಗಿತ್ತು.
ಪೊಲೀಸರು, ಗೃಹ ರಕ್ಷಕ ದಳದ ಸಿಬ್ಬಂದಿ, ಸಿಆರ್ಪಿ ತುಕಡಿ ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಸಾಕಷ್ಟು ಪ್ರಮಾಣದಲ್ಲಿ ನಿಯೋಜನೆಗೊಂಡಿದ್ದು, ಜನರನ್ನು ಆದಷ್ಟು ಬೇಗನೆ ಮನೆ ಕಡೆಗೆ ತೆರಳುವಂತೆ ಮುನ್ಸೂಚನೆಯನ್ನು ಪೊಲೀಸರು ವಾಹನಗಳ ಮೂಲಕ ತಿಳಿಸುತ್ತ ಸಂಚರಿಸುವ ದೃಶ್ಯವೂ ಕಂಡು ಬಂದಿತು.