ETV Bharat / state

ಕಾಲೆಕೋಲವೆಂಬ ಬೊಜ್ಜಕೋಲ: ಮೃತರ ಸದ್ಗತಿಗೆ ಕರಾವಳಿಯಲ್ಲೊಂದು ವಿಶೇಷ ಆಚರಣೆ! - kalekola tradition speciality

ಮೃತರಿಗೆ ಪೂರ್ಣ ಸದ್ಗತಿ ದೊರಕಬೇಕು ಎಂಬ ಉದ್ದೇಶದಿಂದ ಮಾಡುವ ಧಾರ್ಮಿಕ ಆಚರಣೆಯೇ ಕಾಲೆಕೋಲ.‌ ಅದಕ್ಕೆ ಭೂತಾರಾಧನೆಯ ಆಯಾಮವನ್ನು ನೀಡಲಾಗಿದೆ. ಸಾವನ್ನಪ್ಪಿದವರ ಅಥವಾ ಆತನ/ಆಕೆಯ ಆರ್ಥಿಕ ಪರಿಸ್ಥಿತಿಗೆ ತಕ್ಕಂತೆ ಈ ಆಚರಣೆ ನಡೆಯುತ್ತದೆ.

kalekola tradition is come to light again in tulunadu
ಸತ್ತವರ ಸದ್ಗತಿಗೆ ಕಾಲೆಕೋಲ ಆಚರಣೆ
author img

By

Published : Apr 11, 2021, 11:17 AM IST

ಮಂಗಳೂರು: ಬಹಳ ಹಿಂದೆ ಕರಾವಳಿಯಲ್ಲಿ‌ ಆಚರಣೆಯಲ್ಲಿದ್ದ ಕಾಲೆಕೋಲ ಆಧುನಿಕ ಕಾಲಘಟ್ಟದಲ್ಲಿ ಕೂಡ ಜೀವಂತವಿದ್ದು, ಮುಂದುವರಿದುಕೊಂಡು ಬಂದಿದೆ.

ಮೃತರ ಸದ್ಗತಿಗೆ ಕಾಲೆಕೋಲ ಆಚರಣೆ

ಕುಟುಂಬದಲ್ಲಿ ಯಾರಾದರೂ ಹಿರಿಯರು ಮೃತಪಟ್ಟಲ್ಲಿ‌ ಅವರ ಸದ್ಗತಿಗಾಗಿ ಬಹಳ ವಿಜೃಂಭಣೆಯಿಂದ ಬೊಜ್ಜ (ಶ್ರಾದ್ಧ) ಮಾಡಲು‌ ಕಾಲೆಕೋಲವನ್ನು ಮಾಡಲಾಗುತ್ತಿತ್ತು. ಈ ಆಚರಣೆ ಇದೀಗ ಮತ್ತೆ ಬೆಳಕಿಗೆ ಬಂದಿದೆ.

ತುಳುನಾಡಿನಲ್ಲಿ ಮೃತರಿಗೆ ಮೋಕ್ಷ, ಪುನರ್ಜನ್ಮ ಎಂಬ ಕಲ್ಪನೆಯಿಲ್ಲದೆ, ಕೇವಲ ಸದ್ಗತಿ ಎಂಬ ಕಲ್ಪನೆ ಮಾತ್ರವಿದೆ. ಈ ಮೂಲಕ ಮೃತರು ಮತ್ತೆ ಅವರ ಕುಟುಂಬಸ್ಥರೊಂದಿಗೆ ಬಂದು ಬದುಕುತ್ತಾರೆ. ಹಾಗಾಗಿಯೇ ಹಿಂದೆ ಯಾರಾದರೂ ಕುಟುಂಬದ ಹಿರಿಯರು ಮೃತಪಟ್ಟಲ್ಲಿ, ಸಾವನ್ನಪ್ಪಿದವರ ಬೊಜ್ಜದ ದಿನ ಅಂದರೆ 13ನೇ ದಿನ ಬೆಳಗಿನಿಂದ ಮಧ್ಯಾಹ್ನದವರೆಗೆ ಈ ಆಚರಣೆಯನ್ನು ‌ನಡೆಸಲಾಗುತ್ತದೆ. ಕುಟುಂಬಸ್ಥರು ಕಾಲೆಕೋಲ ವೇಷದ ಮೂಲಕ‌ವೇ ತಮ್ಮ ಕುಟುಂಬದ ಮೃತ ಹಿರಿಯ ವ್ಯಕ್ತಿಯನ್ನು ಕಾಣುತ್ತಾರೆ.

ಸಾಮಾನ್ಯವಾಗಿ ಮಕ್ಕಳು, ಯುವಕರು ಮೃತಪಟ್ಟರೆ ಕಾಲೆಕೋಲವನ್ನು ಆಚರಣೆ ಮಾಡೋದಿಲ್ಲ.‌ ಸಾಕಷ್ಟು ವರ್ಷಗಳ ಕಾಲ ಜೀವಿಸಿ ಮರಣ ಹೊಂದಿದ, ಸಾಕಷ್ಟು ಹೆಸರು ಗಳಿಸಿರುವ ಹಿರಿಯರಿಗೆ ಮಾಡಲಾಗುತ್ತದೆ. ಮೃತರಿಗೆ ಪೂರ್ಣ ಸದ್ಗತಿ ದೊರಕಬೇಕು ಎಂಬ ಉದ್ದೇಶದಿಂದ ಮಾಡುವ ಧಾರ್ಮಿಕ ಆಚರಣೆಯೇ ಈ ಕಾಲೆಕೋಲ.‌ ಅದಕ್ಕೆ ಭೂತಾರಾಧನೆಯ ಆಯಾಮವನ್ನು ನೀಡಲಾಗಿದೆ. ಮೃತರ ಅಥವಾ ಆತನ/ಆಕೆಯ ಆರ್ಥಿಕ ಪರಿಸ್ಥಿತಿಯನ್ನು ಹೊಂದಿಕೊಂಡು ಈ ಆಚರಣೆ ನಡೆಯುತ್ತದೆ.

ಕಾಲೆಕೋಲದಲ್ಲಿ ಐದು ವೇಷಧಾರಿಗಳಿದ್ದು, ಮೂರು ಜನರು ಕೋಟಿ-ಚೆನ್ನಯರು ನೇಮಕ್ಕೆ ಸಿದ್ಧವಾಗುವಂತೆ ಚಪ್ಪರಕೊಂಬು ಧರಿಸಿ ವೇಷ ಧರಿಸುತ್ತಾರೆ. ಈ ವೇಷಕ್ಕೆ ಸರಿಯಾದ ಹೆಸರಿಲ್ಲ (ಇದನ್ನು ನಡುಕ್ ಎಡತ್ - ಬಲತ್ ಕಟ್ಟುವ ವೇಷ ಎನ್ನುತ್ತಾರೆ.) ಜೊತೆಗೆ ಕುದುರೆಯ ಮೇಲೆ ಕುಳಿತಂತಿರುವ ಇನ್ನೊಂದು ವೇಷವಿದೆ. ಅಲ್ಲದೆ ಮೈಪೂರ್ತಿ ಕಪ್ಪುಬಳಿದು ಮುಖದಲ್ಲಿ ಅಲ್ಲಲ್ಲಿ ಬಿಳಿಯ ರೇಖೆ ಬಿಡಿಸಿರುವ ಪ್ರೇತವೇ ಕಾಲೆಕೋಲ ವೇಷಧಾರಿ.

ಕಾಲೆಕೋಲ‌ ವೇಷಧಾರಿ ಕೈಯಲ್ಲಿ ಹೂವಿನಿಂದ ಸಿಂಗರಿಸಿರುವ ದೊಣ್ಣೆಯನ್ನು ಹಿಡಿದು ಮನೆಯ ಸುತ್ತ, ಅತ್ತಿತ್ತ ನೋಡಿಕೊಂಡು ಹಿಂದೆ ತಾನು ಇದ್ದ ಸ್ಥಳ ತಮ್ಮ ಕುಟುಂಬಿಕರು, ಮಕ್ಕಳು, ಮೊಮ್ಮಕ್ಕಳನ್ನು ನೆನಪಿಸಿಕೊಂಡು ಅಂದು ಆತ/ಆಕೆ ತನ್ನ ಕುಟುಂಬಸ್ಥರೊಂದಿಗೆ ಸಂವಾದ ನಡೆಸಿ ತಾನು ನಿಮ್ಮನ್ನು ತೊರೆದು ಹೋಗುತ್ತೇನೆ. ನೀವೆಲ್ಲರೂ ಚೆನ್ನಾಗಿ ಬದುಕಿ ಬಾಳಬೇಕು ಎಂದು ಕಾಲೆಕೋಲ ವೇಷ ಆಶೀರ್ವದಿಸುತ್ತದೆ. ಅಲ್ಲದೆ ಕುಟುಂಬಸ್ಥರ ಮನದಲ್ಲಿ ಏನಾದರೂ ಸಂಶಯಗಳಿದ್ದಲ್ಲಿ ದೂರ ಮಾಡುತ್ತದೆ.

ಮಂಗಳೂರು ನಗರದಲ್ಲಿ ಸುಮಾರು 70-75 ವರ್ಷಗಳ ಹಿಂದೆ ನಡೆದ ಈ ಆಚರಣೆ ಬಳಿಕ ನಡೆದೇ ಇಲ್ಲ ಎನ್ನುವಷ್ಟು ವಿರಳಾತಿ ವಿರಳ ಆಚರಣೆ. ಬಜಾಲ್ ಬೀಡು ದಿ.ಬಾಲಕೃಷ್ಣ ಭಂಡಾರಿಯವರ ಪತ್ನಿ ದಿ.ವನಜಾಕ್ಷಿ ಭಂಡಾರಿಯವರು ಮೃತಪಟ್ಟಿದ್ದು, ಅವರು ಸಾವನ್ನಪ್ಪಿದಾಗ ಅವರ ಮಕ್ಕಳು ಕಾಲೆಕೋಲವನ್ನು ಮಾಡಲು ನಿರ್ಧರಿಸಿದ್ದರಂತೆ. ಆದ್ದರಿಂದ ಅವರ ಮನೆ ಬಜಾಲ್ ಬೀಡು 'ಬಾಲಕೃಷ್ಣ ನಿಲಯ'ದಲ್ಲಿ ಕಾಲೆಕೋಲ ನಡೆಯಿತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.