ETV Bharat / state

ಜಾತಿ ಕಾರಣಕ್ಕಾಗಿ ಕೀಳಾಗಿ ಕಾಣ್ತಿದ್ದರು, ಬೇರೆಯವರ ಸಿನೆಮಾದಲ್ಲಿ ನಟಿಸಿದ್ದಕ್ಕೆ ಆಪಾದನೆ: ಶ್ರೀನಿವಾಸ ಗೌಡ - kambala fame shrinivas gowda press meet in manglore

ಕಂಬಳದ ಉಸೇನ್ ಬೋಲ್ಟ್ ಖ್ಯಾತಿಯ ಶ್ರೀನಿವಾಸ ಗೌಡ ಅವರು ಕಂಬಳ ಜಿಲ್ಲಾ ಸಮಿತಿ ಸದಸ್ಯ ಲೋಕೇಶ್ ಶೆಟ್ಟಿ ನನ್ನ ಜಾತಿಯ ಕಾರಣಕ್ಕೆ ಕೀಳಾಗಿ ಕಾಣುತ್ತಿದ್ದರು ಎಂದು ಗಂಭೀರ ಆರೋಪ ಮಾಡಿದ್ದಾರೆ.

kambala-fame-shrinivas-gowda-press-meet-in-manglore
ಜಾತಿಯ ಕಾರಣಕ್ಕಾಗಿ ಕೀಳಾಗಿ ಕಾಣುತ್ತಿದ್ದರು, ಅವರ ಸಿನಿಮಾ ಬಿಟ್ಟು ಬೇರೆ ಸಿನೆಮಾದಲ್ಲಿ ನಟಿಸಿದ್ದಕ್ಕೆ ಆಪಾದನೆ: ಶ್ರೀನಿವಾಸ ಗೌಡ
author img

By

Published : Jul 23, 2022, 4:03 PM IST

ಮಂಗಳೂರು: ಕಂಬಳದ ಉಸೇನ್ ಬೋಲ್ಟ್ ಖ್ಯಾತಿಯ ಶ್ರೀನಿವಾಸ ಗೌಡ ವಿರುದ್ಧ ಕಂಬಳ ಜಿಲ್ಲಾ ಸಮಿತಿ ಸದಸ್ಯ ಲೋಕೇಶ್ ಶೆಟ್ಟಿ ಮಾಡಿದ ಆಪಾದನೆಗೆ ಶ್ರೀನಿವಾಸ ಗೌಡ ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಗಂಭೀರ ಆರೋಪ ಮಾಡಿದ್ದಾರೆ.

ಜಾತಿಯ ಕಾರಣಕ್ಕಾಗಿ ಕೀಳಾಗಿ ಕಾಣುತ್ತಿದ್ದರು, ಅವರ ಸಿನಿಮಾ ಬಿಟ್ಟು ಬೇರೆ ಸಿನೆಮಾದಲ್ಲಿ ನಟಿಸಿದ್ದಕ್ಕೆ ಆಪಾದನೆ: ಶ್ರೀನಿವಾಸ ಗೌಡ

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ನಾನು ಕುಡುಬಿ ಜಾತಿಗೆ ಸೇರಿದವನಾಗಿದ್ದು, ನನ್ನನ್ನು ಲೋಕೇಶ್ ಶೆಟ್ಟಿ ಅವರು ಕೀಳಾಗಿ ಕಾಣುತ್ತಿದ್ದರು‌. ಅವರು ಒಂದು ಸಿನಿಮಾ ಮಾಡುವುದಾಗಿ ತಿಳಿಸಿ ನನ್ನಲ್ಲಿ ಪಾತ್ರ ಮಾಡುವಂತೆ ತಿಳಿಸಿದ್ದರು. ಅವರ ಹಿನ್ನೆಲೆ ಗೊತ್ತಿರುವುದರಿಂದ ನಾನು ಪಾತ್ರ ಮಾಡಲು ಒಪ್ಪಿಲ್ಲ.

ಆದರೂ ಅವರು ನನ್ನ ಫೋಟೊ ವನ್ನು ಅನುಮತಿಯಿಲ್ಲದೇ ಪತ್ರಿಕೆಯಲ್ಲಿ ಸಿನಿಮಾದ ಜಾಹೀರಾತು ಪ್ರಕಟಿಸಿದರು. ಬಳಿಕ ನಾನು ರಾಜೇಂದ್ರ ಸಿಂಗ್ ಬಾಬು ಅವರು ನಿರ್ದೇಶಿಸುತ್ತಿರುವ ಬಿರ್ದ್​​ದ ಕಂಬಳ ಸಿನಿಮಾದಲ್ಲಿ ಪಾತ್ರ ನಿರ್ವಹಿಸುತ್ತಿದ್ದೇನೆ. ಈ ಕಾರಣದಿಂದಾಗಿ ಅವರು ನನ್ನ ಮೇಲೆ ಸುಳ್ಳು ಆಪಾದನೆ ಮಾಡಿದ್ದಾರೆ ಎಂದರು.

ನನ್ನ ದಾಖಲೆಯ ಬಗ್ಗೆ ಆರೋಪ ಮಾಡಿರುವ ಲೋಕೇಶ್ ಶೆಟ್ಟಿ ಅವರು ಅದನ್ನು ಸಾಬೀತುಪಡಿಸಲಿ. ನನ್ನ ಗೌರವಕ್ಕೆ ಚ್ಯುತಿ ತಂದ ಅವರ ವಿರುದ್ದ ಮಾನನಷ್ಟ ಮೊಕದ್ದಮ್ಮೆ ದಾಖಲಿಸಲಾಗುವುದು ಎಂದು ಅವರು ಹೇಳಿದರು.

ಓದಿ : ರಾಜಕುಮಾರ್ ‌ಟಾಕಳೆ ನನ್ನನ್ನೇ ಹನಿಟ್ರ್ಯಾಪ್ ಮಾಡಿದ್ದಾನೆ; ಸಾಮಾಜಿಕ ಕಾರ್ಯಕರ್ತೆ ನವ್ಯಶ್ರೀ ಆರೋಪ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.